ನೌಕಾ ದಿನಾಚರಣೆಯ ಅಂಗವಾಗಿ ಇಲ್ಲಿನ ಬಿಣಗಾದ ಕಡಲಿನಲ್ಲಿ ನಡೆದ ತೆರೆದ ಸಮುದ್ರ ಈಜು ಸ್ಪರ್ಧೆಯಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ, ಇಲ್ಲಿನ ಕಳಸವಾಡದ ನಿವಾಸಿ ಸುದರ್ಶನ ಪಿ. ತಾಂಡೇಲ್ ಸತತ 5ನೇ ಬಾರಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅವರಿಗೆ ನೌಕಾಸೇನೆಯ ಕರ್ನಾಟಕ ಫ್ಲ್ಯಾಗ್ ಆಫೀಸರ್ ಕೆ.ಜೆ.ಕುಮಾರ್ ಶನಿವಾರ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು. 1,800 ಮೀ. ದೂರವನ್ನು 21 ನಿಮಿಷ 37 ಸೆಕೆಂಡ್‌ನಲ್ಲಿ ಈಜುವ ಮೂಲಕ ಅವರು ಸಾಧನೆ ಮಾಡಿದ್ದಾರೆ. ತಮಿಳುನಾಡಿನ ವಿನೋದ್ ದ್ವಿತೀಯ, ಬಿಹಾರ ಮೂಲದ ನಿತೇಶ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

RELATED ARTICLES  ಮಾರಿಕಾಂಬಾ‌ ದೇವಸ್ಥಾನ ಶಿರಸಿ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ