ಅಕ್ಷರರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣಾ.

‘ನಮ್ಮ ಮನಸ್ಸಿನಲ್ಲಿರುವದು ಆನೆ – ಕುದುರೆಯ ಪಲ್ಲಕ್ಕಿಯಲ್ಲಿ ಕುಳಿತಿರಬೇಕು’ (ಆದರೆ) ‘ದೇವರ ಮನಸ್ಸಿನಲ್ಲಿದೆ ಅವನು ಕಾಲ್ನಡಿಗೆ ಮಾಡಲಿ

(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಎರಡನೆಯ ಭಾಗ)

‘ಶ್ರೀಗುರು ಆಜ್ಞಾಪಾಲನೆ| ಅದೇ ಸಚ್ಛಿಷ್ಯನ ಲಕ್ಷಣ’ ಬಾಲಿಶಬುದ್ಧಿಯಿಂದ ನೀವು ಒಂದಾನುವೇಳೆ ಶ್ರೀಗುರುವಾಜ್ಞ್ನೆಯನ್ನು ಉಲ್ಲಂಘನ ಮಾಡಿದರೆ ನನಗೆ ಹಾಗೆ ಹೇಗೆ ಮಾಡಲಾಗುವದು? ನೀವು ಎಷ್ಟೇ ಜನ ಬಂದರೂ ಅಥವಾ ಏನೇ ಮಾಡಿದರೂ ಶ್ರೀರಾಮನ ಅಪ್ಪಣೆಯ ಅತಿಕ್ರಮಣ ನನ್ನಿಂದ ಆಗುವದೇ? ಗುರುಸೇವೆಯ ಮತ್ತು ಆತ್ಮಚಿಂತನೆಯ ಕಾಲವನ್ನು ಸುಮ್ಮನೇ ನಿಷ್ಪ್ರಯೋಜಕ ವಿಚಾರದಲ್ಲಿ ಕಳೆಯುವದು ಮತ್ತು ಆತ್ಮಹಿತ ಹಾಳುಮಾಡುಕೊಳ್ಳುವದು ನಿಮ್ಮಂಥವರಿಗೆ ಅದೆಂತು ಯೋಗ್ಯವೆನಿಸುತ್ತದೆ? ಯಾರೂ ಇಲ್ಲಿ ಬರುವ ಬಗ್ಗೆ ಮನಸ್ಸಿನಲ್ಲೂ ತರಬೇಡಿರಿ! ನನ್ನ ಬಗ್ಗೆ ಬರಿದೇ ಕಲ್ಪನೆ ಮಾಡುತ್ತಾ ನಿಮ್ಮ ಕಾಲ ಕಳೆಯಬೇಡಿರಿ.

RELATED ARTICLES  ನಮಸ್ತುಲಸಿ ಕಲ್ಯಾಣಿ

‘ದೇವರ ಇಚ್ಛೆಯಂತೆ ನಡೆಯಬೇಕು’

ಈ ಸಾಲು ಪುನಃಪುನಃ ನೆನಪಿಸಿಕೊಂಡು ನಿಮ್ಮ ಸೆಳೆಯುವ ಮನಸ್ಸನ್ನು ಎಳೆದು ಹಿಡಿಯಿರಿ! ವಿವೇಕದ ಸುಂದರ ಮತ್ತು ಶಾಂತ ತಪೋವನದಲ್ಲೇ, ಆತ್ಮಚಿಂತನೆಯ ಆನಂದರೂಪ ಪ್ರಕಾಶದಲ್ಲಿಯೇ, ಶ್ರೀಗುರುಸೇವೆಯ ಮನೋಹರ ಪ್ರವಾಹದ ಹತ್ತಿರವೇ, ನಿಮ್ಮ ಚಂಚಲ ಮನರೂಪಿ ಗುರು ಸುಖದಿಂದ ಕುಳಿತುಕೊಳ್ಳಲಿ. ಆ ಅಲ್ಲಿಯ ಆತ್ಮಾನುಭವದ ಹಚ್ಚಹಸಿರು ಹುಲ್ಲಿನಿಂದ ಅದು ಸದೋದಿತ ತೃಪ್ತವಾಗಿರುವದು. ನನ್ನೆಲ್ಲ ಶಿಷ್ಯರ ‘ನಮ್ಮ ಮನಸ್ಸಿನಲ್ಲಿರುವದು ಆನೆ – ಕುದುರೆಯ ಪಲ್ಲಕ್ಕಿಯಲ್ಲಿ ಕುಳಿತಿರಬೇಕು’
(ಆದರೆ) ‘ದೇವರ ಮನಸ್ಸಿನಲ್ಲಿದೆ ಅವನು ಕಾಲ್ನಡಿಗೆ ಮಾಡಲಿ| ದೇವರ ಇಚ್ಛೆಯೇ ದೇವರ ವರ| ಮನಸ್ಸಿನ ಓಟವಿದು ಬರೆ ಮಿಥ್ಯ| ದೇವರ ಇಚ್ಛೆಯೇ ದೇವರ ಕೃಪೆ||’
ಹಿಂದಿನ ವರ್ಷ ಕರ್ನಾಟಕದ ಜನರಿಗೆ ಇದೇ ರೀತಿ ಆಗಿತ್ತು. ಎಷ್ಟೇ ನನ್ನ ಮಹೋತ್ಸವ ಮಾಡಿದರೂ ಅವರಿಗೆ ಅದು ಕಡಿಮೆಯಾಗೇ ಕಾಣುತ್ತಿತ್ತು. ಶಿವಮೊಗ್ಗೆಯ ಜನರಂತೂ ‘ಈ ವರ್ಷ ಸ್ವಾಮಿಗಳನ್ನು ಇಲ್ಲೇ ಕರೆತಂದು ಅವರ ಉತ್ಸವ ದೊಡ್ಡದರಲ್ಲೇ ದೊಡ್ಡದು ಮಾಡಬೇಕು’ ಎಂದು ಮನಸ್ಸಿನಲ್ಲಿ ದೊಡ್ಡ ಇಚ್ಛೆ ಇಟ್ಟುಕೊಂಡಿದ್ದರು. ಎಲ್ಲಕಡೆಗೂ ಇದೇರೀತಿ ನಿತ್ಯಮಹೋತ್ಸವ ಹೋದಲೆಲ್ಲ ನಡೆಯುತ್ತಿತ್ತು. ಆದರೆ ಪರಮೇಶ್ವರನಿಗೆ ನಾನು ಅಜ್ಞಾತವಿರಬೇಕೆಂದು ಅನಿಸಿತು.
‘ಬಲೀಯಸಿ ಕೇವಲಮೀಶ್ವರೇಚ್ಛಾ|’

RELATED ARTICLES  ಕಾವ್ಯಾವಲೋಕನ-೨

ಈ ರೀತಿ ನನ್ನ ಶಿಷ್ಯರ ಮನಸ್ಸಿನಲ್ಲಿ ನನ್ನ ಉತ್ಸವ ಈ ವರ್ಷ ಹಿಂದಿನ ವರ್ಷಕ್ಕಿಂತ ಮತ್ತೂ ದೊಡ್ಡ ಪ್ರಮಾಣದಲ್ಲಿ ಮಾಡಬೇಕೆಂದು ಇತ್ತೋ ಅದೇ ರೀತಿ ನನ್ನ ಮನಸ್ಸಿನಲ್ಲೂ ನನ್ನ ಶ್ರೀಗುರುವಿನ ಉತ್ಸವ ಹಿಂದಿನ ವರ್ಷಕ್ಕಿಂತ ದೊಡ್ಡ ವಿಭ್ರಂಜಣೆಯಿಂದ ಈ ವರ್ಷ ಮಾಡಬೇಕೆಂದಿತ್ತು.
‘ಉತ್ಪದ್ಯಂತೇ ವಿಲೀಯಂತೇ ದರಿದ್ರಾಣಾಂ ಮನೋರಥಾಃ’ ಎಂಬಂತೆ ನನ್ನದೂ ಕೆಲ ಪ್ರಮಾಣದಲ್ಲಿ ಆಯಿತು. ‘ಈಶ್ವರೇಚ್ಛಾ ಬಲೀಯಸೇ’
(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)