Satwadhara News

Category: Food

  • ಪೌಷ್ಟಿಕಾಂಶಗಳಿಂದ ಕೂಡಿದ ಮಿಕ್ಸ್ ವೆಜಿಟೆಬಲ್ ಕೂರ್ಮ..!!

    ಪೌಷ್ಟಿಕಾಂಶಗಳಿಂದ ಕೂಡಿದ ಮಿಕ್ಸ್ ವೆಜಿಟೆಬಲ್ ಕೂರ್ಮ..!!

    ಇದು ಹಲವಾರು ತರಕಾರಿಗಳ ಸಮ್ಮಿಲನವಾಗಿದ್ದು ಪೌಷ್ಟಿಕಾಂಶಗಳಿಂದ ತುಂಬಿರುತ್ತದೆ. ಇದು ಚಪಾತಿ ಮತ್ತು ಪೂರಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡದಬಹುದು. ಇದನ್ನು ಹೇಗೆ ಮಾಡೋದು ? ತಿಳಿಯೋಣ ಬನ್ನಿ..

    ಬೇಕಾಗುವ ಸಾಮಗ್ರಿಗಳು:

    ಮಿಕ್ಸ್ ವೆಜಿಟೆಬಲ್ಸ್ 2 ಕಪ್ (ಬೀನ್ಸ್, ಕ್ಯಾರಟ್, ಆಲೂಗಡ್ಡೆ,ಕಾಲಿ ಫ್ಲವರ್, ಹಸಿ – ಬಟಾಣಿ)
    ಸಣ್ಣಗೆ ಹೆಚ್ಚಿದ ಈರುಳ್ಳಿ 2
    ಒಗ್ಗರಣೆ ಸೊಪ್ಪು ಸ್ವಲ್ಪ.
    ಟೊಮೇಟೊ ಪ್ಯೂರಿ 2 ಕಪ್
    ಕೆಂಪು ಮೆಣಸಿನ ಪುಡಿ 1 ಚಮಚ
    ಧನಿಯಾ ಪುಡಿ 1 ಚಮಚ
    ಅರಿಶಿಣ ಪುಡಿ ಚಿಟಿಕೆ
    ಉಪ್ಪು ರುಚಿಗೆ ತಕ್ಕಷ್ಟು
    ಎಣ್ಣೆ 2 ಚಮಚ

    ಮಸಾಲಾ ಪೇಸ್ಟ್ ಮಾಡುವ ವಿಧಾನ:

    ತೆಂಗಿನ ತುರಿ 2 ಚಮಚ
    ಗೋಡಂಬಿ 10
    ಗಸಗಸೆ 2 ಚಮಚ
    ಹಸಿ- ಮೆಣಸಿನ ಕಾಯಿ 2
    ಸೋಂಪು 3/4 ಚಮಚ
    ಲವಂಗ 2
    ಚಕ್ಕೆ 2 ಇಂಚು
    ಏಲಕ್ಕಿ 2

    ಇದೆಲ್ಲವನ್ನು ರುಬ್ಬಿಕೊಳ್ಳಬೇಕು. ಅಂದರೆ ಪೇಸ್ಟ ಮಾಡಿಕೊಳ್ಳಿ.

    ಮಾಡುವ ವಿಧಾನ:

    1. ತರಕಾರಿಗಳನ್ನು ಕತ್ತರಿಸಿ ಬೇಯಿಸಿಕೊಳ್ಳಬೇಕು.

    2. ಮಸಾಲೆ ಪದಾರ್ಥ ಗಳನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು.

    3. ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಬೇಕು. ಎಣ್ಣೆ ಕಾದ ನಂತರ
    ಈರುಳ್ಳಿ ಮತ್ತು ಕರಿಬೇವು ಹಾಕಬೇಕು.

    4. ಈರುಳ್ಳಿ ಕಂದು ಬಣ್ಣಕ್ಕೆ ಬಂದ ನಂತರ ಟೊಮೇಟೊ ಪ್ಯೂರಿ ಮತ್ತು

    5. ಮಸಾಲೆ ಪುಡಿಗಳನ್ನು ಸೇರಿಸಿ ಎಣ್ಣೆ ಹೊರ ಬಿಡುವ ವರೆಗೆ ಫ್ರೈ ಮಾಡಬೇಕು.

    6. ನಂತರ ಬೇಯಿಸಿದ ತರಕಾರಿಗಳನ್ನು ಹಾಕಬೇಕು.

    7. ತರಕಾರಿ ಹಾಕಿ 5 ನಿಮಿಷದ ನಂತರ ರುಬ್ಬಿದ ಮಸಾಲೆ, ತರಕಾರಿ ಬೇಯಿಸಿದ ನೀರು, ಉಪ್ಪು ಹಾಕಿ 10 ನಿಮಿಷ ಕುದಿಸಬೇಕು.

    8. ಕೊನೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಚಪಾತಿ ಅಥವಾ ಪುರಿ ಜೊತೆ ಸರ್ವ್ ಮಾಡಬೇಕು.

  • ಅವಲಕ್ಕಿ ಚೂಡಾವ …!!

    ಅವಲಕ್ಕಿ ಚೂಡಾವ …!!

    ಬೇಕಾಗುವ ಸಾಮಗ್ರಿಗಳು:

    2 ಲೋಟ ಅಥವಾ 1/2 ಕೆ ಜಿ ತೆಳು ಅವಲಕ್ಕಿ
    4 ಚಮಚ ಎಣ್ಣೆ
    2 ಚಮಚ ಕಡಲೆಬೀಜ
    2 ಚಮಚ ಹುರಿಗಡಲೆ
    2 ಚಮಚ ಒಣದ್ರಾಕ್ಶಿ
    1 ಚಮಚ ಜೀರಿಗೆ
    1 ಚಮಚ ಸಾಸಿವೆ
    10 ಚಮಚ ಒಣ ಕೊಬ್ಬರಿ ತುರಿ ಅತವಾ ತೆಳು ಹೋಳುಗಳು
    1 ಚಮಚ ಉಪ್ಪು
    1/2 ಚಮಚ ಸಕ್ಕರೆ
    1/2 ಚಮಚ ಅರಿಶಿಣ
    1/2 ಚಮಚ ಇಂಗು
    10 ಗೋಡಂಬಿ
    2 ಒಣಮೆಣಸಿನಕಾಯಿ
    2 ಹಸಿಮೆಣಸಿನಕಾಯಿ
    10-15 ಕರಿಬೇವಿನ ಎಸಳು

    ತಯಾರಿಸುವ ವಿಧಾನ:

    1.ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ 4-5 ತಾಸು ಇಟ್ಟು ಒಣಗಿಸಿಕೊಳ್ಳಿ.

    2.ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಣ್ಣ ಉರಿಯಲ್ಲಿ ಇಟ್ಟು ಒಗ್ಗರಣೆ ಹಾಕಿರಿ.

    3.ಮೊದಲು ಸಾಸಿವೆ , ಜೀರಿಗೆ ನಂತರ ಕರಿಬೇವು , ಇಂಗು , ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಗೂ ಒಣಮೆಣಸಿನಕಾಯಿ ಮುರಿದು ಹಾಕಿ ಕೈಯಾಡಿಸಿ.

    4.ತೆಳ್ಳಗೆ ಕತ್ತರಿಸಿದ ಒಣ ಕೊಬ್ಬರಿ ಚೂರುಗಳನ್ನು ಅತವಾ ಒಣ ಕೊಬ್ಬರಿ ತುರಿಯನ್ನು ಹಾಕಿ, ಕೈಯಾಡಿಸಿ.

    5.ಕಡಲೆಬೀಜ , ಹುರಿಗಡಲೆ , ಒಣದ್ರಾಕ್ಶಿ ಮತ್ತು ಗೋಡಂಬಿ ಚೂರು ಮಾಡಿ ಹಾಕಿ ಹುರಿಯಿರಿ.

    6.ಕೊನೆಗೆ ಸಕ್ಕರೆ , ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ .
    ನಂತರ ತೆಳು ಅವಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಂಡರೆ ಸಂಜೆ ತಿನ್ನಲು ಹಚ್ಚಿದ ಅವಲಕ್ಕಿ/ ಚೂಡಾ ಅವಲಕ್ಕಿ ರೆಡಿ.
    ಡಬ್ಬದಲ್ಲಿ ಎತ್ತಿಟ್ಟು, ಯಾವಾಗ ಬೇಕಾದರೂ ತಿನ್ನಬಹುದು

  • ಮಸಾಲೆಯುಕ್ತ ವಾಂಗಿಬಾತ್ ..!!

    ಮಸಾಲೆಯುಕ್ತ ವಾಂಗಿಬಾತ್ ..!!

    ಕರ್ನಾಟಕ ಪಾಕಪದ್ಧತಿಯ ಮಸಾಲೆಯುಕ್ತ ವಾಂಗಿಬಾತ್ ರುಚಿಕರವಾದ ಪಾಕವಿಧಾನ. … ವಾಂಗಿಬಾತ್ ಎಂಬುದು ಮಹಾರಾಷ್ಟ್ರ ಮತ್ತು ಕರ್ನಾಟಕ ತಿನಿಸುಗಳಲ್ಲಿ ಜನಪ್ರಿಯವಾಗಿರುವ ಒಂದು ಜಾತಿಯ ಬದನೇಕಾಯಿ(ಉದ್ದ ಬದನೆಕಾಯಿ ) ಆಧಾರಿತ ಭಕ್ಷ್ಯವಾಗಿದೆ.

    ಬೇಕಾಗುವ ಸಾಮಗ್ರಿ:

    ಅಕ್ಕಿ -ಒಂದು ಕಪ್
    ಬದನೆಕಾಯಿ -ನಾಲ್ಕು
    ದೊಡ್ಡ ಮೆಣಸಿನಕಾಯಿ 2
    ಎಣ್ಣೆ – 4 ಚಮಚ
    ಸಾಸಿವೆ 1 ಚಮಚ
    ಜೀರಿಗೆ 1 ಚಮಚ
    ಉದ್ದಿನಬೇಳೆ 1 ಚಮಚ
    ಅರಿಶಿಣ ಒಂದು ಚಿಟಿಕೆ
    ಇಂಗು ಒಂದು ಚಿಟಿಕೆ
    ಒಣಮೆಣಸಿನಕಾಯಿ -೩
    ಕರಿಬೇವಿನ ಎಲೆ -10
    ಮತ್ತು ನಿಂಬೆ ರಸ 1 ಚಮಚ
    ಉಪ್ಪು ರುಚಿಗೆ ತಕ್ಕಷ್ಟು

    ಮಸಾಲೆಗೆ ಹುರಿದುಕೊಳ್ಳಲು:

    ಕಡಲೆಬೇಳೆ ಉದ್ದಿನಬೇಳೆ ಲವಂಗ ದಾಲ್ಚಿನ್ನಿ ಕಾಳು ಮೆಣಸು ಕೊತ್ತಂಬರಿ ಕಾಳು ತಲಾ ಒಂದೊಂದು ಚಮಚ ಕೊಬ್ಬರಿ ತುರಿ ಅರ್ಧ ಕಪ್

    ಮಾಡುವ ವಿಧಾನ:

    ಅನ್ನ ಬೇಯಿಸಿಟ್ಟುಕೊಳ್ಳಿ.
    ಮಸಾಲೆ ಪದಾರ್ಥಗಳನ್ನು ಎಣ್ಣೆ ಹಾಕದೆ ಹುರಿದು ನೀರು ಸೇರಿಸದೆ ತರಿಯಾಗಿ ರುಬ್ಬಿಟ್ಟುಕೊಳ್ಳಿ
    ಬಾಣಲೆಗೆ ಎಣ್ಣೆ ಹಾಕಿ , ಒಣ ಮೆಣಸಿನ ಕಾಯಿ, ಸಾಸಿವೆ ,ಜೀರಿಗೆ ,ಬದನೆಕಾಯಿ ಹೋಳುಗಳನ್ನು ಸೇರಿಸಿ , ಮಸಾಲೆಯನ್ನು ಹಾಕಿ, ಸ್ವಲ್ಪ ಹೊತ್ತು ಹುರಿಯಿರಿ ಈಗ ಘಮ ಬಂದ ನಂತರ ಕೆಳಗಿಳಿಸಿ ಉಪ್ಪು ಸೇರಿಸಿ , ಬೆರೆಸಿ,ನಿಂಬೆರಸ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ
    ರುಚಿ ರುಚಿಯಾದ ವಾಂಗಿಬಾತ್ ಸವಿಯಲು ಸಿದ್ದ.

  • ಸ್ವಾದಿಷ್ಟವಾದ, ಆರೋಗ್ಯಯುಕ್ತ ಬೂದುಗುಂಬಳದ ಹಲ್ವ ಮಾಡಿ ಸವಿಯಿರಿ…!!!

    ಸ್ವಾದಿಷ್ಟವಾದ, ಆರೋಗ್ಯಯುಕ್ತ ಬೂದುಗುಂಬಳದ ಹಲ್ವ ಮಾಡಿ ಸವಿಯಿರಿ…!!!

    ಇನ್ನೇನು ಚಳಿಗಾಲ ಆರಂಭವಾಗುತ್ತಲಿದೆ. ಪರಿಸರದಲ್ಲಿ ಒಣಗಾಳಿಯು ಬೀಸುತ್ತಿರುತ್ತದೆ. ಚರ್ಮ ಒಡೆಯುತ್ತದೆ. ತುಪ್ಪದಲ್ಲಿ ತಯಾರಿಸಿದ ಹಲ್ವ ಇನ್ನಿತರ ಜಿಡ್ಡಿನಂಶವಿರುವ ಸಿಹಿ ತಿನಿಸುಗಳು ಕೂಡ ಈ ಋತುವಿನಲ್ಲಿ ಅಗತ್ಯವೆನಿಸುತ್ತದೆ.

    ನೀರಿನಂಶವು ಹೇರಳವಾಗಿರುವ ಬೂದುಗುಂಬಳ ಕಾಯಿಯಲ್ಲಿ ಪಾಸ್ಪರಸ್, ಕ್ಯಾಲ್ಸಿಯಂ, ಐರನ್, ಥಯಾಮಿನ್ ಮುಂತಾದ ಮಿನರಲ್ಸ್ ಅಂಶಗಳಿದ್ದು ಡಯಾಬಿಟಿಕ್ ವ್ಯಕ್ತಿಗಳಿಗೆ ಈ ತರಕಾರಿಯು ಒಂದು ವರವೆನ್ನಬಹುದು. ತಂಪುಗುಣವನ್ನು ಹೊಂದಿರುವ ಈ ತರಕಾರಿಯು ದೇಹದಲ್ಲಿನ ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಬೊಜ್ಜು, ಹೊಟ್ಟೆ ನೋವು, ಮೂಲವ್ಯಾದಿ, ಕಾಲು ನೋವು ಮುಂತಾದ ರೋಗಗಳಿಗೂ ಉತ್ತಮ ತರಕಾರಿಯೆನಿಸಿದೆ.
    ಸರಿ ಹಾಗಾದರೆ, ಬೂದುಗುಂಬಳದಿಂದ ತಯಾರಿಸುವ ಹಲ್ವವನ್ನು ಹೇಗೆ ಮಾಡುವುದೆಂದು ನೋಡೋಣ

    ಬೇಕಾಗುವ ಪದಾರ್ಥಗಳು:

    ಬೂದುಗುಂಬಳಕಾಯಿ ತುರಿ- 1 ಬಟ್ಟಲು
    ಸಕ್ಕರೆ- ಕಾಲು ಬಟ್ಟಲು
    ತುಪ್ಪ- ಅರ್ಧ ಲೋಟ
    ಗೋಡಂಬಿ, ದ್ರಾಕ್ಷಿ- ಸ್ವಲ್ಪ
    ಖೋವ- ಸ್ವಲ್ಪ (ಬೇಕಿದ್ದಲ್ಲಿ)

    ಮಾಡುವ ವಿಧಾನ:

    ಬೂದುಗುಂಬಳದ ಮೇಲಿನ ಸಿಪ್ಪೆಯನ್ನು ತೆಗೆದು, ಒಳಭಾಗದ ತಿರುಳು ಮತ್ತು ಬೀಜವನ್ನು ಹೊರತುಪಡಿಸಿ ತುರಿಯಲು ಅನುಕೂಲವಾಗುವಂತೆ ಉದ್ದುದ್ದನೆ ಹೆಚ್ಚಿಕೊಳ್ಳಿ. (ಆರೋಗ್ಯಕರ ತಿರುಳಿನಿಂದ ಸಾಸಿವೆಯನ್ನು ಮಾಡಬಹುದು ಅಥವಾ ದೋಸೆಹಿಟ್ಟು ರುಬ್ಬುವಾಗ ಜೊತೆಯಲ್ಲಿ ಸೇರಿಸಬಹುದು).
    ನಂತರ ಅದನ್ನು ತುರಿದುಕೊಳ್ಳಿ. ಅದರಲ್ಲಿನ ನೀರಿನಂಶದೊಂದಿಗೆ ತುರಿದ ಭಾಗವನ್ನು ದಪ್ಪ ತಳದ ಬಾಣಲೆಗೆ ಹಾಕಿ, ಸ್ಟವ್ ಹೊತ್ತಿಸಿ ಇಡಿ. ಅದರ ನೀರೆಲ್ಲಾ ಹೋಗಿ, ತುರಿಯು ಬೆಂದಾಗ ಒಂದು ಬಟ್ಟಲು ತುರಿಗೆ ಕಾಲು ಬಟ್ಟಲು ಸಕ್ಕರೆಯಂತೆ ಅಳೆದು ಹಾಕಿ. ಪ್ರಾರಂಭದಲ್ಲಿ ಕೈಮಗುಚುವ ಅಗತ್ಯವಿಲ್ಲ.
    ಸಕ್ಕರೆಯ ನೀರಿನಂಶವೂ ಹೋಗಿ ಗಟ್ಟಿಯಾಗುತ್ತಾ ಬಂದಾಗ ಉರಿಯನ್ನು ಸ್ವಲ್ಪ ಸಣ್ಣಗೆ ಮಾಡಿ, ಅಳೆದಿಟ್ಟ ತುಪ್ಪವನ್ನು ಆಗಾಗ ಸ್ವಲ್ಪ ಸ್ವಲ್ಪವೇ ಹಾಕುತ್ತಿರಿ. ಚೆನ್ನಾಗಿ ಗಟ್ಟಿಯಾಗುತ್ತಾ ಬರುತ್ತಿರುವಾಗ ಬಿಡದೆ ಕೈ ಮಗುಚಿ, ಪೂರ್ತಿ ತುಪ್ಪವನ್ನು ಹಾಕಿ. (ಕೊನೆಯಲ್ಲಿ ಬೇಕೆಂದರೆ ಸ್ವಲ್ಪ ಖೋವವನ್ನು ಹಾಕಿ).
    ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ. ಸ್ವಾದಿಷ್ಟವಾದ, ಆರೋಗ್ಯಯುಕ್ತ ಬೂದುಗುಂಬಳದ ಹಲ್ವ ಸವಿಯಲು ಸಿದ್ಧ. ಬೌಲ್ ಗೆ ಹಾಕಿ ಸರ್ವ್ ಮಾಡಿ.

    ಹಲ್ವದಲ್ಲಿ ನೀರಿನಂಶವು ಸ್ವಲ್ಪವೂ ಇರದೆ, ತುಂಬಾ ಗಟ್ಟಿಯಾಗಿದ್ದಲ್ಲಿ ಫ್ರಿಜ್ ನ ಹೊರತಾಗಿ ಒಂದು ವಾರದವರೆಗೂ ಕೆಡದೆ ಇರುತ್ತದೆ.

  • ಪತ್ರೊಡೆ  ತಯಾರಿಸೋದು ಹೇಗೆ?,ನೀವೂ ಮಾಡಬೇಕೇ?  ತಿಳಿಯೋಣ ಬನ್ನಿ …!!

    ಪತ್ರೊಡೆ ತಯಾರಿಸೋದು ಹೇಗೆ?,ನೀವೂ ಮಾಡಬೇಕೇ? ತಿಳಿಯೋಣ ಬನ್ನಿ …!!

    ಪತ್ರೊಡೆಯನ್ನು ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಜಾಸ್ತಿಯಾಗಿ ತಯಾರಿಸುತ್ತಾರೆ. ಮರದ ಕೆಸ ಅಥವಾ ಹಿತ್ತಲಿನ ತೋಟ ಗದ್ದೆ ಬಯಲಿನ ಮರದಲ್ಲಿ ಬೆಳದ ಸೊಪ್ಪನ್ನು ಕಟಾವು ಮಾಡಿ ತಯಾರಿಸುತ್ತಾರೆ. ಈ ತಿಂಡಿ ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಈ ತಿಂಡಿಯಿಂದ ದೂರವಿರುತ್ತಾರೆ. ನಾವು ಇವತ್ತು ಪತ್ರೊಡೆ ಹೇಗೆ ತಯಾರಿಸೋದು ಎಂದು ತಿಳಿಯೋಣ.

    ಬೇಕಾಗುವ ಸಾಮಾಗ್ರಿಗಳು : –

    ಕೆಸುವಿನ ಎಲೆ – 10
    ಬೆಳ್ತಿಗೆ ಅಕ್ಕಿ – 1 ಲೋಟ
    ತೆಂಗಿನಕಾಯಿ ತುರಿ – 1 ಕಪ್
    ಒಣಮೆಣಸು – 4
    ಉದ್ದಿನ ಬೇಳೆ – 2 ಚಮಚ
    ಕೊತ್ತಂಬರಿ – 2 ಚಮಚ
    ಮೆಂತೆ – 1 ಚಮಚ
    ಹುಣಿಸೆ ಹುಳಿ – ನೆಲ್ಲಿಕಾಯಿ ಗಾತ್ರದಷ್ಟು
    ಬೆಲ್ಲ – ಲಿಂಬೆಹಣ್ಣು ಗಾತ್ರದಷ್ಟು
    ಇಂಗು – ಹುಣಿಸೆಬೀಜ ಗಾತ್ರದಷ್ಟು

    ಮಾಡುವ ವಿಧಾನ : –

    ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದು ನಾರನ್ನು ತೆಗೆಯಿರಿ. ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಒಣಮೆಣಸು, ಉದ್ದಿನಬೇಳೆ, ಕೊತ್ತಂಬರಿ ಮತ್ತು ಮೆಂತೆಗಳನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಹುರಿದು ನೆನೆಸಿದ ಅಕ್ಕಿಯೊಂದಿಗೆ ಹಾಕಿ. ಇದಕ್ಕೆ ತೆಂಗಿನ ಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಇಂಗು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಇಡ್ಲಿ ಹಿಟ್ಟಿನ ಹದದಷ್ಟು ದಪ್ಪಗಿರಲಿ. ಈಗ ನಾರು ತೆಗೆದಿರಿಸಿದ ಕೆಸುವಿನ ಒಂದೊಂದೇ ಎಲೆಗೆ ಈ ಹಿಟ್ಟನ್ನು ಸವರಿ ಇನ್ನೊಂದು ಎಲೆಯನ್ನು ಅದರ ಮೇಲಿರಿಸಿ ಪುನಃ ಹಿಟ್ಟು ಸವರಿ ಚಾಪೆ ಮಡಿಚುವ ರೀತಿಯಲ್ಲಿ ಮಡಿಚಿರಿ. ಹೀಗೆ ಸುತ್ತಿಟ್ಟ ಪತ್ರೋಡೆಗಳನ್ನು ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಇಡ್ಲಿ ಬೇಯಿಸಿದಂತೆ ಹಬೆಯಲ್ಲಿ 1/2 ಗಂಟೆಗಳ ಕಾಲ ಬೇಯಿಸಿ. ಈಗ ಬಿಸಿ ಬಿಸಿ ಪತ್ರೋಡೆ ಕೊಬ್ಬರಿ ಎಣ್ಣೆಯೊಂದಿಗೆ ಸವಿಯಲು ಕೊಡಿ.

    ಪತ್ರೋಡೆ ಹೀಟ್ಟು ರುಬ್ಬುವಾಗ 1 ಈರುಳ್ಳಿ ಹಾಕಿದರೆ ಘಮಘಮವೆನ್ನುವ ಪರಿಮಳದೊಂದಿಗೆ ಪತ್ರೋಡೆಯು ಇನ್ನೂ ರುಚಿಯಾಗುತ್ತದೆ. ಇಡಿಹೆಸರು ಕಾಳನ್ನು ನೆನೆಸಿ ಅಕ್ಕಿಯೊಂದಿಗೆ ಹಾಕಬಹುದು.

  • ಉತ್ತರ ಭಾರತದ ಶೈಲಿಯ ಆಲೋ ಪರೋಟಾ..!!

    ಉತ್ತರ ಭಾರತದ ಶೈಲಿಯ ಆಲೋ ಪರೋಟಾ..!!

    ಹೆಚ್ಚಾಗಿ ಉತ್ತರ ಭಾರತದಲ್ಲಿ ಜನರು ತಿನ್ನುವ ಆಹಾರಗಳಲ್ಲಿ ಹೆಸರುವಾಸಿಯಾಗಿರುವ ಆಲೋ ಪರೋಟಾವು ಒಂದು . ದಕ್ಷಿಣದಲ್ಲಿ ದೋಸೆ, ಇಡ್ಲಿ ಹೇಗೆ ಖ್ಯಾತಿಯನ್ನು ಪಡೆದುಕೊಂಡಿದೆಯೋ ಅಂತೆಯೇ ಉತ್ತರದಲ್ಲಿ ಆಲೂ ಪರೋಟಾ ಅಲ್ಲಿನವರಿಗೆ ಹೆಚ್ಚು ಪ್ರಿಯವಾದುದು. ಆಲೂಗಡ್ಡೆ ಪಲ್ಯದೊಂದಿಗೆ ತಯಾರು ಮಾಡಲಾದ ಈ ಪರೋಟಾ ರೆಸಿಪಿ ಆರೋಗ್ಯಕರ ಬ್ರೇಕ್ ಫಾಸ್ನಂತೆ ಕೂಡ ಸೇವಿಸಬಹುದು ಮಧ್ಯಾಹ್ನದೂಟಕ್ಕೂ ಓಕೆಯಾಗಿರುವಂತಹದ್ದು, ಹಾಗಿದ್ದರೆ ಅತಿ ಸರಳ ವಿಧಾನದಲ್ಲಿ ಆಲೂ ಪರೋಟಾವನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ನೋಡೋಣ.

    ಬೇಕಾಗುವ ಸಾಮಾಗ್ರಿಗಳು:

    *3-4 ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆ
    *1 ಅಥವಾ 2 ಹಸಿಮೆಣಸು
    *1/2 ಚಮಚ ಮೆಣಸಿನ ಹುಡಿ
    *1/2 ಚಮಚ ಅಮೆಚೂರ್ ಹುಡಿ
    *2 ರಿಂದ 3 ಚಮಚ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
    *ಉಪ್ಪು ರುಚಿಗೆ ತಕ್ಕಷ್ಟು
    *ಎಣ್ಣೆ ಅಥವಾ ತುಪ್ಪ ಪರೋಟಾ ಬೇಯಿಸಲು ಪರೋಟಾ ತಯಾರಿಗೆ
    *2 ಕಪ್ ಗೋಧಿ ಹಿಟ್ಟು
    *1/2 ಚಮಚ ಉಪ್ಪು
    *1-2 ಚಮಚ ತುಪ್ಪ ಅಥವಾ ಎಣ್ಣೆ
    *ಹಿಟ್ಟು ಕಲಸಲು ಸಾಕಷ್ಟು ನೀರು
    *ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಿ
    * ಆಲೂಗಡ್ಡೆಯನ್ನು ಚೆನ್ನಾಗಿ ಹಿಸುಕಿಕೊಂಡಿರಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
    * ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಮ್ ಮಸಾಲಾ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.
    *ಪರೋಟಾಗಾಗಿ ಗೋಧಿ ಹಿಟ್ಟು ಕಲಸುವ

    ತಯಾರಿಸುವ ವಿಧಾನ:
    ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.

    ಮಾಡುವ ವಿಧಾನ:

    1. ಮೊದಲಿಗೆ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು ನಾಲ್ಕೂ ಭಾಗ ಮಡಚಿಕೊಳ್ಳಿ.
    2. ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.
    3. ಗ್ಯಾಸ್ನಲ್ಲಿ ತವಾ ಇಟ್ಟುಕೊಂಡು 1/2 ಚಮಚದಷ್ಟು ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿಕೊಳ್ಳಿ.
    4.ಇದೇ ರೀತಿ ಉಳಿದ ಪರೋಟಾಗಳನ್ನು ಸಿದ್ಧಪಡಿಸಿಕೊಳ್ಳಿ.

  • ಬೆಳಗ್ಗಿನ ಉಪಹಾರಕ್ಕೆ ಮಾಡಿ ಘಮ-ಘಮಿಸುವ ತರಕಾರಿ ಪಲಾವ್.!!

    ಬೆಳಗ್ಗಿನ ಉಪಹಾರಕ್ಕೆ ಮಾಡಿ ಘಮ-ಘಮಿಸುವ ತರಕಾರಿ ಪಲಾವ್.!!

    ಒಂದಷ್ಟು ತರಕಾರಿಗಳನ್ನು ಸೇರಿಸಿ ಮಾಡುವ ಪಲಾವ್ ಆರೋಗ್ಯಕ್ಕೂ ಉತ್ತಮ. ಜತೆಗೆ ರುಚಿಯೂ ಇರುತ್ತದೆ. ಆದ್ದರಿಂದ ತರಕಾರಿ ಪಲಾವ್ ಮಾಡಿ ಅದಕ್ಕೊಂದಿಷ್ಟು ಬರೀ ಮೊಸರು ಅಥವಾ ಮೊಸರು ಸಲಾಡ್ ಸೇರಿಸಿ ತಿಂದರೆ ಮಜಾವೇ ಮಜಾ. ಇಷ್ಟಕ್ಕೂ ತರಕಾರಿ ಪಲಾವ್ ಮಾಡುವುದು ಕೂಡ ಸುಲಭವೇ..

    ತರಕಾರಿ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು:

    ಅಕ್ಕಿ-1ಕಪ್
    ಕ್ಯಾರೆಟ್-1
    ಗೆಡ್ಡೆಕೋಸು-1
    ಬೀನ್ಸ್-100ಗ್ರಾಂ
    ಹಸಿಬಟಾಣಿ- 100ಗ್ರಾಂ
    ಈರುಳ್ಳಿ-1
    ಟ್ಯೊಮ್ಯಾಟೋ- 2
    ಕರಿಬೇವು- ಸ್ವಲ್ಪ
    ಕಾಯಿತುರಿ- ಅರ್ಧಬಟ್ಟಲು
    ಹಸಿಮೆಣಸಿನ ಕಾಯಿ-4
    ಶುಂಠಿ- ಸ್ವಲ್ಪ
    ಬೆಳ್ಳುಳ್ಳಿ- ಸ್ವಲ್ಪ
    ಚಕ್ಕೆ, ಮೊಗ್ಗು, ಲವಂಗ, ಧನಿಯಾ- ಸ್ವಲ್ಪ
    ಕೊತ್ತಂಬರಿ ಸೊಪ್ಪು- ಸ್ವಲ್ಪ
    ಎಣ್ಣೆ- ಸ್ವಲ್ಪ
    ಉಪ್ಪು- ಸ್ವಲ್ಪ

    ಮಾಡುವ ವಿಧಾನ:.

    ಮೊದಲಿಗೆ ತರಕಾರಿ, ಟ್ಯೊಮ್ಯಾಟೋ ಈರುಳ್ಳಿಯನ್ನು ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದೆಡೆ ಮಸಾಲೆ ಪದಾರ್ಥಗಳಾದ ಕಾಯಿ ತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಮೊಗ್ಗು, ಲವಂಗ, ಧನಿಯಾ ಎಲ್ಲವನ್ನು ಸ್ವಲ್ಪ ಎಣ್ಣೆಯಲ್ಲಿ ಬಿಸಿ ಮಾಡಿಕೊಂಡು ಬಳಿಕ ಮಿಕ್ಸಿಯಲ್ಲಿ ರುಬ್ಬಬೇಕು. ಮತ್ತೊಂದೆಡೆ ಕುಕ್ಕರ್ನಲ್ಲಿ ಎಣ್ಣೆ ಹಾಕಿ ಕರಿಬೇವು, ಈರುಳ್ಳಿ ಸೌಟುನಿಂದ ತಿರುಗಿಸಿ ಬಳಿಕ ತರಕಾರಿಗಳನ್ನು ಹಾಕಿ ಬಾಡಿಸಬೇಕು. ಆ ನಂತರ ನೀರು(ಸಾಮಾನ್ಯವಾಗಿ ಅನ್ನಕ್ಕೆ ಹಾಕುವಷ್ಟು) ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಕ್ಕಿಯನ್ನು ಹಾಕಿ ಮುಚ್ಚಳ ಮುಚ್ಚಿ ಒಂದೆರಡು ವಿಶಲ್ ಬೇಯಿಸಬೇಕು. ಬಳಿಕ ಇಳಿಸಿ ಕುಕ್ಕರ್ ಗಾಳಿ ಹೋದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಚೆನ್ನಾಗಿರುತ್ತದೆ.

  • ನೀವೇ ಮಾಡಿ ತಿನ್ನಬಹುದಾದ ಸಿಹಿ-ಸಿಹಿ ಧಾರವಾಡ ಪೇಡಾ!

    ನೀವೇ ಮಾಡಿ ತಿನ್ನಬಹುದಾದ ಸಿಹಿ-ಸಿಹಿ ಧಾರವಾಡ ಪೇಡಾ!

    ಧಾರವಾಡ ಪೇಡ ಕರ್ನಾಟಕ ರಾಜ್ಯದ ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಪೇಡದ ಹೆಸರಲ್ಲಿ ಧಾರವಾಡ ಎಂಬ ಸ್ಥಳನಾಮವಿದೆ. ಹಾಗಾಗಿ ಇದು ಉತ್ತರ ಕರ್ನಾಡಕದ ಧಾರವಾಡ ಸ್ಥಳದಲ್ಲಿನ ಉತ್ಪಾದನೆಯಾಗಿದೆ. ಈ ಪೇಡವು ದೇಶಾದ್ಯಂತ ಪ್ರಸಿದ್ಧವಾಗಿದೆ.

    ಬೇಕಾಗಿರುವ ಸಾಮಗ್ರಿಗಳು:

    1 ಲೀಟರ್ ಹಾಲು
    3 ಚಮಚ ಸಕ್ಕರೆ
    3 ಚಮಚ ತುಪ್ಪ
    ಏಲಕ್ಕಿ ಪುಡಿ
    ಸಕ್ಕರೆ ಪುಡಿ

    ಮಾಡುವ ಬಗೆ:

    *ಹಾಲು ಕಾಯಿಸಿ ಅದಕ್ಕೆ ನಿಂಬೆ ಹಣ್ಣು ರಸ ಹಿಂಡಿ ಹಾಲು ಒಡೆಸಿ ನೀರು ತೆಗೆಯಿರಿ

    *ಒಂದು ತೆಳುವಾದ ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ, ಹಿಂಡಿ, ನೀರು ತೆಗೆಯಿರಿ

    *ಈ ಪನೀರನ್ನು ಒಂದು ಬಾಣಲೆಗೆ ಹಾಕಿ ಬಿಸಿ ಮಾಡಿ

    *ಸಣ್ಣ ಉರಿಯಲ್ಲಿ ಇಟ್ಟು, 2 ಚಮಚ ಸಕ್ಕರೆ, 1 ಚಮಚ ತುಪ್ಪ ಹಾಕಿ ಚೆನ್ನಾಗಿ ಕಂದು ಬಣ್ಣ ಬರುವವರೆಗೆ ಹುರಿಯಿರಿ

    *ತಳ ಹಿಡಿದಾಗ ಹಾಲು ಮತ್ತು ತುಪ್ಪ ಹಾಕಿ ಚೆನ್ನಾಗಿ ತಿರುವಿರಿ

    *ಸಕ್ಕರೆ, ತುಪ್ಪ, ಹಾಲು ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೂ ಹಾಗೂ ಕಂದು ಬಣ್ಣ ಬರುವವರೆಗೆ ತಿರುವಿ ಹಾಕಿ, ಒಲೆ ಆರಿಸಿ

    *ಏಲಕ್ಕಿ ಪುಡಿಯನ್ನು ತಿರುವಿ ಇಟ್ಟ ಪೇಡಾ ಮಿಶ್ರಣಕ್ಕೆ ಹಾಕಿ ಕೈಯಾಡಿಸಿ,

    *ದುಂಡಾಗಿ ಅತವಾ ಉದ್ದ ಆಕಾರದಲ್ಲಿ ಪೇಡಾ ಮಾಡಿ, ಸಕ್ಕರೆ ಪುಡಿಯಲ್ಲಿ ಹೊರಳಾಡಿಸಿ ಒಂದೊಂದೇ ತೆಗೆದಿಡಿ.

    ಈಗ ರುಚಿಯಾದ ದಾರವಾಡ ಪೇಡಾ ತಿನ್ನಲು ರೆಡಿ