ದರ್ಶನ್ ನಟನೆಯ 50 ನೇ ಚಿತ್ರವಾಗಿರುವ ಕುರುಕ್ಷೇತ್ರದಲ್ಲಿ ಚಿತ್ರರಂಗದ ದಿಗ್ಗಜರು ನಟಿಸುತ್ತಿದ್ದಾರೆ. ಅವರ ಲುಕ್‌ಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
ಈಗ ಶಕುನಿ ಪಾತ್ರದ ಲುಕ್ ಬಿಡುಗಡೆಯಾಗಿದ್ದು, ರವಿಶಂಕರ್ ಈ ಲುಕ್‌ನಲ್ಲಿ ಸಖತ್ ಖದರ್ ಆಗಿ ಕಾಣಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಬಹು ಬೇಡಿಕೆ ಖಳ ನಟನಾಗಿ ನಟಿಸುತ್ತಿರುವ ರವಿಶಂಕರ್ ಇದುವರೆಗೂ ಮಾಡಿರದ ಪಾತ್ರ ಇದಾಗಿದೆಯಂತೆ.

RELATED ARTICLES  ವಿದ್ಯಾರ್ಥಿಗಳಿಗೆ ಅಭಿನಂದನೆ,ಟ್ರ್ಯಾಕ್ ಸೂಟ್ ವಿತರಿಸಿದ ದಿನಕರ ಶೆಟ್ಟಿ

ಅಭಿಮಾನಿಯೊಬ್ಬರು ದರ್ಶನ್ ಅವರ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಮತ್ತೊಬ್ಬರು ರವಿಶಂಕರ್ ಫೋಟೋವನ್ನು ತೆಗೆದು ಸೋಷಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡಿದ್ದಾರೆ.
ಪ್ರತಿಯೊಂದು ಚಿತ್ರದಲ್ಲೂ ತಮ್ಮ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳುವ ರವಿಶಂಕರ್ ಶಕುನಿ ಪಾತ್ರದ ಬಗ್ಗೆಯೂ ಬಹಳ ಕುತೂಹಲಿಯಾಗಿದ್ದಾರಂತೆ. ಈ ಪಾತ್ರಕ್ಕಾಗಿ ತಾವೇ ಮುಂದೆ ನಿಂತು ತಮ್ಮ ಕಾಸ್ಟ್ಯೂಮ್‌ನ್ನು ಡಿಸೈನ್ ಮಾಡಿಕೊಂಡಿದ್ದಾರೆ.

RELATED ARTICLES  ಎರಡು ದಿನ ಕುಮಟಾ ಹೊನ್ನಾವರ ಕುಡಿಯುವ ನೀರು ಇಲ್ಲ

ಕೆಂಪೇಗೌಡ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ರವಿಶಂಕರ್, ಆ ನಂತರ ವರ್ಷದ ಮುನ್ನೂರ ಆರವತ್ತೈದು ದಿನಗಳು ಬಿಝಿ ನಟರಾಗಿಬಿಟ್ಟರು, ಸದ್ಯ ಉಪ್ಪಿ-ರುಪಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರದಲ್ಲೂ ಡಿಫರೆಂಟ್ ಗೆಟಪ್‌ನಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ.