ವಾಟ್ಸಾಪ್ ಕೆಲವು ತಿಂಗಳ ಹಿಂದೆ ಪರಿಚಯಿಸಿರುವ ವಾಟ್ಸಾಪ್ ಸ್ಟೇಟಸ್ ನಿಮಗೆ ಎಲ್ಲಾ ಗೊತ್ತಿರುವ ಸಂಗತಿ. ನೀವು ಹಾಕುವ ಯಾವುದೇ ಸ್ಟೇಟಸ್ ಮೂವತ್ತು ಸೆಕೆಂಡಗಳ ಕಾಲಾವಧಿಯದಾಗಿದ್ದೂ, ಪ್ರತಿ ಚಿತ್ರವನ್ನು ಮೂವತ್ತು ಸೆಕೆಂಡ್ ಮಾತ್ರ ತೋರಿಸುತ್ತದೆ. ನೀವು ಮೂವತ್ತು ಸೆಕೆಂಡ್ ಇರುವ ಎಷ್ಟು ಬೇಕಾದರೂ ವಿಡಿಯೋ ತುಣುಕುಗಳನ್ನು ಸಹ ಇಲ್ಲಿ ಹಾಕಬಹುದು ಮತ್ತು ಪ್ರತಿ ಸ್ಟೇಟಸ್ ೨೪ ಗಂಟೆಗಳ ಕಾಲ ಮಾತ್ರ ಅಸ್ತಿತ್ವದಲ್ಲಿ ಇರುತ್ತದೆ. ನಂತರ ನೀವು ಮತ್ತೆ ಯಾವುದೇ ಹೊಸ ಸ್ಟೇಟಸ್ ಹಾಕಬಹುದು ಎನ್ನುವುದು ಸಹ ಬಹುತೇಕ ಜನರಿಗೆ ತಿಳಿದಿರುವ ವಿಷಯವಾಗಿದೆ.

ಈಗ ನೀವು ನೋಡಿ ಇಷ್ಟಪಟ್ಟ ನಿಮ್ಮ ಸಂಪರ್ಕದಲ್ಲಿ ಇರುವವರ ವಾಟ್ಸಾಪ್ ಸ್ಟೇಟಸ್ ಕುರಿತು ತಿಳಿದುಕೊಳ್ಳೋಣ. ವಾಟ್ಸಾಪ್ ಅಲ್ಲಿ ನೀವು ನೋಡಿರುವ ಯಾವುದೋ ಒಂದು ಸ್ಟೇಟಸ್ ನಿಮಗೆ ತುಂಬಾ ಇಷ್ಟವಾಗುತ್ತೆ. ಅದು ನಿಮಗೆ ಬೇಕು ಎನಿಸಿ ಆ ಸ್ಟೇಟಸ್ ಹಾಕಿದವರಿಗೆ ದಯವಿಟ್ಟು ಅದನ್ನು ನನಗೆ ಕಳಿಸಿ ಕೊಡಿ ಎಂದು ಕೇಳುವುದು ಇತ್ತೀಚೆಗೆ ಸಾಮಾನ್ಯವೆನಿಸಿದೆ. ಈ ಅನುಭವ ತುಂಬಾ ಜನರಿಗೆ ಆಗಿರುತ್ತದೆ.

ಆದರೆ ಆ ತರಹ ಕೇಳಲು ಕೆಲವರಿಗೆ ಮುಜುಗರ. ಎಷ್ಟೇ ಆತ್ಮೀಯರಾಗಿದ್ದರೂ ಸಹ ಪದೇ ಪದೇ ವಾಟ್ಸಾಪ್ ಸ್ಟೇಟಸ್ ಇಷ್ಟ ಆಗಿ ಪದೇ ಪದೇ ಅಂತ ಎಷ್ಟು ಸಲ ಕೇಳುವುದು ಎಂದು ಇರುಸು ಮುರುಸು ಆಗುವುದು ಕೂಡ ಸಹಜ. ಎಷ್ಟು ಸಲ ಕೇಳತಾರೆ ಅಂತ ಕಳಿಸುವವರಿಗೂ ಸಹ ಕಿರಿಕಿರಿ ಅನಿಸಬಹುದು. ಆದರೆ ಹೀಗೆ ಮಾಡದೇ ಯಾರದೇ ಯಾವುದೇ ವಾಟ್ಸಾಪ್ ಸ್ಟೇಟಸ್ ಆಗಲಿ ನಾವು ಅದನ್ನು ಡೌನಲೋಡ್ ಮಾಡಕೊಂಡು ಯಾವಾಗ ಬೇಕಾದರೂ ನೋಡಬಹುದು ಎನ್ನುವುದು ತುಂಬಾ ಜನಕ್ಕೆ ತಿಳಿದಿಲ್ಲ.

RELATED ARTICLES  ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರ ವರದಪುರದ ಮಹಿಮೆ.

ನೀವು ಇತ್ತೀಚೆಗೆ ನೋಡಿದ ಯಾವುದೇ ವಾಟ್ಸಾಪ್ ಸ್ಟೇಟಸ್ ನಿಮ್ಮ ಮೈ ಪೈಲ್ಸ್ (My Files) ಅಥವಾ ಪೈಲ್ ಮ್ಯಾನೇಜರ್ (File manager) ಎನ್ನುವ ಅಪ್ಲಿಕೇಶನ್ ಅಲ್ಲಿ ನೀವು ಆ ಸ್ಟೇಟಸ್ ನೋಡಿದ ತಕ್ಷಣ ಅದು ತಾತ್ಕಾಲಿಕವಾಗಿ ಸೇವ್ ಆಗಿರುತ್ತದೆ. ಆದ್ದರಿಂದ ನೀವು ನಿಮ್ಮ ಮೈ ಪೈಲ್ಸ್ ತೆರೆದು ಅಲ್ಲಿ ವಾಟ್ಸಾಪ್ ಪೋಲ್ಡರಗೇ (What’s app folder) ಹೋಗಿ, ಅಲ್ಲಿ ನಿಮಗೆ ಕಾಣುವ ಮಿಡೀಯಾ (Media) ಎನ್ನುವ ಆಯ್ಕೆ ಮೇಲೆ ಒತ್ತಿದರೆ ವಾಟ್ಸಾಪ್ ಪೋಟೋಸ್ (WhatsApp photos), ವಿಡಿಯೋಸ್ (WhatsApp videos) ಮೊದಲಾದ ಆಯ್ಕೆಗಳು ತೆಗೆದುಕೊಳ್ಳುತ್ತೇವೆ. ಅಲ್ಲಿಯೇ ಮೇಲೆ ಬಲ ತುದಿಯಲ್ಲಿ ಮೋರ್ (More) ಎನ್ನುವ ಮತ್ತೊಂದು ಆಯ್ಕೆ ಇರುತ್ತದೆ. ನೀವು ಅದನ್ನು ಒತ್ತಿದಾಗ ತೆರೆದುಕೊಳ್ಳುವ ಕೆಲವು ಆಯ್ಕೆಗಳಲ್ಲಿ ಒಂದು ಹಿಡನ್ ಪೈಲ್ಸ್ (Hidden files) ಎಂದಿರುತ್ತೆ. ಇದನ್ನು ನೀವು ಒತ್ತಿದಾಗ ಈಗಾಗಲೇ ಕೆಳಗೆ ಇರುವ ಆಯ್ಕೆಗಳನ್ನು ಗಮನಿಸಿ, ಅಲ್ಲಿ .Status ಎಂಬ ಹೊಸದೊಂದು ಆಯ್ಕೆ ತೆರೆದುಕೊಂಡಿರುತ್ತದೆ. ಇದನ್ನು ಕ್ಲಿಕಿಸಿ ನೋಡಿದಾಗ ನೀವು ಇತ್ತೀಚೆಗೆ ನೋಡಿದ ಎಲ್ಲಾ ವಾಟ್ಸಾಪ್ ಸ್ಟೇಟಸ್ ಅಲ್ಲಿ ಇರುತ್ತವೆ. ನೀವು ಇಲ್ಲಿ ಯಾವುದೇ ಸ್ಟೇಟಸ್ ಅನ್ನು ವೀಕ್ಷಿಸಬಹುದು.

RELATED ARTICLES  ಅಜಾತಶತ್ರು ಭಾವನಿಗೊಂದು ಅಶ್ರು ತರ್ಪಣ.

ಅದರಲ್ಲಿ ನಿಮಗೆ ಇಷ್ಟವಾದ ಯಾವುದೇ ಸ್ಟೇಟಸ್ ಅನ್ನು ದೀರ್ಘವಾಗಿ ಕ್ಲಿಕಿಸಿದಾಗ ಮತ್ತೆ ಮೇಲೆ ಬಲ ತುದಿಯಲ್ಲಿ Move, Copy, Paste ಎಂಬ ಆಯ್ಕೆಗಳು ತೆರೆದುಕೊಳ್ಳುತ್ತವೆ. ಈಗ ನೀವು ಇಷ್ಟಪಟ್ಟ ಸ್ಟೇಟಸ್ ಅನ್ನು ನಿಮಗೆ ಬೇಕಾದ ಬೇರೆ ಯಾವುದೇ ಪೋಲ್ಡರಗೇ (Folder) ಕಾಫಿ ಮಾಡಿ. ಆಗ ಅವು ಅಲ್ಲಿ ಸೇವ್ ಆಗಿ ಹಾಗೆ ಉಳಿಯುತ್ತವೆ. ಇದನ್ನು ಅನುಸರಿಸಿ ಎಲ್ಲಾ ಮುಜುಗರದಿಂದ ತಪ್ಪಿಸಿಕೊಂಡು ನಿಮಗೆ ಇಷ್ಟವಾದ ಸ್ಟೇಟಸ್ ನೋಡಿ ಖುಷಿಪಡಿ. ನಿಮ್ಮ ವಾಟ್ಸಾಪ್ ಬಳಕೆ ಇನ್ನೂ ದಕ್ಷವಾಗಿ ಸಾಗುತ್ತದೆ.

ಬಸವರಾಜ ಕಾಸೆ
ವಿಜಯಪುರ
9741910619
[email protected]