Satwadhara News

Category: Business

  • ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಉದ್ಘಾಟನೆ.

    ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಉದ್ಘಾಟನೆ.

    ಕುಮಟಾ: ಕುಮಟಾದಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಮನೆಮಾತಾದ ಉದಯ ಬಜಾರ್ ನ ಇನ್ನೊಂದು ಶಾಖೆ ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (66)ರ ಕುಮಟಾ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ ಸ್ಥಾಪಿತವಾದ ಸುಸಜ್ಜಿತ ಕಟ್ಟಡದಲ್ಲಿ ಇಂದು ಉದ್ಘಾಟನೆಗೊಂಡಿತು.

    ನೂತನವಾಗಿ ನಿರ್ಮಾಣವಾಗಿರುವ `ಉದಯ ಸ್ಪೋರ್ಟ್ಸ್ ವರ್ಲ್ಡ’ ನೂತನ ಮಳಿಗೆಯನ್ನು ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ ಉದ್ಘಾಟಿಸಿ ಮಾತನಾಡಿದರು. ಉಡುಪಿಯ ಪ್ರಸಿದ್ಧ ಉದ್ಯಮಿ ರಮೇಶ ಬಂಗೇರ ಅವರ ಮಾಲೀಕತ್ವದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದ್ದು, ಹಲವಾರು ವರ್ಷಗಳಿಂದ ಉದಯ್ ಬಜಾರ್ ಸಂಸ್ಥೆ ಕುಮಟಾ ಮತ್ರವಲ್ಲದೇ ಇಡೀ ಜಿಲ್ಲೆಯ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಯಾವುದೇ ಗೃಹ ಬಳಕೆಯ ವಸ್ತುಗಳನ್ನು ಖರೀದಿಸುವುದಿದ್ದರೆ ನಮಗೆ ಮೊದಲು ನೆನಪಾಗುವುದು ಉದಯ ಬಜಾರ್. ಇದೀಗ ಇನ್ನಷ್ಟು ಹೊಸತನದೊಂದಿಗೆ ನೂತನವಾಗಿ `ಸ್ಪೋರ್ಟ್ಸ ವರ್ಲ್ಡ್‌’ ಮಳಿಗೆ ಆರಂಭಿಸುವ ಮೂಲಕ ಹೊಸ ಹೆಜ್ಜೆ ಇರಿಸಿದೆ ಇದು ಯಶಸ್ಸು ಪಡೆಯಲಿ ಎಂದು ಅವರು ಶುಭ ಹಾರೈಸಿದರು.

    ನಮ್ಮ ಇಲಾಖೆಯಲ್ಲಿ ವಲಯಮಟ್ಟ, ತಾಲೂಕಾಮಟ್ಟ, ಜಿಲ್ಲಾಮಟ್ಟ ಮತ್ತು ವಿಭಾಗಮಟ್ಟ ಹೀಗೆ ಹಲವಾರು ಕ್ರೀಡಾಕೂಟಗಳು ಪ್ರತೀ ವರ್ಷ ನಡೆಯುತ್ತವೆ. ಈ ಕ್ರೀಡಾಕೂಟಕ್ಕೆ ಬೇಕಾದ ಅಗತ್ಯ ಪರಿಕರಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿರದ ಕಾರಣ ಹೊರ ಜಿಲ್ಲೆಗೆ ಹೋಗಿ ತರಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟರು.

    ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಉದ್ಯಮಿ ರಮೇಶ ಬಂಗೇರ ಅವರ ಇಚ್ಛೆಯಂತೆ ಕುಮಟಾದಲ್ಲಿ `ಸ್ಪೋಟ್ರ್ಸ್ ವಲ್ರ್ಡ್’ ಮಳಿಗೆ ಆರಂಭಿಸುವ ಬಹುದಿನದ ಕನಸು ಇದೀಗ ಈಡೇರಿದೆ. ಜನತೆ ಉದಯ್ ಬಜಾರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಸಂಸ್ಥೆಯೂ ಸಹ ಜನರ ಮೇಲೆ ಅತ್ಯಂತ ಗೌರವದಿಂದ ಕಂಡಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳು ಕುಮಟಾ ಭಾಗದ ಜನರಿಗೆ ಕಡಿಮೆ ದರದಲ್ಲಿ ದೊರಕಬೇಕು ಎಂಬ ಕನಸನ್ನು ಬಂಗೇರ ಅವರು ಹೊತ್ತಿದ್ದರು. ಇದು ಕೇವಲ ಅವರೊಬ್ಬರ ಕನಸಾಗಿರಲಿಲ್ಲ, ಇದು ನಮ್ಮೆಲ್ಲರ ಕನಸಾಗಿತ್ತು. ಕ್ರೀಡಾ ಸಾಮಗ್ರಿಗಾಗಿ ವಿವಿಧ ಜಿಲ್ಲೆಯನ್ನು ಸುತ್ತುವ ಸ್ಥಿತಿ ಇತ್ತು. ಇಂದು ಬಂಗೇರ ಅವರ ಕಸಿನ ಜತೆ ನಮ್ಮ ಕನಸೂ ಈಡೇರಿದಂತಾಗಿದೆ. ಈ ಮಳಿಗೆ ನಮ್ಮದು ಎಂದು ಭಾವಿಸಿ, ಪ್ರೀತಿಯಿಂದ ಕಟ್ಟಿ ಬೆಳೆಸುವ ಜತೆಗೆ ಸಂಪೂರ್ಣ ಸಹಕಾರವನ್ನೂ ನೀಡುತ್ತೇವೆ ಎಂದರು.

    ಸಿಪಿಐ ತಿಮ್ಮಪ್ಪ ನಾಯ್ಕ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಕುಮಟಾ ಪಟ್ಟಣಕ್ಕೆ ಸ್ಪೋಟ್ರ್ಸ್ ಮಳಿಗೆಯ ಅವಶ್ಯಕತೆ ತೀರಾ ಇತ್ತು. ಆ ಕನಸನ್ನು ಇಂದು ಉದಯ್ ಬಜಾರ್ ಮಾಲೀಕರಾದ ರಮೇಶ ಬಂಗೇರ ಅವರು ಈಡೇರಿಸಿದ್ದಾರೆ. ನವನಾವಿನ್ಯತೆಯ ಸೈಕಲ್‍ಗಳು, ಕ್ರೀಡಾ ಸಾಮಗ್ರಿಗಳು ಒಂದೇ ಸೂರಿನಡಿ ದೊರೆಯಲಿದೆ. ಸೈಕಲ್ ಸಂಚಾರ ದೇಹಕ್ಕೆ ಆರೋಗ್ಯಕರ ಎಂಬಂತೆ ಎಲ್ಲರೂ ಸೈಕಲ್ ಖರೀದಿಸಿ ಆರೋಗ್ಯ ವೃದ್ಧಿಸಿಕೊಳ್ಳಿ. `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆ ಎಲ್ಲರ ಜೀವನಾಡಿಯಾಗಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

    ಉದಯ ಗ್ರುಪ್ ನ ಜಿ.ಎಂ ಉಮೇಶ ಬಾದ್ಯಾ ಮಾತನಾಡಿ, 1979 ರಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ನೀಡಿದ ಸಹಕಾರಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ದಿನ ಪ್ರಾರಂಭಗೊಂಡ `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆಯಲ್ಲಿ ದೈಹಿಕ ಆರೋಗ್ಯಕ್ಕೆ ಬೇಕಾದ ಎಲ್ಲ ಬಗೆಯ ಸಲಕರಣೆಗಳು ಲಭ್ಯವಿದ್ದು, ಜನತೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ವಿನಂತಿಸಿದರು.

    ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸ್ಮರಣಿಕೆ ಮತ್ತು ಮೆಡಲ್ಸ್ ಕೌಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕರ್ನಾಟಕ ವಾಲಿಬಾಲ್ ತಂಡದ ಹಿರಿಯ ಆಟಗಾರ ಮಾರುತಿ ಜಿ. ನಾಯಕ ಕ್ರೀಡಾ ಸಾಮಗ್ರಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.

    ಉದಯ ಬಜಾರ್ ಮಾಲೀಕ ರಮೇಶ ಬಂಗೇರ, ಕುಮಟಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು, ಮಣಿಪಾಲದ ಉದ್ಯಮಿ ರಾಬರ್ಟ್, ಕೆನರಾ ಬ್ಯಾಂಕ್ ಕುಮಟಾ ಶಾಖೆಯ ವ್ಯವಸ್ಥಾಪಕ ಅಲೋಕ ಕುಮಾರ್ ತಿವಾರಿ, ಉದ್ಯಮಿ ಶೈಲೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಶೈಲಾ ಗುನಗಿ, ಉದಯ ಬಜಾರ್ ವ್ಯವಸ್ಥಾಪಕ ಫ್ರಾನ್ಸಿಸ್ ಇತರರು ಇದ್ದರು.

  • ನಿಯಂತ್ರ ತಪ್ಪಿ ಸರಕು ತುಂಬಿದ ಲಾರಿ ಪಲ್ಟಿ.

    ನಿಯಂತ್ರ ತಪ್ಪಿ ಸರಕು ತುಂಬಿದ ಲಾರಿ ಪಲ್ಟಿ.

    ಹೊನ್ನಾವರ: ಪಟ್ಟಣದ ರಾಮತೀರ್ಥ ಸಮೀಪ ಚಾಲಕನ ನಿಯಂತ್ರ ತಪ್ಪಿ ಸರಕು ತುಂಬಿದ ಲಾರಿ ಪಲ್ಟಿಯಾದ ಘಟನೆ ಮಂಗಳವಾರ ನಡೆದಿದೆ. ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಅಪಘಾತಕ್ಕಿಡಾಗಿದೆ. ಲಾರಿಯಲ್ಲಿ ಸಿಮೇಂಟ್ ಸಾಗಾಟ ಮಾಡಲಾಗುತ್ತಿತ್ತು. ರಾಮತೀರ್ಥ ಸಮೀಪ ಬರುತ್ತಿದ್ದಂತೆ ವಾಹನದ ಸ್ಟೆರಿಂಗ್ ಲಾಕ್ ಆಗಿದ್ದು,ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.

    ರಸ್ತೆ ಪಕ್ಕದ ಚರಂಡಿಗೆ ಇಳಿದಿದ್ದು, ಅದ್ರಷ್ಟವಷಾತ್ ರಸ್ತೆ ಪಕ್ಜದಲ್ಲೆ ಇದ್ದ ಮನೆಗೆ ಲಾರಿ ನುಗ್ಗುವುದು ತಪ್ಪಿದಂತಾಗಿದೆ. ಕ್ರೆನ್ ಮೂಲಕ ಲಾರಿ ಮೇಲೆತ್ತಲಾಯಿತು. ಕೆಲಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು, ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ನಿಲ್ಲಿಸಿಟ್ಟಿದ್ದ ಬೋಟ್ ಗೆ ಆಕಸ್ಮಿಕ ಬೆಂಕಿ ತಗಲಿ ಅವಘಡ : ಸುಟ್ಟು ಕರಕಲಾದ ಬೋಟ್.

    ನಿಲ್ಲಿಸಿಟ್ಟಿದ್ದ ಬೋಟ್ ಗೆ ಆಕಸ್ಮಿಕ ಬೆಂಕಿ ತಗಲಿ ಅವಘಡ : ಸುಟ್ಟು ಕರಕಲಾದ ಬೋಟ್.

    ಭಟ್ಕಳ : ಭಟ್ಕಳ ಬಂದರಿನಲ್ಲಿ ನಿಲ್ಲಿಸಿಟ್ಟಿದ್ದ ಬೋಟ್ ಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟುಹೋದ ಘಟನೆ ನಡೆದಿದೆ. ಈ ಬೋಟ್ ನರಸಿಂಹ ಗೋವಿಂದ ಖಾರ್ವಿ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಕಳೆದ ಮೂರು ವರ್ಷದಿಂದ ರಿಪೇರಿ ಕೆಲಸಕ್ಕಾಗಿ ಬಂದರಿನಲ್ಲಿ ನಿಲ್ಲಿಸಲಾಗಿತ್ತು. ಆದರೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದೆ. ಯಾರೋ ಕಿಡಿಗೇಡಿಗಳು ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಅಗ್ನಿ ಅವಘಡದಲ್ಲಿ 2ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು ಈ ಘಟನೆ
    ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈ ಬೆಳೆಗೆ ಸರಕಾರವೇ ಕೊಡುತ್ತೆ 50% ಸಬ್ಸಿಡಿ : ಬಂಜರು ಭೂಮಿಯಲ್ಲೂ ಬೆಳೆಯಬಹುದು : ಏನಿದು ಗೊತ್ತಾ?

    ಈ ಬೆಳೆಗೆ ಸರಕಾರವೇ ಕೊಡುತ್ತೆ 50% ಸಬ್ಸಿಡಿ : ಬಂಜರು ಭೂಮಿಯಲ್ಲೂ ಬೆಳೆಯಬಹುದು : ಏನಿದು ಗೊತ್ತಾ?

    ಭಾರತದಲ್ಲಿ ಜನರು ಮತ್ತೆ ಕೃಷಿಯತ್ತ (Agriculture) ವೇಗವಾಗಿ ಸಾಗುತ್ತಿದ್ದಾರೆ. ಆದಾಯಕ್ಕೆ ಕೃಷಿ ಉತ್ತಮ ಆಯ್ಕೆಯಾಗಿದೆ. ಇಂದು, ಇಲ್ಲಿ ನಾವು ನಿಮಗೆ ಕೃಷಿಯ ಅದ್ಭುತ ಕಲ್ಪನೆಯನ್ನು ನೀಡುತ್ತಿದ್ದೇವೆ. ಭಾರತದಲ್ಲಿ ಬಿದಿರಿನ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.

    ಈ ಕಾರಣಕ್ಕಾಗಿಯೇ ಸರ್ಕಾರವೂ (Government) ಈಗ ದೇಶದಲ್ಲಿ ಬಿದಿರು ಉತ್ಪಾದನೆಯನ್ನು (Bamboo Production) ಉತ್ತೇಜಿಸಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕ ರಾಜ್ಯ ಸರ್ಕಾರಗಳು ತಮ್ಮ ರೈತರಿಗೆ ಬಿದಿರು ಕೃಷಿಗೆ (Bamboo) ಸಹಾಯಧನ (Subsidy) ನೀಡುತ್ತಿವೆ. ಆದ್ದರಿಂದ, ನೀವು ಕೃಷಿಯ ಮೂಲಕ ಚೆನ್ನಾಗಿ ಗಳಿಸಲು ಬಯಸಿದರೆ, ಬಿದಿರಿನ ಕೃಷಿಯು ನಿಮಗೆ ಉತ್ತಮ ಆಯ್ಕೆಯಾಗಿದೆ.

    ಬಂಜರು ಭೂಮಿಯಲ್ಲೂ ಬಿದಿರು ಬೆಳೆಯಬಹುದು!

    ಕೃಷಿಯ ಅತ್ಯುತ್ತಮ ಅಂಶವೆಂದರೆ ಬಂಜರು ಭೂಮಿಯಲ್ಲಿಯೂ ಇದನ್ನು ಬೆಳೆಯಬಹುದು. ಅಲ್ಲದೆ ಇದಕ್ಕೆ ಕಡಿಮೆ ನೀರು ಬೇಕಾಗುತ್ತದೆ. ಒಮ್ಮೆ ನೆಟ್ಟರೆ, ಬಿದಿರಿನ ಸಸ್ಯದಿಂದ 50 ವರ್ಷಗಳವರೆಗೆ ಉತ್ಪಾದನೆಯನ್ನು ತೆಗೆದುಕೊಳ್ಳಬಹುದು. ಬಿದಿರು ಕೃಷಿಯಲ್ಲಿ ಹೆಚ್ಚಿನ ಶ್ರಮ ಬೇಕಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿದಿರು ಕೃಷಿ ರೈತರಿಗೆ ತುಂಬಾ ಇಷ್ಟವಾಗಿದೆ.

    ಬಿದಿರು ಬೆಳೆಸುವುದು ಹೇಗೆ?

    ಬಿದಿರನ್ನು ಎಲ್ಲಿ ಬೇಕಾದರೂ ಬೆಳೆಸಬಹುದು. ಭಾರತದ ಪೂರ್ವ ಭಾಗವು ಇಂದು ಬಿದಿರಿನ ಅತಿದೊಡ್ಡ ಉತ್ಪಾದಕವಾಗಿದೆ. ಒಂದು ಹೆಕ್ಟೇರ್ ಭೂಮಿಯಲ್ಲಿ 1500 ಬಿದಿರು ಗಿಡಗಳನ್ನು ನೆಡಬಹುದು. ಅದರ ಉತ್ತಮ ಬೆಳವಣಿಗೆಗಾಗಿ, ಒಂದು ಸಸ್ಯದಿಂದ ಇನ್ನೊಂದಕ್ಕೆ 2.5 ಮೀಟರ್ ದೂರವನ್ನು ಇರಿಸಲಾಗುತ್ತದೆ. ಸಾಲಿನಿಂದ ಸಾಲಿಗೆ 3 ಮೀಟರ್ ದೂರವಿರಬೇಕು.

    ಬಿದಿರಿನ ಉತ್ತಮ ಉತ್ಪಾದನೆಗೆ ಸುಧಾರಿತ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿದಿರಿನ ಅತ್ಯಂತ ಜನಪ್ರಿಯ ಜಾತಿಗಳೆಂದರೆ ಬಂಬುಸಾ ಒರಾಂಡಿನೇಸಿ, ಬಂಬುಸಾ ಪಾಲಿಮಾರ್ಫಾ, ಕಿಮೊನೊಬಾಂಬುಸಾ ಫಾಲ್ಕಾಟಾ, ಡೆಂಡ್ರೊಕಲಾಮಸ್ ಸ್ಟ್ರಿಕ್ಸ್, ಡೆಂಡ್ರೊಕಲಾಮಸ್ ಹ್ಯಾಮಿಲ್ಟೋನಿ ಮತ್ತು ಮೆಲೊಕಾನಾ ಬೆಕಿಫೆರಾ.

    50 ಪರ್ಸೆಂಟ್‌ ಸಹಾಯಧನ ಸಿಗುತ್ತೆ!

    ರಾಷ್ಟ್ರೀಯ ಬಿದಿರು ಮಿಷನ್ ಅಂದರೆ ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ, ಬಿದಿರು ಕೃಷಿಗೆ ಹೆಚ್ಚಿನ ವೆಚ್ಚವನ್ನು ಮಾಡಲಾಗುತ್ತಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರಿಗೆ ಆರ್ಥಿಕ ಪರಿಹಾರವನ್ನು ನೀಡುತ್ತಿದೆ. ಬಿದಿರು ಕೃಷಿಗೆ ಸರಕಾರ ರೈತರಿಗೆ ಶೇ.50ರಷ್ಟು ಸಹಾಯಧನ ನೀಡುತ್ತಿದೆ. ಸರ್ಕಾರದಿಂದ ಸಹಾಯ ಪಡೆಯಲು, ನೀವು ರಾಷ್ಟ್ರೀಯ ಬಿದಿರು ಮಿಷನ್‌ನ ಅಧಿಕೃತ ವೆಬ್‌ಸೈಟ್ nbm.nic.in ಗೆ ಭೇಟಿ ನೀಡುವ ಮೂಲಕ ಸಬ್ಸಿಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    ಇದರೊಂದಿಗೆ ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಯನ್ನು ಮಾಡಲಾಗಿದೆ. ನಿಮ್ಮ ನೋಡಲ್ ಅಧಿಕಾರಿಯಿಂದ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಹ ನೀವು ಪಡೆಯಬಹುದು.

    ಬಿದಿರಿನಿಂದ ಎಷ್ಟು ಆದಾಯ ಬರುತ್ತೆ!

    ಬಿದಿರಿನ ಮೊದಲ ಕೊಯ್ಲು ಅದನ್ನು ನೆಟ್ಟ ನಾಲ್ಕು ವರ್ಷಗಳ ನಂತರ ನಡೆಯುತ್ತದೆ. ಒಂದು ಅಂದಾಜಿನ ಪ್ರಕಾರ 4 ವರ್ಷಗಳಲ್ಲಿ ಒಂದು ಹೆಕ್ಟೇರ್ ಭೂಮಿಯಲ್ಲಿ ಬಿದಿರು ಕೃಷಿಯಿಂದ 40 ಲಕ್ಷ ರೂ.ವರೆಗೆ ಆದಾಯ ಪಡೆಯಬಹುದು. ಇದಲ್ಲದೇ ಬಿದಿರಿನ ರೇಖೆಗಳ ನಡುವೆ ಇರುವ ಖಾಲಿ ಜಮೀನಿನಲ್ಲಿ ಇತರೆ ಬೆಳೆಗಳನ್ನು ನೆಟ್ಟು ರೈತರು ಹೆಚ್ಚುವರಿ ಆದಾಯ ಗಳಿಸಬಹುದು. ಕೃಷಿಗೆ ತಗಲುವ ವೆಚ್ಚವನ್ನು ಹಿಂಪಡೆಯಬಹುದು.

  • ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ.

    ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ.

    ಕುಮಟಾ : ಸಂಪ್ರದಾಯಿಕ ಪವಿತ್ರ ಆಚರಣೆ, ಅಣ್ಣ-ತಂಗಿಯರ ಬಾಂಧವ್ಯದ ಪ್ರತೀಕವಾದ ರಕ್ಷಾ ಬಂಧನ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಕ್ಷಾ ಬಂಧನ (ರಾಖಿ) ಖರೀದಿ ಭರಾಟೆ ಜೋರಾಗಿದೆ‌.
    ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು ಸಹೋದರರಿಗೆ ಕಟ್ಟಲು ನಾನಾ ಬಗೆಯ ರಾಖಿ ಖರೀದಿಸುವಲ್ಲಿ ಮಗ್ನರಾಗಿದ್ದ ದೃಶ್ಯ ಮಾರುಕಟ್ಟೆಯಲ್ಲಿ ಕಾಣಸಿಗುತ್ತಲಿದೆ. ಇನ್ನು  ಅಕ್ಕ-ತಂಗಿಯರ ಒತ್ತಾಸೆಯಂತೆ ಹಲವು ಹುಡುಗರೂ ಸಹ ರಾಖಿ ಖರೀದಿಗೆ ಅವರೊಂದಿಗೆ ಸಾಥ್‌ ನೀಡುತ್ತಿದ್ದ ದೃಶ್ಯಾವಳಿಗಳು ಪಟ್ಟಣದಲ್ಲಿ ಕಾಣಸಿಗುತ್ತಿತ್ತು.
    ಪ್ರಸಕ್ತ ವರ್ಷವೂ ಮಾರುಕಟ್ಟೆಗೆ ನಾನಾ ಬಗೆಯ ರಾಖಿಗಳು ಲಗ್ಗೆ ಇಟ್ಟಿವೆ. ಸ್ಟೋನ್‌, ಶ್ರೀರಕ್ಷಾ, ಶುಭ, ಕ್ರೇಜಿ, ತಾರಾ ಹಾಗೂ ಡೈಮಂಡ್‌ ಹೆಸರಿನ ರಾಖಿಗಳು ಎಲ್ಲರನ್ನು ಆಕರ್ಷಿಸುತ್ತಿವೆ. ರಾಖಿಯೊಂದಕ್ಕೆ ಕನಿಷ್ಠ 5 ರಿಂದ ಗರಿಷ್ಠ 1,000 ರೂ.ಗಳವರೆಗೆ ಮಾರುಕಟ್ಟೆಯಲ್ಲಿ ದರ ಕಂಡುಬರುತ್ತಿದೆ.
    ಸಾಂಪ್ರದಾಯಿಕ ಶೈಲಿಯ ರೇಷ್ಮೆ ರಾಖಿಗೆ ಬೇಡಿಕೆ ಹೆಚ್ಚಿದ್ದು, ಸಹಜವಾಗಿಯೇ ಅವುಗಳ ಬೆಲೆಯೂ ದುಬಾರಿಯಾಗಿದೆ. ಸ್ಪಂಜ್‌ಗಳು ಹಾಗೂ ವಿವಿಧ ಬಗೆಯ ದಾರ, ರುದ್ರಾಕ್ಷಿ, ಮಣಿ, ಹರಳು ಪೋಣಿಸಿರುವ ರಾಖಿಗಳು ಹೆಚ್ಚಾಗಿ ಕಾಣುತ್ತಿವೆ. ಮಕ್ಕಳಿಗೆ ಇಷ್ಟವಾಗುವ ನಕ್ಷತ್ರಾಕಾರಾದ ರಾಖಿಗಳು ಪುಟಾಣಿಗಳನ್ನು ತನ್ನತ್ತ ಸೆಳೆಯುತ್ತಿದೆ.
    ಭಾರತೀಯ ಕಾರ್ಟೂನ್ ಪಾತ್ರಗಳಾದ ಮೋಟು ಪಟ್ಲು, ಬಜರಂಗಿ, ಲಿಟಲ್ ಸಿಂಗಮ್, ಫುಕ್ರೆ ಬಾಯ್ಸ್, ಬದ್ರಿ ಬುದ್ಧ್ ಮಕ್ಕಳ ರಾಖಿಗಳಲ್ಲಿ ಬಹಳಷ್ಟು ಇಷ್ಟವಾಗುತ್ತಿವೆ. ಇವುಗಳಲ್ಲದೆ ಡೋರೇಮಾನ್, ಸ್ಪೈಡರ್ ಮ್ಯಾನ್, ಬೆನ್ 10, ಮಸ್ಸಾ ಮತ್ತು ಬೇರ್, ಪೆಪಾ ಪಿಗ್ ಸೇರಿದಂತೆ ಚಾಕೊಲೇಟ್ ರಾಖಿಗಳೂ ಮಾರುಕಟ್ಟೆಯಲ್ಲಿ ಮಕ್ಕಳನ್ನು ತನ್ನತ್ತ ಸೆಳೆಯುತ್ತಿದೆ.
    ವಿಶೇಷವೆಂದರೆ ಈಗ ಎಲೆಕ್ಟ್ರಾನಿಕ್ ರಾಖಿಗಳೂ ಬಂದಿವೆ. ಇದರಲ್ಲಿ ಎಲ್ಇಡಿ ದೀಪಗಳ ಹೊರತಾಗಿ ಹಲವು ರೀತಿಯ ಆಟಿಕೆಗಳಿವೆ. ಮತ್ತೊಂದೆಡೆ, ಯುವ ಸಹೋದರರಿಗೆ ಮರದ, ಬಳೆ ಶೈಲಿ, ಮುತ್ತುಗಳ ವಿನ್ಯಾಸದ ರಾಖಿಗಳನ್ನು ಆದ್ಯತೆ ನೀಡಲಾಗುತ್ತಿದೆ. ಬೆಳ್ಳಿ ರಾಖಿಗಳು, ಕಾರ್ಟೂನ್ ರಾಖಿಗಳು, ಫೋಟೋ ರಾಖಿಗಳು, ಪರಿಸರ ಸ್ನೇಹಿ ರಾಖಿಗಳು, ಲುಂಬಾ ರಾಖಿಗಳು, ಬೀಜ ರಾಖಿ, ಆಭರಣ ರಾಖಿಗಳು, ಚಿನ್ನದ ರಾಖಿಗಳು, ಕುಂದನ್ ರಾಖಿಗಳು, ಮುತ್ತು ರಾಖಿಗಳು, ಕಲ್ಲಿನ ರಾಖಿಗಳು, ದೈವಿಕ ರಾಖಿಗಳು, ಮಣ್ಣಿನ ರಾಖಿ, ಮರದ ರಾಖಿಗಳು, ಅಕ್ರಿಲಿಕ್ ರಾಖಿಗಳು, ಲೋಹದ ರಾಖಿಗಳು, ಡಿಸೈನರ್ ಮತ್ತು ಅಲಂಕಾರಿಕ ರಾಖಿಗಳು ಪೇಟೆಯಲ್ಲಿ ಬರಪೂರ ಮಾರಾಟ ಕಾಣುತ್ತಿದೆ.
    ಇನ್ನು ಎರಡು ದಿನಗಳಲ್ಲಿ ಹಬ್ಬ ಸಮೀಪಿಸಿದ್ದು, ಹಬ್ಬದ ಖರೀದಿಯ ಜೊತೆಗೆ ರಾಖಿ ಖರೀದಿಯೂ ಬಹಳ ವಿಶೇಷವಾಗಿ ನಡೆಯುತ್ತದೆ. ಇದರಿಂದ ಹಬ್ಬದ ರಂಗು ಹೆಚ್ಚುತ್ತಲಿದೆ.
    ಕೋಟ್
    ಪ್ರತಿ ವರ್ಷವೂ ನಮ್ಮ ಅಣ್ಣನಿಗಾಗಿ ರಾಖಿ ಖರೀದಿಸುವುದು ಹಾಗೂ ಸಿಹಿ ತಿನಿಸು ಖರೀದಿಸುವುದು ನಮ್ಮ ರೂಢಿ. ಬಗೆ ಬಗೆಯ ರಾಖಿಗಳು ಪೇಟೆಗೆ ಬಂದಿದ್ದು ವಿಶೇಷವಾದ ರಾಖಿಯನ್ನು ಖರೀದಿಸಿ ಅಣ್ಣನಿಗೆ ಕಟ್ಟಿ ಸಂಭ್ರಮ ಪಡುತ್ತೇನೆ. – ನಯನಾ ನಾಯಕ, ರಾಖಿ ಖರೀದಿಗೆ ಬಂದ ವಿದ್ಯಾರ್ಥಿನಿ.
    ——-
    ಹಬ್ಬಕ್ಕೆ ಇನ್ನು ಕೇವಲ ಎರಡು ದಿನಗಳಿರುವುದರಿಂದ ರಾಖಿ ಖರೀದಿ ಜೋರಾಗಿದೆ. ಎಲ್ಲ ಗ್ರಾಹಕರಿಗೆ ಅವರವರ ಬಜೆಟ್ ಗೆ ಹೊಂದುವ ರಾಖಿಗಳು ಲಭ್ಯವಿದೆ. ಈ ವರ್ಷ ಗ್ರಾಹಕರಿಂದ ಉತ್ತಮ ಸ್ಪಂದನೆ ಇದೆ. – ಪರಶುರಾಮ , ರಾಖಿ ಮಾರಾಟ ಮಾಡುವ ಅಂಗಡಿಕಾರ.
  • ಇನ್ನೊಂದು ಮಹತ್ತರ ಉದ್ಯಮಕ್ಕೆ ಕಾಲಿಟ್ಟ ಶ್ರೀಕುಮಾರ ಸಮೂಹ ಸಂಸ್ಥೆ : ಸಾರಿಗೆ ಸೇವೆಯ ಜೊತೆಗೆ, ವಸತಿಯ ವ್ಯವಸ್ಥೆಯವರೆಗೆ : ಪುಟ್ಟಣ್ಣನ ಅಪ್ರತಿಮ ಸಾಧನೆ.

    ಇನ್ನೊಂದು ಮಹತ್ತರ ಉದ್ಯಮಕ್ಕೆ ಕಾಲಿಟ್ಟ ಶ್ರೀಕುಮಾರ ಸಮೂಹ ಸಂಸ್ಥೆ : ಸಾರಿಗೆ ಸೇವೆಯ ಜೊತೆಗೆ, ವಸತಿಯ ವ್ಯವಸ್ಥೆಯವರೆಗೆ : ಪುಟ್ಟಣ್ಣನ ಅಪ್ರತಿಮ ಸಾಧನೆ.

    ಹೊನ್ನಾವರ : ಪುಟ್ಟದೊಂದು ಲಗೇಜ್ ರಿಕ್ಷಾದ ಮೂಲಕ ಉದ್ಯಮ ಲೋಕಕ್ಕೆ ಶ್ರೀಕಾರ ಹಾಕಿದ ಶ್ರೀಕುಮಾರ ಸಂಸ್ಥೆ ಇಂದು ಎಲ್ಲೆಡೆಯಲ್ಲಿ ತನ್ನ ಬಾಹುಗಳನ್ನು ಚಾಚಿ ಜನಮೆಚ್ಚುಗೆ ಪಡೆದುಕೊಂಡಿದೆ. ಸದಾ ಕಾರ್ಯ ಚಟುವಟಿಕೆಗಳ ಮೂಲಕ ಹೆಸರಾದ ಪುಟ್ಟಣ್ಣ (ವೆಂಕಟ್ರಮಣ ಹೆಗಡೆ ಕವಲಕ್ಕಿ) ಇದೀಗ ಸಾರಿಗೆ ಸೇವೆಯ ಜೊತೆಗೆ ವಸತಿ ವ್ಯವಸ್ಥೆಯತ್ತಲೂ ದಾಪುಗಾಲಿಟ್ಟಿರುವುದು ಅವರ ಅಪ್ರತಿಮ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.

    ಜಿಲ್ಲೆಯ ಬೇರೆ ಬೇರೆ ಕಡೆಗಳಿಂದ ಮಹಾನಗರಕ್ಕೆ ಹೊರಡುವವರಿಗೆ ನೆನಪಾಗುವುದೇ ಶ್ರೀಕುಮಾರ ಬಸ್. ಹಳ್ಳಿಯ ಮೂಲೆ ಮೂಲೆಯಿಂದ ಹೊರಟು ಬೆಂಗಳೂರು, ಮೈಸೂರು ತಲುಪುವ ಬಸ್ ಗಳಲ್ಲಿ ಕೇವಲ ಸಂಚಾರ ಅಷ್ಟೇ ಅಲ್ಲ. ಇದು ನಮ್ಮವರದ್ದು ಎಂಬ ಭಾವ ಹಲವರಲ್ಲಿ ಇರುತ್ತದೆ.

    ಇದೀಗ ತಾಲೂಕಿನ ಕರ್ಕಿ ಸಮೀಪ ಶ್ರೀ ಕುಮಾರ ಸಮೂಹ ಸಂಸ್ಥೆಯ ಲಾಡ್ಜಿಂಗ್ ಮತ್ತು ಬೋರ್ಡಿಂಗ್ ಸೇವೆಗೆ ಸಂಸ್ಥೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿಯವರು ಮೊಮ್ಮಗಳಾದ ಶ್ರೇಯಾ ಹೆಗಡೆ ಜೊತೆಗೆ ಕುಟುಮಬದವರ ಉಪಸ್ಥೊತೊಯಲ್ಲಿ ಚಾಲನೆ ನೀಡಿದ್ದಾರೆ.

    ಶ್ರೀಕುಮಾರ್ ಲಾಜಿಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೊನ್ನಾವರ ಇದರ ಸಂಸ್ಥಾಪಕರಾದ ವೆಂಕ್ರಟಮಣ ಹೆಗಡೆ ಕವಲಕ್ಕಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ವಿಶೇಷ ವ್ಯವಸ್ಥೆ, ಹಳ್ಳಿ ಹಳ್ಳಿಗೂ ಬಸ್ ವ್ಯವಸ್ಥೆ, ಕೋರಿಯರ್ ವ್ಯವಸ್ಥೆ ಹಾಗೂ ಇತರ ವ್ಯವಸ್ಥೆಗಳ ಮೂಲಕ ದಾಪುಗಾಲು ಇಟ್ಟಿದ್ದು, ಇದೀಗ ಅದೆಲ್ಲದಕ್ಕಿಂತ ವಿಭಿನ್ನವಾದ ಲಾಡ್ಜಿಂಗ್ ಸೇವೆ ಆರಂಭಿಸಿದ್ದಾರೆ. ಈ ಕಾರ್ಯಕ್ಕೆ ಅವರು ವರಮಹಾಲಕ್ಷ್ಮೀ ಹಬ್ಬದಂದು ಚಾಲನೆ ನೀಡಿದ್ದಾರೆ.

    ಜಿಲ್ಲೆಯ ಗ್ರಾಹಕರಿಗೆ ಹಾಗೂ ಅಗಮಿಸುವ ಪ್ರವಾಸಿಗರಿಗೆ ದಿನವಿಡೀ ವೈಪೈ ಸೇವೆಯ ಜೊತೆ ನಗುಮುಖದ ಸೇವೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ರೆಸ್ಟೋರೆಂಟ್, ೨೪ ಗಂಟೆ ಬಿಸಿನೀರಿನ ಸೌಲಭ್ಯ ಹೊಂದಿರುವ ಸುಸಜ್ಜಿತವಾದ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಇದಾಗಿದೆ.

    ಸಮಾಜಮುಖಿ ಕಾರ್ಯಗಳಲ್ಲಿಯೂ ಗುರುತಿಸಿಕೊಂಡಿರುವ ವೆಂಕಟ್ರಮಣ ಹೆಗಡೆ ತಮ್ಮದೇ ಶರಾವತಿ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಮನೆಮಾತಾದವರು. ಕೊಡುಗೈ ದಾನಿಯಾಗಿ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಜನರ ಮೆಚ್ಚುಗೆಯ ಪುಣ್ಣಣ್ಣ ಎನಿಸಿಕೊಂಡಿದ್ದಾರೆ ಇವರು.
    ಮುರ್ಡೇಶ್ವರ, ಇಡಗುಂಜಿ, ಗೇರುಸೊಪ್ಪಾ, ಗೊಕರ್ಣ, ಯಾಣದಂತಹ ಪ್ರವಾಸಿ ಸ್ಥಳಕ್ಕೆ ಮಧ್ಯವರ್ತಿಯಾಗಿರುವ ಕರ್ಕಿ ಸಮೀಪ ಲಾಡ್ಜಿಂಗ್ ಆರಂಭಿಸಿವುದು ಪ್ರವಾಸಿಗರಿಗೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಎಲ್ಲೆಡೆಯಿಂದ ಅವರಿಗೆ ಅಭಿನಂದನೆಗಳು ಹರಿದು ಬರುತ್ತಿದೆ.

    • ಸುಂದರ ಪ್ರಾಕೃತಿಕ ಸೌಂದರ್ಯ ಹೊಂದಿರುವ ಉತ್ತರಕನ್ನಡದಲ್ಲಿ ಉತ್ತಮ ವ್ಯವಸ್ಥೆಯ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಜೊತೆಗೆ ಶುದ್ಧವಾದ ಊಟೋಪಚಾರಕ್ಕೆ ರೆಸ್ಟೋರೆಂಟ್ ಸ್ಥಾಪಿಸಿದ್ದೇನೆ. ಈ ಹಿಂದಿನAತೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುತ್ತಾರೆ ಎಂಬ ಭರವಸೆ ಇದೆ.- ವೆಂಕಟ್ರಮಣ ಹೆಗಡೆ ಕವಲಕ್ಕಿ, ಶ್ರೀಕುಮಾರ ಸಮೂಹ ಸಂಸ್ಥೆಯ ಸಂಸ್ಥಾಪಕರು.
  • ಏರಿಕೆಯಾಗುತ್ತಿದೆ ಈರುಳ್ಳಿ ಬೆಲೆ : ಟೊಮ್ಯಾಟೋ ನಂತರ ಈಗ ಈರುಳ್ಳಿ ಸರದಿ.

    ಏರಿಕೆಯಾಗುತ್ತಿದೆ ಈರುಳ್ಳಿ ಬೆಲೆ : ಟೊಮ್ಯಾಟೋ ನಂತರ ಈಗ ಈರುಳ್ಳಿ ಸರದಿ.

    ಬೆಂಗಳೂರು: ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆ ಇಳಿಮುಖವಾಗುತ್ತಿದೆ ಎಂದು ಸಮಾಧಾನಪಡುವಷ್ಟರಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಈ ಬೆಳವಣಿಗೆ ಇದೀಗ ಆತಂಕ ಸೃಷ್ಟಿಸುತ್ತಿದೆ. ಕಳೆದ ವಾರ ಚಿಲ್ಲರೆ ಅಂಗಡಿಗಳಲ್ಲಿ ಕೆಜಿಗೆ 25 ರೂ.ಗಳಷ್ಟಿದ್ದ ಈರುಳ್ಳಿ ಬೆಲೆ, ಗುಣಮಟ್ಟಕ್ಕೆ ಅನುಗುಣವಾಗಿ 35-40 ರೂ.ಗೆ ತಲುಪಿದೆ, ಟಾಪ್ ಎಂಡ್ ಸೂಪರ್ಮಾರ್ಕೆಟ್‌ಗಳಲ್ಲಿ ಕೆಜಿಗೆ 45 ರೂಗಳಂತೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನಾದ್ಯಂತ ಚಿಲ್ಲರೆ ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಕಳೆದ ಒಂದು ವಾರದಿಂದ ಈರುಳ್ಳಿ ಬೆಲೆಯಲ್ಲಿ ಕೆಜಿಗೆ ಸುಮಾರು 12-15 ರೂ ರಷ್ಟು ಏರಿಕೆಯಾಗಿದೆ.

    ಈ ನಡುವೆ 5 ರಾಜ್ಯಗಳಲ್ಲಿ ಚುನಾವಣೆ ಇರುವ ಪರಿಣಾಮ ಬೆಲೆ ಏರಿಕೆ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.

    ಇತ್ತೀಚೆಗೆ ಕೇಂದ್ರ ಸರ್ಕಾರ ಅಧಿಕಾರಿಗಳು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟದೊಂದಿಗೆ ಸರಣಿ ಸಭೆಗಳನ್ನು ನಡೆಸಿತು.

    ಸಭೆಯಲ್ಲಿ  ಬೆಲೆಗಳನ್ನು ಇಳಿಕೆ ಮಾಡಲು ರಾಜ್ಯಗಳು ಮತ್ತು ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿರುವ ಬೃಹತ್ 3 ಲಕ್ಷ ಮೆಟ್ರಿಕ್ ಟನ್ ಬಫರ್ ಸ್ಟಾಕ್ ಅನ್ನು ಬಳಸಲು ನಿರ್ಧಾರ ಕೈಗೊಳ್ಳಲಾಯಿತು.

    ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾತನಾಡಿ, ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದ್ದು, ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಬೆಂಗಳೂರಿನ ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿಯೂ ಆಗಿರುವ ಎಪಿಎಂಸಿ ಯಾರ್ಡ್ ವ್ಯಾಪಾರಿ ರವಿಶಂಕರ್ ಬಿ ಮಾತನಾಡಿ, ‘ಮುಂಗಾರು ಮಳೆ ಹಿನ್ನೆಲೆಯಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಕರ್ನಾಟಕದ ಇತರೆಡೆಯಿಂದ ದಾಸ್ತಾನು ಲಭ್ಯವಿಲ್ಲ. ಈ ಪ್ರದೇಶಗಳಿಂದ ಈರುಳ್ಳಿ ಸರಬರಾಜಿನಲ್ಲಿ ವಿಳಂಬವಾಗಬಹುದು, ಇದರಿಂದಾಗಿ ಬೆಲೆಗಳು ತೀವ್ರವಾಗಿ ಏರಿಕೆಯಾಗಬಹುದು. ಸರ್ಕಾರವು ಮಾರುಕಟ್ಟೆಗೆ ಬಫರ್ ಸ್ಟಾಕ್‌ಗಳನ್ನು ಬಿಡುಗಡೆ ಮಾಡಿದರೆ, ಸಮಸ್ಯೆ ಪರಿಹರಿಸಬಹುದು ಎಂದು ಹೇಳಿದ್ದಾರೆ.

  • ಕುಮಟಾ ಪಟ್ಟಣದಲ್ಲಿ ಅಣಬೆ ವ್ಯಾಪಾರ ಬಲು ಜೋರು : ದರ ಹೆಚ್ಚಿದರೂ ಇಳಿಯದ ಗ್ರಾಹಕರ ಖರೀದಿ ಭರಾಟೆ: ಅಣಬೆ ರುಚಿಗೆ ಸಾಟಿ ಇಲ್ಲ ಎನ್ನುವ ಜನರು.

    ಕುಮಟಾ ಪಟ್ಟಣದಲ್ಲಿ ಅಣಬೆ ವ್ಯಾಪಾರ ಬಲು ಜೋರು : ದರ ಹೆಚ್ಚಿದರೂ ಇಳಿಯದ ಗ್ರಾಹಕರ ಖರೀದಿ ಭರಾಟೆ: ಅಣಬೆ ರುಚಿಗೆ ಸಾಟಿ ಇಲ್ಲ ಎನ್ನುವ ಜನರು.

    ಕುಮಟಾ : ಮಳೆ ಇಳೆಯನ್ನು ತಂಪಾಗಿಸಿದ ನಂತರದಲ್ಲಿ ಮಾರುಕಟ್ಟೆಗೆ ಅಣಬೆಗಳು ಲಗ್ಗೆ ಇಟ್ಟಿದೆ. ಕುಮಟಾ ಪಟ್ಟಣದ ಗಿಬ್ ಸರ್ಕಲ್ ಸಮೀಪ ಅಣಬೆ ಮಾರಾಟ ಮಾಡುವ ಮಹಿಳೆಯರು ಅಣಬೆಗಳನ್ನು ತಂದು ಮಾರಾಟ ಮಾಡುವ ದೃಶ್ಯ ಶನಿವಾರ ಕಂಡುಬಂತು.

    ಹುತ್ತದಲ್ಲಾಗುವ ಹೆಗ್ಗಲಿಗೆ (ಅಣಬೆ) ವರ್ಷಂಪ್ರತಿಯಂತೆ ಈ ಬಾರಿಯೂ ಪಟ್ಟಣದಲ್ಲಿ ಭಾರೀ ಬೇಡಿಕೆ ಬಂದಿದೆ. ವರ್ಷದಿಂದ ವರ್ಷಕ್ಕೆ ದರ ಹೆಚ್ಚುತ್ತಿದ್ದರೂ ಅಣಬೆಪ್ರಿಯರು ಮಾತ್ರ ಅದನ್ನು ಖರೀದಿಸುತ್ತಿರುವುದು ವಿಶೇಷ.

    ೮- ೧೦ ಹಣಬೆಗಳಿರುವ ಪೊಟ್ಟಣಕ್ಕೆ ೨೫೦ ರೂ. ನಿಗದಿಪಡಿಸಲಾಗಿದೆ. ಅಣಬೆಗಳು ಈಗ ತಾನೆ ಪಟ್ಟಣಕ್ಕೆ ಮಾರಾಟಕ್ಕೆ ಪ್ರವೇಶಿಸುತ್ತಿದ್ದು ಕೆಲವೇ ಹೊತ್ತಿನಲ್ಲಿ ಅವುಗಳು ಮಾರಾಟವಾಗಿ ಹೋಗುತ್ತಿವೆ. ಅಣಬೆ ಜೊತೆಗೆ ಕಳಲೆ ಮಾರಾಟವೂ ಕುಮಟಾದಲ್ಲಿ ನಡೆಯುತ್ತಿದ್ದು, ಒಂದು ಕಳಲೆಗೆ 100 ರೂ. ನಂತೆ ಮಾರಾಟ ವಾಗುತ್ತಲಿದೆ.

    ತಾಲ್ಲೂಕಿನ ಬಡಾಳ, ಸಂತೆಗುಳಿ, ಮಾಸ್ತಿಹಳ್ಳ ಮುಂತಾದ ದಟ್ಟ ಕಾಡು ಪ್ರದೇಶದಿಂದ ಅಣಬೆ ಕಿತ್ತುಕೊಂಡು ಬಂದು ಮಾರಾಟ ಮಾಡಲಾಗುತ್ತಿದೆ. ಡಬ್ಬದಲ್ಲಿರುವ, ಕೃತವಾಗಿ
    ಬೆಳೆಸಿದ ಅಣಬೆ ಮಾತ್ರ ತಿಂದ ಪಟ್ಟಣದ ಜನರು ಸಹಜವಾಗಿ ಬೆಳೆದ ಪೌಷ್ಠಿಕಾಂಶ ಹೊಂದಿರುವ ಕಾಡು ಅಣಬೆಯ ದರದ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಕೊಂಡೊಯ್ಯುತ್ತಿದ್ದಾರೆ. ಅಣಬೆಯನ್ನು ಸಾಮಾನ್ಯವಾಗಿ ಬೆಳಗಿನ ಜಾವ ಸಂಗ್ರಹಿಸುವುದರಿಂದ ಬೆಳಿಗ್ಗೆ ಎಂಟು ಗಂಟೆಗೆಲ್ಲ ಮಾರಾಟಗಾರರು ಸಿದ್ದಾಪುರ-ಕುಮಟಾ ಬಸ್ಸಿಗೆ ಅಥವಾ ಟೆಂಪೋಕ್ಕೆ ಕುಮಟಾಕ್ಕೆ ಬಂದು ಗಿಬ್ ವೃತ್ತದಲ್ಲಿ ಮಾರಾಟಕ್ಕೆ ತೊಡಗುತ್ತಾರೆ.

    ಯಾವಾಗಲೂ ಹುತ್ತದಲ್ಲಿ ಏಳುವ ಅಣಬೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಅಣಬೆಗಳು ಪ್ರತಿ ವರ್ಷ ಜುಲೈ, ಆಗಸ್ಟ್‌ ತಿಂಗಳಲ್ಲಿ ಬೆಳೆಯುತ್ತಿದ್ದು, ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುತ್ತದೆ. ಜತೆಗೆ ರುಚಿಕರವೂ ಹೌದು. ಈ ಕಾರಣಕ್ಕೆ ಜನರು ಅದನ್ನು ಮುಗಿಬಿದ್ದು ಖರೀದಿಸುತ್ತಾರೆ.

    ವರ್ಷದಲ್ಲಿ ಎರಡು ತಿಂಗಳು ಮಾತ್ರ ಹುತ್ತದ ಅಣಬೆಗಳು ಸಿಗುತ್ತವೆ. ಹಂಗಾಮಿನಲ್ಲಿ ಅವು ತಾನಾಗಿಯೇ ಬೆಳೆಯುತ್ತವೆ. ಯಾವುದೇ ಆರೈಕೆ ಅಗತ್ಯವಿರುವುದಿಲ್ಲ. ಗ್ರಾಮಾಂತರ ಭಾಗದ ಎಷ್ಟೋ ಜನರು ಮಳೆಗಾಲದ ಎರಡು ತಿಂಗಳು ಇದನ್ನೇ ಹುಡುಕಿ ತಂದು ಮಾರಾಟ ಮಾಡಿ ಸಾವಿರಾರು ರುಪಾಯಿ ಸಂಪಾದನೆ ಮಾಡುತ್ತಾರೆ.

    ಅಣಬೆ ಹುಡುಕುವುದು ಭಾರೀ ಕಷ್ಟ .

    ಅಣಬೆ ತೆಗೆಯುವುದು ಸುಲಭದ ಕೆಲಸವಲ್ಲ. ಹುತ್ತದಲ್ಲಿ ಬೆಳೆಯುವುದರಿಂದ ಕೀಳುವಾಗ ಭಯ ಇದ್ದೇ ಇರುತ್ತದೆ. ಅಣಬೆಗೆ ಬಟ್ಟೆ ತಗುಲಿದರೆ ಮುಂದಿನ ವರ್ಷ ಆ ಜಾಗದಲ್ಲಿ ಮತ್ತೆ ಬೆಳೆಯುವುದಿಲ್ಲ ಎಂಬ ನಂಬಿಕೆಯೂ ಇದೆ. ಹೀಗಾಗಿ ಅನುಭವ ಇರುವವರು ಮಾತ್ರ ಅದನ್ನು ಕೀಳಲು ಹೋಗುತ್ತಾರೆ. ದೊಡ್ಡದಾಗಿರುವ ಹಾಗೂ ತಾಜಾ ಅಣಬೆಗೆ ಮಾರುಕಟ್ಟೆಯಲ್ಲಿ ಗರಿಷ್ಠ ದರವಿದೆ.

    ಆರೋಗ್ಯಕ್ಕೆ ಉತ್ತಮ ಮಶ್ರೂಮ್‌.

    ಸಾಮಾನ್ಯವಾಗಿ ಅಣಬೆಗಳು ಹೆಚ್ಚು ಪೌಷ್ಠಿಕಾಂಶ, ಪ್ರೊಟೀನ್‌ಗಳನ್ನು ಹೊಂದಿವೆ. ನಮ್ಮ ದೇಹದಲ್ಲಿ ಸೇರಿರುವ ರೋಗಾಣುಗಳ ವಿರುದ್ಧವೂ ಇವುಗಳು ಕಾರ್ಯನಿರ್ವಹಿಸುತ್ತವೆ. ಲಿವರ್‌ ಅಥವಾ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಲ್ಲಣಬೆಗಳು ರಾಮಬಾಣ. ಅಲ್ಲದೆ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್‌ಗಳ ಸ್ಥಿರತೆಯನ್ನೂ ಕಾಯ್ದುಕೊಳ್ಳುವ ವಿಶೇಷ ಔಷಧೀಯ ಗುಣಗಳನ್ನೂ ಇವುಗಳು ಹೊಂದಿರುತ್ತವೆ ಎನ್ನಲಾಗುತ್ತದೆ.

    ವೆಜ್‌ ಕಂ ನಾನ್‌ವೆಜ್‌

    ಕಲ್ಲಣಬೆಗಳು ಸಸ್ಯಹಾರಿಯೂ ಅಲ್ಲ, ಮಾಂಸಹಾರಿಯೂ ಅಲ್ಲ. ಕೆಲವೊಂದು ಮಂದಿ ಇವುಗಳನ್ನು ಆಹಾರ ಪದಾರ್ಥವಾಗಿ ಬಳಸಿದರೆ ಮಾಂಸಾಹಾರ ಸೇವನೆ ಮಾಡದ ವರ್ಗದವರು ಇದನ್ನು ಮಾಂಸಾಹಾರ ಎಂದೇ ಪರಿಗಣಿಸಿ ತಮ್ಮ ಆಹಾರ ಪಟ್ಟಿಯಿಂದ ದೂರವಿಟ್ಟಿದ್ದಾರೆ.


    ನಾನು ಅಣಬೆಗಳನ್ನು ಕಿತ್ತು ತಂದು ಮಾರಾಟ ಮಾಡುತ್ತಿಲ್ಲ. ಬೇರೆಯವರಿಂದ ಪಡೆದು ತಂದು ಎಲ್ಲಿ ಮಾರಾಟ ಮಾಡುತ್ತಿದ್ದೇನೆ. ದರ ಹೆಚ್ಚಿಗೆ ಎನಿಸಿದರೂ, ವ್ಯಾಪಾರ ಜೋರಾಗಿಯೇ ಸಾಗಿದೆ -, ಅಣಬೆ ಪ್ಯಾಪರಕ್ಕೆ ಬಂದ ಮಹಿಳೆ.

  • ಫೇಕ್ ಫೇಸ್​ಬುಕ್​​ ಅಕೌಂಟ್​​ ನಂಬಿ ಲಕ್ಷ, ಲಕ್ಷ ಹಣ ಕಳೆದುಕೊಂಡ ಯುವಕ

    ಫೇಕ್ ಫೇಸ್​ಬುಕ್​​ ಅಕೌಂಟ್​​ ನಂಬಿ ಲಕ್ಷ, ಲಕ್ಷ ಹಣ ಕಳೆದುಕೊಂಡ ಯುವಕ

    ಬೆಂಗಳೂರು: ಫೇಸ್​ಬುಕ್​ನಲ್ಲಿ ಯಾರದೋ ಫೋಟೋ ಹಾಕಿ ಬರೋಬ್ಬರಿ 41 ಲಕ್ಷ ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದೆ. ‘ಗೀತಾ ಸೆಕ್ಸಿ’ ಎಂಬ ಹೆಸರಲ್ಲಿ ಫೇಸ್​ಬುಕ್ ಖಾತೆ ತೆರೆದು ರಾಮನಗರ ಜಿಲ್ಲೆಯ ಕನಕಪುರದ ಯುವಕನಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ರಾಮನಗರದ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

    ಫೇಸ್​ಬುಕ್​ನಲ್ಲಿ ಗೀತಾ ಸೆಕ್ಸಿ ಎಂಬ ಖಾತೆಯೊಂದು ಓಪನ್ ಆಗಿತ್ತು. ಇದು ರಾಮನಗರ ಜಿಲ್ಲೆಯ ಯುವಕನ ಕಣ್ಣಿಗೆ ಬಿದ್ದಿತ್ತು. ಫೇಸ್​ಬುಕ್​ನ ಬಯೋದಲ್ಲಿ ‘ಬೆಂಗಳೂರಿನಿಂದ ಹಾಸನ, ಕುಣಿಗಲ್, ರಾಮನಗರ, ಶಿವಮೊಗ್ಗದವರೆಗೂ ಸರ್ವೀಸ್ ಇದೆ. ಫ್ರೆಶ್ ಹುಡುಗಿರು ಇದ್ದಾರೆ’ ಎಂದು ಬರೆದಿತ್ತು.

    ಇದನ್ನು ಓದಿದ ಯುವಕ ಮೆಸೇಜ್ ಮಾಡಿದ್ದಾರೆ. ಹುಡುಗಿ ಬೇಕಾದರೆ 800ರೂಪಾಯಿ ಹಣದೊಂದಿಗೆ ನಿಮ್ಮ ಫೋಟೋವನ್ನು ಕಳುಹಿಸಿ ಎಂದು ರಿಪ್ಲೈ ಬಂದಿತ್ತು. ಹೌದು ಎಂದು ನಂಬಿದ ಆ ಯುವಕ ಹಣ ಮತ್ತು ಫೋಟೋವನ್ನು ಕಳುಹಿಸಿದ್ದ.

    ಫೋಟೋ ಕಳುಹಿಸುತ್ತಿದ್ದಂತೆ ಆ ಫೋಟೋವನ್ನು ಬೆತ್ತಲೆಯಾಗಿ ಮಾರ್ಪಿಂಗ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನ ಸ್ನೇಹಿತರಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಸಿದ್ದಾರೆ. ಇದರಿಂದ ಗಾಬರಿಯಾದ ಯುವಕ ಹಣ ನೀಡಿದ್ದಾರೆ. ವರದಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಸುಮಾರು 41 ‌ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಫೋನ್​ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಮನಗರ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಡಾರ್ಲಿಂಗ್ ಪ್ರಭಾಸ್ ಫೇಸ್​​ಬುಕ್​ ಖಾತೆ ಹ್ಯಾಕ್​

    ಡಾರ್ಲಿಂಗ್ ಪ್ರಭಾಸ್ ಫೇಸ್​​ಬುಕ್​ ಖಾತೆ ಹ್ಯಾಕ್​

    ಟಾಲಿವುಡ್​ ನಟ ಡಾರ್ಲಿಂಗ್ ಪ್ರಭಾಸ್ ಫೇಸ್​​ಬುಕ್​ ಖಾತೆ ಹ್ಯಾಕ್​ ಆಗಿದೆ. ಹ್ಯಾಕರ್ಸ್​ ಅವರ ಖಾತೆಯಲ್ಲಿ ವಿಡಿಯೋ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ‘ಮನುಷ್ಯರು ದುರಾದೃಷ್ಟವಂತರು’ ಎಂದು ಅಡಿಬರಹ ನೀಡಿದ್ದಾರೆ. ನೆಚ್ಚಿನ ನಟನ ಖಾತೆ ಹ್ಯಾಕ್​ ಆಗಿರೋದು ಅಭಿಮಾನಿಗಳಿಗೆ ಗೊತ್ತಾಗುತ್ತಿದಂತೆ ಇದು ಪೌಲ್​ ಪ್ಲೇ ಎಂದು ಹೇಳಿದ್ದಾರೆ. ಸದ್ಯ ನಟ ಪ್ರಭಾಸ್​ಗೆ ಈ ವಿಚಾರ ಗೊತ್ತಾಗಿದ್ದು, ಅವರ​ ಟೀಂ ಹ್ಯಾಕ್​ ಆಗಿರುವ ಖಾತೆಯನ್ನು ಸರಿಪಡಿಸಲು ಯತ್ನಿಸುತ್ತಿದ್ದಾರೆ.

    ಇನ್ನು ಫೇಸ್​ಬುಕ್​ನಲ್ಲಿ ಪ್ರಭಾಸ್ ಅನೇಕ ಫಾಲೋವರ್ಸ್​ ಹೊಂದಿದ್ದಾರೆ. 24 ಮಿಲಿಯನ್​ ಜನರು ಪ್ರಭಾಸ್​ ಅವರ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಪ್ರಭಾಸ್​ ಮಾತ್ರ ರಾಜಮೌಳಿಯನ್ನು ಫಾಲೋ ಮಾಡುತ್ತಿದ್ದಾರೆ.

    ಪ್ರಭಾಸ್​ ಸಿನಿಮಾ ವಿಚಾರಕ್ಕೆ ಬರೋದಾದ್ರೆ ಕೈಯಲ್ಲಿ​​ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಒಂದೆಡೆ ಸಲಾರ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಮತ್ತೊಂದೆಡೆ ಕಲ್ಕಿ, ರಾಜ ಡಿಲಕ್ಸ್​ ಸಿನಿಮಾ ಕೂಡ ಇವರ ಕೈಯಲ್ಲಿವೆ. ಇಂತಹ ಸಮಯದಲ್ಲಿ ನಟನ ಖಾತೆ ಹ್ಯಾಕ್​ ಆಗಿರೋದು ಅಚ್ಚರಿಗೆ ಕಾರಣವಾಗಿದೆ.