ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣಾ.

ಯಾವ ಧರ್ಮದ ಬಗ್ಗೆ ಶ್ರೀರಾಮ ಅವತಾರವೆತ್ತರೋ, ಯಾವ ಧರ್ಮದ ಬಗ್ಗಾಗಿ ಶ್ರೀಸಮರ್ಥರ ಲೀಲೆಯ ಮಾನವೀದೇಹ ಪ್ರಕಟವಾಯಿತೋ, ಆ ಧರ್ಮದ ಉನ್ನತಿಗಾಗಿ ಮತ್ತು ರಾಷ್ಟ್ರದ ಉತ್ಕರ್ಷೆಗಾಗಿ ಏನೇನು ಆವಶ್ಯಕವಿದೆಯೋ ಅವೆಲ್ಲವೂ ತದ್ಧರ್ಮಿಗಳಿಗೆ ಮತ್ತು ತದ್ಧಶಿಷ್ಯರಿಗೂ ಕೊಟ್ಟು, ತಮ್ಮದೆಂದು ಒಪ್ಪಿಕೊಂಡದನ್ನು ಕಾದುಕೊಳ್ಳಬೇಕು.
(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ನಾಲ್ಕನೆಯ ಭಾಗ)

ನೀವೆಲ್ಲರೂ ಪರಮಧನ್ಯರಿದ್ದೀರಿ. ನನ್ನೀ ದೇಹದ ಸ್ಥಳದಲ್ಲೂ ಯಾರಾದರೂ ‘ಅಲ್ಪಸ್ವಲ್ಪ’ ಆ ಹೊಳಪು ನೋಡಿ, ನನ್ನನ್ನು ಇಚ್ಛಿಸಿದರೋ, ಅವರು ಅವರ ಇಲ್ಲಿಯ ಸೇವೆಯಿಂದಲೇ ನನ್ನ ಬಲೆಗೆ ಬಿದ್ದರು. ನಾನು ಇಲ್ಲಿಯ ಸೇವಾಕಾರ.

‘ಶಿಷ್ಯಾದಿಚ್ಛೇತ್ ಪರಾಭವಮ್’ ಎಂದಂತೆ ನನಗಿಂತಲೂ ನಿಮ್ಮಲ್ಲಿ ಅಧಿಕತರ ಕಾರ್ಯಕ್ಷಮತೆ ಬರಲಿ. ಒಂದು ಸೇವಾಕಾರರ ಸಂಘಟನೆ ಸ್ಥಾಪನೆ ಮಾಡಿ, ಇಲ್ಲಿಯ ಎಲ್ಲ ಕಾರ್ಯ ಸುಸೂತ್ರವಾಗಿ ಆಗಬೇಕು ಎಂದು ಎಲ್ಲವನ್ನೂ ನನಗೆ ಅನಿಸಿದಂತೆ ಒಂದು ಸಂಘಟನೆ ಸ್ಥಾಪನೆಯಾಗಿ, ಅದೇ ಇಂದು ‘ಸಮರ್ಥ ಸೇವಾ ಮಂಡಳ’ ಎಂದು ತನ್ನ ವ್ಯಾಪಕ ಹೆಸರಿನಿಂದ ಪ್ರಸಿದ್ಧವಾಗಿದೆ. ಏನೇನು ಆಗಬೇಕೆಂದು ನಾನು ಕಲ್ಪನೆ ಮಾಡಿದ್ದೆನೋ ಅದರ ಅಲ್ಪಾರಂಭವಾದರೂ ಆಯಿತು. ಆ ರೀತಿ ಬಹಳಿಷ್ಟು ಕಾರ್ಯಗಳೂ ಆದವು. ಮುಂದೆಯೂ ಬಹಳಿಷ್ಟು ಆಗುವದಿದೆ. ಸಹಯೋಗ ಕೊಡುವ ಜನರೂ ಚೆನ್ನಾಗಿ ಲಭಿಸಿತು. ಶ್ರೀಸಮರ್ಥಭಕ್ತ ಬಾಬೂರಾವ ವೈದ್ಯ ಯಾರ ಯಾರ ನಾಡಿಯ ಯೋಗ್ಯ ಪರೀಕ್ಷೆ ಮಾಡಿ ಅವರಿಗೆ ತಕ್ಕ ಸಮರ್ಥಸೇವೆಯ ಮಾತ್ರೆ ಕೊಡುತ್ತಾರೆ. ಶ್ರೀಸಮರ್ಥರ ಉಗ್ರಾಣಕೋಶದ ಭವಿಷ್ಯಕಾಲ ಹೇಗಿದೆ ಎಂಬುದನ್ನು ಕೋಶಾಧಿಕಾರಿ ಮತ್ತು ಜ್ಯೋತಿಷಿಯೂ ಆಗಿರುವ ಮುಳೆ ಮತ್ತು ಭಕ್ತ ಮಾಧವರಾವ ಹಿರಳೀಕರರಿಗೇ ಗೊತ್ತು. ಕೋಶದ ಸ್ಥಳದಲ್ಲಿ ಆ ಸ್ಥಳಕ್ಕೆ ತಕ್ಕ ನಾಮವಂತ-ಗುಣಕೀರ್ತಿಯ ಜನರನ್ನೇ ಶ್ರೀಸಮರ್ಥರು ಯೋಜಿಸಿದ್ದಾರೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಶ್ರೀಕಲ್ಯಾಣಸ್ವಾಮಿಯವರು ತಮ್ಮ ಸಮರ್ಥಸೇವೆಯ ಅಳಿದುಳಿದ ಇಚ್ಛೆ ತಮ್ಮ ‘ಸೇವಕ’ರಿಂದ ಪೂರ್ಣ ಮಾಡಿಕೊಳ್ಳಲಿ! ಶ್ರಿಸಮರ್ಥಭಕ್ತ ದಿನಕರನ ಪರಿಚಯ ಅವರ ಗುಣಗಳಿಂದಲೇ ಎಲ್ಲರಿಗೂ ಆಗುತ್ತಿದೆ. ಶ್ರೀಸಮರ್ಥರ ಮನಸ್ಸಿನಲ್ಲಿ ಅವರ ಹೆಸರಿಗೆ ಅನುರೂಪವಾಗಿ ಇವರ ಕೈಯಿಂದ ಕ್ರಿಯೆ ಘಟಿಸಿ ತರುವದಿದೆ. ಯಾವುದೇ ಸಂಶಯಾತ್ಮಕ ಅಂಧಕಾರ ಇವರ ದರ್ಶನದಿಂದ ಇರುವದಿಲ್ಲ.

RELATED ARTICLES  ಕತಗಾಲ ಯಕ್ಷೋತ್ಸವ ಒಂದು ಅನನ್ಯ ಯಕ್ಷಸೇವೆ.

‘ಸಮರ್ಥರ ಮನೆಯ ನಾಯಿ| ಅದಕ್ಕೆ ಎಲ್ಲರೂ ಕೊಡುತ್ತಾರೆ ಮಾನ||’
ಉಚ್ಚ ಮನುಷ್ಯಯೋನಿಯಲ್ಲಿ ಬಂದು ಯಾವ ಭಾಗ್ಯ ಪುರುಷ ಶ್ರೀಸಮರ್ಥರ ಏಕನಿಷ್ಠ ಸೇವೆ ಮಾಡುತ್ತಾ ಇದ್ದಾರೋ ಅವರು ಮತ್ತು ಉಳಿದವರೆಲ್ಲರೂ ಧನ್ಯರು. ಸೇವಾಕಾರರ ಸೇವೆಯ ಗುಣಧರ್ಮ ಅವರ ಸೇವೆಯಲ್ಲಿ ಕಾಣಬರುತ್ತದೆ.

ಯಾವ ಧರ್ಮದ ಬಗ್ಗೆ ಶ್ರೀರಾಮ ಅವತಾರವೆತ್ತರೋ, ಯಾವ ಧರ್ಮದ ಬಗ್ಗಾಗಿ ಶ್ರೀಸಮರ್ಥರ ಲೀಲೆಯ ಮಾನವೀದೇಹ ಪ್ರಕಟವಾಯಿತೋ ಆ ಧರ್ಮದ ಉನ್ನತಿಗಾಗಿ ಮತ್ತು ರಾಷ್ಟ್ರದ ಉತ್ಕರ್ಷೆಗಾಗಿ ಏನೇನು ಆವಶ್ಯಕವಿದೆಯೋ ಅವೆಲ್ಲವೂ ತದ್ಧರ್ಮಿಗಳಿಗೆ ಮತ್ತು ತದ್ಧಶಿಷ್ಯರಿಗೂ ಕೊಟ್ಟು, ತಮ್ಮದೆಂದು ಒಪ್ಪಿಕೊಂಡದನ್ನು ಕಾದುಕೊಳ್ಳಬೇಕು.

||ಸರ್ವೇ ಜನಾಃ ಸುಖಿನೋ ಭವಂತು||

ಇತಿ ಶಮ್
ಶ್ರೀಧರ