ಸುಮ್ಮನೇ “ಸ್ವಾಮೀಜಿ ಎಲ್ಲಿರಬಹುದು? ಹೇಗಿರಬಹುದು? ಅವರನ್ನು ಹುಡುಕಿ ಉತ್ಸವಕ್ಕೆ ಕರೆತರೋಣವೇ? ಇಲ್ಲಿಯವರೆಗಿನ ಅನುಭವದ ಮೇಲಿಂದ ತುಂಬಾ ಹಟ ಹಿಡಿದು ಕುಳಿತರೆ ಅವರು ‘ಇಲ್ಲ’ ಎಂದು ಹೇಳುವದಿಲ್ಲ” ಇತ್ಯಾದಿ ಕಲ್ಪನೆಗಳಿಂದ ಸುಮ್ಮನೇ ತಲೆ ಹಣ್ಣು ಮಾಡಿಕೊಳ್ಳುವದರಲ್ಲಿ ಏನು ಅರ್ಥವಿದೆ?

(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಮೊದಲ ಭಾಗ)

||ಶ್ರೀರಾಮ ಸಮರ್ಥ||

||ಓಂ ನಮೋ ಭಗವತೇ ಸಮರ್ಥಾಯ||

ಮನವೆಲ್ಲಿ ಪಡೆಯುವದೊ ಸರ್ವಸುಖವ| ಲಕ್ಷವಿಡು ಅಲ್ಲೇ ಅತಿ ಆದರದಿ ಮನವ|
ವಿವೇಕದಿಂದಲೆ ಕಲ್ಪನೆಯ ಕುಡಿ ಸರಿಸು| ರಾಘವನ ಎಡೆ ಮನವ ನಿಲ್ಲಿಸು ಸಜ್ಜನಾ||

RELATED ARTICLES  ಕನ್ನಡ ಉಳಿಯ ಬೇಕಾದರೆ ಕನ್ನಡೇತರರು ಕನ್ನಡ ಮಾತಾಡಬೇಕೆ ಅಥವಾ ಕನ್ನಡಿಗರು ಕನ್ನಡ ಮಾತಾಡಬೇಕೆ ?

ಶ್ರೀಸಮರ್ಥ ಸೇವಕ ಮಂಡಳದವರಿಗೆ ಆಶೀರ್ವಾದ,

ಶ್ರೀಸಮರ್ಥಕೃಪೆಯಿಂದ ನಾನಿಲ್ಲಿ ಸುಖರೂಪ ಇದ್ದೇನೆ. ನಿಮ್ಮೆಲ್ಲರ ಸುಖರೂಪದ ಪ್ರಾಪ್ತಿಯೇ ಶ್ರೀಗುರುಸೇವೆಯ ಫಲ. ನನ್ನಂತೆಯೇ ನೀವೆಲ್ಲರೂ ಈ ವಿರಾಸತ್ತಿನ ಅಷ್ಟೇ ಅಧಿಕಾರಿಗಳು.

‘ನಾವು ನೀವೆಲ್ಲರೂ ಇರುವದೊಂದೇ ಆ ಅಖಂಡ ಸ್ಥಳವು|
ಬರಿದೆ ಮಾಯಾ ಮೃಗಜಲದಲಿ ಮುಳುಗಬೇಡಿ||’
‘ದೈವೇಚ್ಛೆಯಂತೆ ನಡೆವುದೇ ಸರಿ| ದೇವ ಮಾಡಿದ್ದನೊಪ್ಪಿಕೋ| ಸಹಜವಾಗಲು ಸ್ವಭಾವ| ದೇವ ಕೃಪೆ ಬಲು ದೊಡ್ಡದು||’

ಉತ್ಸವಕ್ಕೆ ಬರುವ ಬಗ್ಗೆ ನನ್ನ ಮನಸ್ಸಿನಲ್ಲಿ ತುಸು ಆತುರತೆ ಇದ್ದಾಗ್ಯೂ, ಆರು ತಿಂಗಳು ಅಜ್ಞಾತವಾಸದಲ್ಲಿರಲು ಶ್ರೀರಾಮನ ಅಪ್ಪಣೆಯಾಗಿರುವದರಿಂದ ‘ನಮ್ಮ ಇಚ್ಛೆಗಾಗಿ| ದೇವರಿಂದ ದೂರವಾಗಬಾರದು||’ ಎಂದುಕೊಂಡೇ ನನ್ನ ಮನಸ್ಸನ್ನು ಗಟ್ಟಿಮಾಡಿಕೊಂಡು ಇರಬೇಕಲ್ಲವೇ? ಅದರಂತೆ ನೀವೂ ಕೂಡ ನಿಮ್ಮ ಮನಸ್ಸನ್ನು ದೃಢಮಾಡಿಕೊಂಡು ಇರಬೇಕಲ್ಲವೇ? ಚೈತ್ರ ಶುದ್ಧ ಸಪ್ತಮಿಗೆ ಆರು ತಿಂಗಳು ಪೂರ್ಣವಾಗುತ್ತದೆ. ಶ್ರೀರಾಮನವಮಿ ಇಲ್ಲೇ ಮಾಡಿ ಇಲ್ಲಿಂದ ಹೊರಡಬೇಕೆಂದುಕೊಳ್ಳುತ್ತಿದ್ದೇನೆ. ಅಲ್ಲಿಯ ವರೆಗೆ ನನ್ನ ದರ್ಶನ ದೇಹಾಕಾರದಲ್ಲಿ ಮಾತ್ರ ಇಲ್ಲ; ಆತ್ಮರೂಪದಲ್ಲಿಯಾದರೋ ಸದೋದಿತವಾಗಿದೆ. ಸುಮ್ಮನೇ “ಸ್ವಾಮೀಜಿ ಎಲ್ಲಿರಬಹುದು? ಹೇಗಿರಬಹುದು? ಅವರನ್ನು ಹುಡುಕಿ ಉತ್ಸವಕ್ಕೆ ಕರೆತರೋಣವೇ? ಇಲ್ಲಿಯವರೆಗಿನ ಅನುಭವದ ಮೇಲಿಂದ ತುಂಬಾ ಹಟ ಹಿಡಿದು ಕುಳಿತರೆ ಅವರು ‘ಇಲ್ಲ’ ಎಂದು ಹೇಳುವದಿಲ್ಲ” ಇತ್ಯಾದಿ ಕಲ್ಪನೆಗಳಿಂದ ಸುಮ್ಮನೇ ತಲೆ ಹಣ್ಣು ಮಾಡಿಕೊಳ್ಳುವದರಲ್ಲಿ ಏನು ಅರ್ಥವಿದೆ?

RELATED ARTICLES  ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ! ಹೀಗೆಂದರು ಶ್ರೀಧರರು

(ಈ ಪತ್ರದ ಎರಡನೆಯ ಭಾಗ ಮುಂದುವರಿಯುವದು)