Home Food ಬೆಳಗ್ಗಿನ ಉಪಹಾರಕ್ಕೆ ಮಾಡಿ ಘಮ-ಘಮಿಸುವ ತರಕಾರಿ ಪಲಾವ್.!!

ಬೆಳಗ್ಗಿನ ಉಪಹಾರಕ್ಕೆ ಮಾಡಿ ಘಮ-ಘಮಿಸುವ ತರಕಾರಿ ಪಲಾವ್.!!

ಒಂದಷ್ಟು ತರಕಾರಿಗಳನ್ನು ಸೇರಿಸಿ ಮಾಡುವ ಪಲಾವ್ ಆರೋಗ್ಯಕ್ಕೂ ಉತ್ತಮ. ಜತೆಗೆ ರುಚಿಯೂ ಇರುತ್ತದೆ. ಆದ್ದರಿಂದ ತರಕಾರಿ ಪಲಾವ್ ಮಾಡಿ ಅದಕ್ಕೊಂದಿಷ್ಟು ಬರೀ ಮೊಸರು ಅಥವಾ ಮೊಸರು ಸಲಾಡ್ ಸೇರಿಸಿ ತಿಂದರೆ ಮಜಾವೇ ಮಜಾ. ಇಷ್ಟಕ್ಕೂ ತರಕಾರಿ ಪಲಾವ್ ಮಾಡುವುದು ಕೂಡ ಸುಲಭವೇ..

ತರಕಾರಿ ಪಲಾವ್ ಮಾಡಲು ಬೇಕಾಗುವ ಪದಾರ್ಥಗಳು:

ಅಕ್ಕಿ-1ಕಪ್
ಕ್ಯಾರೆಟ್-1
ಗೆಡ್ಡೆಕೋಸು-1
ಬೀನ್ಸ್-100ಗ್ರಾಂ
ಹಸಿಬಟಾಣಿ- 100ಗ್ರಾಂ
ಈರುಳ್ಳಿ-1
ಟ್ಯೊಮ್ಯಾಟೋ- 2
ಕರಿಬೇವು- ಸ್ವಲ್ಪ
ಕಾಯಿತುರಿ- ಅರ್ಧಬಟ್ಟಲು
ಹಸಿಮೆಣಸಿನ ಕಾಯಿ-4
ಶುಂಠಿ- ಸ್ವಲ್ಪ
ಬೆಳ್ಳುಳ್ಳಿ- ಸ್ವಲ್ಪ
ಚಕ್ಕೆ, ಮೊಗ್ಗು, ಲವಂಗ, ಧನಿಯಾ- ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಎಣ್ಣೆ- ಸ್ವಲ್ಪ
ಉಪ್ಪು- ಸ್ವಲ್ಪ

ಮಾಡುವ ವಿಧಾನ:.

ಮೊದಲಿಗೆ ತರಕಾರಿ, ಟ್ಯೊಮ್ಯಾಟೋ ಈರುಳ್ಳಿಯನ್ನು ಹಚ್ಚಿಟ್ಟುಕೊಳ್ಳಬೇಕು. ಇನ್ನೊಂದೆಡೆ ಮಸಾಲೆ ಪದಾರ್ಥಗಳಾದ ಕಾಯಿ ತುರಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಮೊಗ್ಗು, ಲವಂಗ, ಧನಿಯಾ ಎಲ್ಲವನ್ನು ಸ್ವಲ್ಪ ಎಣ್ಣೆಯಲ್ಲಿ ಬಿಸಿ ಮಾಡಿಕೊಂಡು ಬಳಿಕ ಮಿಕ್ಸಿಯಲ್ಲಿ ರುಬ್ಬಬೇಕು. ಮತ್ತೊಂದೆಡೆ ಕುಕ್ಕರ್ನಲ್ಲಿ ಎಣ್ಣೆ ಹಾಕಿ ಕರಿಬೇವು, ಈರುಳ್ಳಿ ಸೌಟುನಿಂದ ತಿರುಗಿಸಿ ಬಳಿಕ ತರಕಾರಿಗಳನ್ನು ಹಾಕಿ ಬಾಡಿಸಬೇಕು. ಆ ನಂತರ ನೀರು(ಸಾಮಾನ್ಯವಾಗಿ ಅನ್ನಕ್ಕೆ ಹಾಕುವಷ್ಟು) ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಕ್ಕಿಯನ್ನು ಹಾಕಿ ಮುಚ್ಚಳ ಮುಚ್ಚಿ ಒಂದೆರಡು ವಿಶಲ್ ಬೇಯಿಸಬೇಕು. ಬಳಿಕ ಇಳಿಸಿ ಕುಕ್ಕರ್ ಗಾಳಿ ಹೋದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಚೆನ್ನಾಗಿರುತ್ತದೆ.