muralidhar 2

ಉದ್ಯಾನವನ ನೋಡಿದೊಡನೆ ಏನೋ ಒಂದು ರೀತಿಯ ಸಂತೋಷ ಉಲ್ಲಾಸ ಉಂಟಾಗುವುದು ಉದ್ಯಾನವನವು ವಿಶಾಲವಾದ ಪ್ರದೇಶದಲ್ಲಿದ್ದು, ಇದರಲ್ಲಿ ನೆರಳನ್ನು ನೀಡುವ ವಿಧ ವಿಧವಾದ ಮರಗಳು, ಕುಡಿಯಲು ಒಳ್ಳೆಯ ನೀರು ಇದ್ದು, ಕುಳಿತುಕೊಳ್ಳಲು ಆಸನಗಳು, ಹಿತಕರವಾದÀ ಗಾಳಿ ಬೀಸುತ್ತಿದ್ದು, ಜೊತೆಗೆ ನೋಡುವ ಕಂಗಳಿಗೆ ಆನಂದ ಕೊಡುವ ಬಗೆ ಬಗೆಯ ಹೂವುಗಳು ಇದ್ದಲ್ಲಿ ಅಂಥಹ ಉದ್ಯಾನವನಗಳು ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತದೆ. ಇನ್ನೂ ದೊಡ್ಡ ದೊಡ್ಡ ಉದ್ಯಾನವನದಲ್ಲಿ ಮಕ್ಕಳಿಗೆ ಆಟ ಪಾಟಗಳು ಆಡಲು, ವಿಧ ವಿಧವಾದ ಪ್ರಾಣಿ ಪಕ್ಷಿಗಳು ಇದ್ದು, ಮಕ್ಕಳು ಆಟವಾಡಲು ಆಟವಾಡುವ ವಸ್ತುಗಳು ಇರುವುದನ್ನು ನೋಡಿದರೆ ಎಂತಹ ಮನುಷ್ಯರೂ ಸಹ ಉಲ್ಲಾಸ ಭರಿತರಾಗಿ ಮನಸ್ಸಿನಲ್ಲಿರುವ ದುಗುಡ ಚಿಂತೆಗಳು ಮಾಯವಾಗುತ್ತದೆ. ಬೆಳಿಗ್ಗೆ ಎದ್ದೊಡನೆ ವಾಕಿಂಗ್ ಎಂದು ಉದ್ಯಾನವನಗಳಲ್ಲಿ ಓಡಾಡಿ ವ್ಯಾಯಾಮ ಮಾಡಿ ಆರೋಗ್ಯವನ್ನು ವೃದ್ದಿಸಿಕೊಳ್ಳುವ ಮಂದಿಯು ಅನೇಕರು ಇದ್ದಾರೆ.

ಉದ್ಯಾನವನ ಇರುವುದೇ ಮನುಷ್ಯನ ಮನಸ್ಸನ್ನು ತಣಿಸಲು ಮತ್ತು ಉಲ್ಲಾಸಗೊಳಿಸಲು ಆದರೆ ಮನುಷ್ಯ ಮತ್ತು ಅವನ ಮನಸ್ಸೇ ಉದ್ಯಾನವನ ಆಗಲು ಹೇಗೆ ಸಾಧ್ಯ ಎಂದರೆ ಆಶ್ಚರ್ಯವಾಗ ಬಹುದಲ್ಲವೇ?

ಮನುಷ್ಯನ ಮನಸ್ಸು ಒಂದು ವಿಶಾಲವಾದ ಉದ್ಯಾನವನದಂತೆ ಇರಬೇಕು ಎಂದು ಅರ್ಥೈಸಿದರೆ, ಮನುಷ್ಯನ ಮನಸ್ಸು ಒಳ್ಳೆಯದು ಇರುತ್ತದೆ ಕೆಟ್ಟದ್ದೂ ಇರುತ್ತದೆ. ಮನುಷ್ಯನೂ ಸಹ ಒಳ್ಳೆಯವರು ಕೆಟ್ಟವರೂ ಇರುತ್ತಾರೆ. ನೋಡಿದಾಗ ಒಳ್ಳೆಯವರಂತೆ ಕಂಡು ಅವರ ಮನಸ್ಸು ಕೂಡ ವಿಶಾಲವಾಗಿ ಹೃದಯ ವೈಶಾಲ್ಯದಿಂದ ಕೂಡಿ, ಒಳ್ಳೆಯದಿದ್ದರೆ, ಒಳ್ಳೆಯ ಉದ್ಯಾನವನನ್ನು ನೋಡಿದಾಕ್ಷಣ ಮನಸ್ಸು ಉಲ್ಲಾಸಗೊಂಡಂತೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ಬಿಸಿಲು ಎಂದು ಬಂದವರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ, ಹಸಿದವರಿಗೆ ಅನ್ನ ನೀಡಿ, ಬಾಯಾರಿದವರಿಗೆ ನೀರನ್ನು ನೀಡಿ ಹಾಗೂ ಕಷ್ಟದಲ್ಲಿದ್ದವರಿಗೆ ಸಹಾಯವನ್ನು ಮಾಡುತ್ತಾ ಮಾನವತೆಯನ್ನು ಮೆರೆಯುತ್ತಾ ಇರುವ ಅಂತಹ ಮನುಷ್ಯನು ಸದಾಕಾಲ ಹಸಿರಿನಿಂದ ಕಂಗೊಳಿಸುವ ಉದ್ಯಾನವನದಂತೆ ಕಾಣುತ್ತಾನೆ. ಉದ್ಯಾನವನಗಳು ದೂರದಿಂದ ನೋಡಲು ಚೆನ್ನಾಗಿದ್ದು, ಒಳಗೆ ಹೋದ ತಕ್ಷಣ ಮುಳ್ಳುಗಿಡಗಳು ಇದ್ದಲ್ಲಿ ಹೋಗುವ ಜನಗಳು ಅಲ್ಲಿ ಒಂದು ಗಳಿಗೆಯೂ ಕುಳಿತುಕೊಳ್ಳದೆ ತಕ್ಷಣ ವಾಪಸ್ ಬರಬಹುದು. ಮನುಷ್ಯನು ಸಹ ನೋಡಿದ ತಕ್ಷಣ ಒಳ್ಳೆಯವರಂತೆ ಕಂಡು ಒಳಗೆ ಕೆಟ್ಟ ಮನಸ್ಸು ಇದ್ದರೆ ಯಾರೂ ಅಂಥವರ ಸಹವಾಸ ಮಾಡುವುದಿಲ್ಲ. ಅಕಸ್ಮಾತ್ ಮಾಡಿದರೂ ಅವರಿಂದ ಬೇಗ ವಿಮುಖರಾಗುವುದುಂಟು. ಒಳ್ಳೆಯ ಮನುಷ್ಯರನ್ನು ಕಂಡರೆ ಅವರಲ್ಲಿ ಅನ್ಯೋನ್ಯತೆ ಬಂದು ಅವರ ಸಹವಾಸ ಮಾಡಬೇಕು ಎಂದು ಎನಿಸುತ್ತದೆ.

RELATED ARTICLES  ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ...

ಮಕ್ಕಳು ಉದ್ಯಾನವನಕ್ಕೆ ಹೋದರೂ ಅವರನ್ನು ಕಡೆಗಣಿಸದಂತೆ ಮಕ್ಕಳು ಆಟವಾಡಲು ಆಟದ ವಸ್ತುಗಳನ್ನು ಇರಿಸಿದರೆ ಮಕ್ಕಳೂ ಸಹ ಸಂತೋಷದಿಂದ ಆಟವಾಡುತ್ತಾ ಕಾಲ ಕಳೆಯುತ್ತಾರೆ. ಮನುಷ್ಯನು ಸಹ ಮಕ್ಕಳು ಎಂದ ತಕ್ಷಣ ಉದಾಸೀನ ತೋರದೆ ಮಕ್ಕಳಿಗೆ ಬೇಕಾಗುವ ಅವಶ್ಯಕತೆ ಗಳನ್ನು ನೀಡಿದ್ದಲ್ಲಿ ಅಂತಹವರನ್ನು ಕಂಡರೆ ಮಕ್ಕಳು ಸಹ ಗೌರವವನ್ನು ಹೊಂದಿರುತ್ತಾರೆ.

RELATED ARTICLES  ಸಂಪಾದನೆ ದೊಡ್ಡದಲ್ಲ ಸದ್ವಿನಿಯೋಗ ದೊಡ್ಡದು

ಸಾಮಾನ್ಯವಾಗಿ ಉದ್ಯಾನವನವು ಸರ್ಕಾರದ್ದೇ ಆಗಿರುತ್ತದೆ. ಖಾಸಗಿಯಾಗಿ ಮನುಷ್ಯರು ತೋಟವನ್ನು ಬೆಳೆಸಬಹುದಷ್ಟೇ. ಅದನ್ನು ನೋಡಿಕೊಳ್ಳಲು ಒಬ್ಬ ಕಾವಲುಗಾರನನ್ನು ನೇಮಿಸಿಕೊಂಡು, ಉದ್ಯಾನವನವನ್ನು ದಿನವೂ ಗುಡಿಸಿ, ಸ್ವಚ್ಛತೆಯನ್ನು ಕಾಪಾಡಿ, ದಿನವೂ ಉದ್ಯಾನವನದ ಮರ ಗಿಡಗಳಿಗೆ ನೀರನ್ನು ಹಾಕಿ, ಅದು ಒಣಗದಂತೆ ನೋಡಿಕೊಂಡು ಹೂ ಮತ್ತು ಗಿಡಗಳನ್ನು ಯಾರೂ ಕೀಳದಂತೆ ಕ್ರಮವಹಿಸಿದರೆ ಅಂತಹ ಉದ್ಯಾನವನವು ಅತಿ ದೀರ್ಘಕಾಲ ಹಸಿರಾಗಿದ್ದು ನೋಡುಗರಿಗೆ ಅತೀವ ಸಂತೋಷವನ್ನು ಸದಾಕಾಲ ನೀಡುವಂತಿರುತ್ತದೆ. ಅಂತಹ ಉದ್ಯಾನವನದಲ್ಲಿ ಯಾರೂ ಸಹ ಅಷ್ಟಾಗಿ ಹೂವು ಗಿಡಗಳನ್ನು ಕೊಯ್ಯವುದಿಲ್ಲ. ಅದಕ್ಕೆ ಅದರ ಕಾವಲುಗಾರನೇ ರಕ್ಷಕನಾಗಿರುತ್ತಾನೆ.

ಮನುಷ್ಯನ ಮನಸ್ಸು ಒಳ್ಳೆಯದು ಇರುತ್ತದೆ ಕೆಟ್ಟದ್ದೂ ಇರುತ್ತದೆ. ಮನುಷ್ಯನಲ್ಲಿ ಕೆಟ್ಟ ಆಲೋಚನೆ ಬಂದರೆ ಅದನ್ನು ಹೊರಹಾಕಿ ಮನಸ್ಸನ್ನು ಸ್ವಚಗೊಳಿಸಿ, ಅಸಹಾಯಕರಿಗೆ ಸಹಾಯವನ್ನು ಮಾಡುತ್ತಿದ್ದರೆ, ದೀರ್ಘಕಾಲ ಒಳ್ಳೆಯವರಾಗಿ ಬಾಳುವೆ ಮಾಡಬಹುದು. ಅಂತಹ ಮನುಷ್ಯರಿಗೆ ಯಾರೂ ಸಹ ಅಷ್ಟಾಗಿ ಕೇಡನ್ನು ಬಯಸುವುದಿಲ್ಲ ಹಾಗೂ ದೇವರೇ ಅಂತಹ ಮನುಷ್ಯರ ಕಾವಲುಗಾರನಾಗಿ ಕಾಯುತ್ತಾ ರಕ್ಷಣೆ ಮಾಡುತ್ತಾನೆ.