Satwadhara News

Category: Health

  • we are able to create beautifull and amazing things

    we are able to create beautifull and amazing things

    Aenean feugiat purus vitae sollicitudin laoreet. Duis fringilla ligula vel velit lacinia, in mattis felis consectetur. Sed at pretium orci. Ut tempus libero odio, sit amet consequat neque pretium ut. Integer hendrerit mauris nec odio auctor suscipit. Proin porttitor turpis vitae ligula dictum, a sollicitudin purus congue. Nulla viverra nisi ex, ut ornare tellus cursus quis. Nulla posuere tincidunt leo at condimentum. Sed egestas tortor a nisi fringilla, id cursus odio rhoncus.

  • ಹಸುವಿನ ತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ನಿಮಗೆ ಗೊತ್ತೆ??

    ಹಸುವಿನ ತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು ನಿಮಗೆ ಗೊತ್ತೆ??

    ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ. ಇದು ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣ ದಲ್ಲಿರುವ ಕ್ಯಾಲೋರಿಗಳು, ಇ ಪೋಷಕಾಂಶ ಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ.

     ಆದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ತುಪ್ಪದಲ್ಲೂ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಅಪಾರ ವಾದುದರಿಂದ ಎಮ್ಮೆ ಹಾಲಿನ ತುಪ್ಪಕ್ಕಿಂತ ಹಸುವಿನ ಹಾಲಿನ ತುಪ್ಪವೇ ಉತೃಷ್ಕವಾಗಿದೆ.

     ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ. ಅಷ್ಟೆ ಅಲ್ಲ, ಹಸುವಿನ ತುಪ್ಪವನ್ನು ಉಪಯೋಗಿಸಿ ಮೈಯನ್ನು ಮಸಾಜ್ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

    ಹಸುವಿನ ತುಪ್ಪವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು:

    *ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ. ಕ್ಯಾಲ್ಸಿಯಂ ಇದ್ದು ಇದು ನಮ್ಮ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.

    *ತುಪ್ಪದಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ಕಣ್ಣುಗಳಿಗೆ ಹಾಗೂ ದೃಷ್ಟಿನರಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಅಲ್ಲದೇ ಕಣ್ಣೀರಿನ ಪ್ರಮಾಣವನ್ನು ಹೆಚ್ಚಿಸಿ ಕಣ್ಣುಗಳಲ್ಲಿ ತೇವವನ್ನೂ ಹೆಚ್ಚಿಸುತ್ತದೆ.

    *ತುಪ್ಪದಲ್ಲಿ ಉತ್ತಮ ಕೊಬ್ಬು ಮತ್ತು ಒಮೆಗಾ 3 ಕೊಬ್ಬಿನ ಆಮ್ಲವಿರುವ ಕಾರಣ ಇದು ಆರೋಗ್ಯಕ್ಕೆ ಹಾಗೂ ವಿಶೇಷವಾಗಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುತ್ತದೆ.

    *ತುಪ್ಪದಲ್ಲಿ ಬ್ಯೂಟೈರಿಕ್ ಆಮ್ಲ ಎಂಬ ಕಿಣ್ವವಿದೆ. ಇದು ವಿಶೇಷವಾಗಿ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ ಹಾಗೂ ಕರುಳುಗಳಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಇದರಿಂದ ಆಮ್ಲೀಯತೆ ಹಾಗೂ ತನ್ಮೂಲಕ ಎದುರಾಗುವ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

    *ಚಿಕ್ಕ ಪುಟ್ಟ ಗಾಯ, ತರಚುಗಾಯ, ಸುಟ್ಟ ಗಾಯ ಮೊದಲಾದವುಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ.

    *ತುಪ್ಪದಲ್ಲಿ ಪ್ರೋಟೀನು ಮತ್ತು ಕೊಬ್ಬು ಹೆಚ್ಚಿದ್ದು ಇದು ಪುರುಷರ ಶಕ್ತಿಯನ್ನು ಉತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ.

    *ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಪ್ರತಿ ಊಟದೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕದ ರೂಪದಲ್ಲಿ ನೆರವಾಗುತ್ತದೆ.

    *ತುಪ್ಪದ ಸೇವನೆಯಿಂದ ಕ್ಯಾನ್ಸರ್ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ತುಪ್ಪವನ್ನು ನಿತ್ಯವೂ ಸೇವಿಸುತ್ತಾ ಬಂದಿರುವವರಲ್ಲಿ ಕ್ಯಾನ್ಸರ್ ಪ್ರಮಾಣ ಅತಿ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

    *ತುಪ್ಪವನ್ನು ಸೇವಿಸುತ್ತಾ ಬಂದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

    *ತುಪ್ಪ ಒಂದು ಉತ್ತಮ ಕಾಮೋತ್ತೇಜಕ ಹಾಗೂ ವೀರ್ಯವರ್ಧಕವೂ ಆಗಿದೆ. ನಿತ್ಯದ ಸೇವನೆಯಿಂದ ಸಂತಾನ ಭಾಗ್ಯದ ಸಾಧ್ಯತೆ ಹೆಚ್ಚುತ್ತದೆ.

    *ತುಪ್ಪ ಚರ್ಮದ ಆರೈಕೆಯಲ್ಲಿಯೂ ಉಪಯೋಗಕ್ಕೆ ಬರುತ್ತದೆ.

    *ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚವೇ ಕೊಂಚ ತುಪ್ಪವನ್ನು ಸೇರಿಸಿ ಕುಡಿಯುವ ಮೂಲಕ ಉತ್ತಮ ನಿದ್ದೆ ಬರುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಂಡು. ಬೆಳಿಗ್ಗೆ ಕಲ್ಮಶಗಳು ಸುಲಭವಾಗಿ ಹೊರ ಹೋಗಲು ಸಾಧ್ಯವಾಗುತ್ತದೆ.

    *ತುಪ್ಪವನ್ನು ಸೇವಿಸುತ್ತಾ ಬಂದರೆ ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚುತ್ತದೆ.

    *ಮೂಗಿನಿಂದ ರಕ್ತ ಬರುತ್ತಿದ್ದರೆ ಕರಗಿದ ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳ ಒಳಗೆ, ವಿಶೇಷವಾಗಿ ರಕ್ತ ಒಸರುವೆಡೆ ದಿನಕ್ಕೆ ಮೂರು ನಾಲ್ಕು ಬಾರಿಯಂತೆ ಎರಡರಿಂದ ಮೂರು ದಿನ ಹಚ್ಚಬೇಕು. ಇದರಿಂದ ರಕ್ತ ಬರುವುದು ನಿಲ್ಲುತ್ತದೆ.

    *ಜ್ವರದ ಸಮಸ್ಯೆ ಇದ್ದಾಗ ಅಲ್ಪ ಪ್ರಮಾಣದಲ್ಲಿ ತುಪ್ಪ ಸೇವಿಸಿದರೆ ದೇಹದ ಉರಿ ಕಡಿಮೆಯಾಗುತ್ತದೆ.

    *ಒಣಕೆಮ್ಮು ಮತ್ತು ಕಫ ದ ಸಮಸ್ಯೆ ಇದ್ದಾಗ ಸ್ವಲ್ಪ ತುಪ್ಪವನ್ನು ಗಂಟಲಿನಲ್ಲಿ ಇಟ್ಟುಕೊಂಡು ಒಂದು ನಿಮಿಷದ ನಂತರ ನುಂಗಿದರೆ ಕಫ ಕಡಿಮೆಯಾಗುತ್ತದೆ.

    *ಮದ್ಯಪಾನಿಗಳು ತುಪ್ಪವನ್ನು ಸೇವಿಸಿದರೆ ಅವರ ಶರೀರದ ಅಂಗಗಳನ್ನು ರಕ್ಷಿಸುತ್ತದೆ.

    *ಹೆರಿಗೆ ನೋವು ಪ್ರಾರಂಭ ಅದ ತಕ್ಷಣ ಬಿಸಿ ಗಂಜಿಗೆ ತುಪ್ಪ ಹಾಕಿ ಸೇವಿಸಿದರೆ ಸುಖ ಪ್ರಸವಕ್ಕೆ ಸಹಕಾರಿಯಾಗುತ್ತದೆ.

    *ಹೊಟ್ಟೆಯಲ್ಲಿ ನೋವು. ಶಬ್ದ. ವಾಂತಿ ಇದ್ದರೆ ತುಪ್ಪದ ಸೇವನೆ ಒಳ್ಳೆಯದು.
    ಒಟ್ಟಾರೆ ತುಪ್ಪವು ತಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ನಿತ್ಯವೂ ಚಿಕ್ಕ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.

  • ‘ಅಡುಗೆಮನೆಯಲ್ಲಿ ‘ಮಸಾಲೆ’ಯಾಗಿ, ಒಂದೇ ಅಲ್ಲ,ಔಷಧಿ’ಯಾಗಿಯೂ ಬಳಸಬಹುದು ಈ ಜಾಯಿಕಾಯಿ..!!

    ‘ಅಡುಗೆಮನೆಯಲ್ಲಿ ‘ಮಸಾಲೆ’ಯಾಗಿ, ಒಂದೇ ಅಲ್ಲ,ಔಷಧಿ’ಯಾಗಿಯೂ ಬಳಸಬಹುದು ಈ ಜಾಯಿಕಾಯಿ..!!

      ಶತಮಾನಗಳಿಂದ  ಜಾಯಿಕಾಯಿಯನ್ನು ನಮ್ಮ ಅಡುಗೆ ಮನೆಗಳಲ್ಲಿ ಮಸಾಲೆ ಪದಾರ್ಥಗಳಲ್ಲಿ ಬಳಕೆ ಮಾಡುವ ಪದ್ದತಿ ರೂಢಿಯಲ್ಲಿದೆ. ಅದರದೇ ಆದ ವಿಶೇಷವಾದ ಪರಿಮಳ ಮತ್ತು ಗುಣಗಳಿಂದಾಗಿ ಯಾವಾಗ್ಲೂ ಕೂಡ ಆಯುರ್ವೇದದಲ್ಲಿ ಮಹತ್ವವನ್ನು ನೀಡಲಾಗಿದೆ. ಇದು ಪ್ರಪಂಚದ ಎಲ್ಲಾ ಭಾಗಗಳಲ್ಲೂ ಬಳಸುವ ಮಸಾಲೆ ಪದಾರ್ಥ ಎನಿಸಿಕೊಂಡಿದೆ..

    ಜಾಯಿಕಾಯಿಯಿಂದ ನಮ್ಮ ದೇಹಕ್ಕೆ ಹಲವು ನ್ಯೂಟ್ರಿಯಂಟ್ಸ್‌ಗಳು ದೊರಕುವುದರಿಂದಾಗಿ ಅದರ ಬಳಕೆ ಅಡುಗೆ ಮನೆಯಲ್ಲಿ ಯಾವಾಗ್ಲೂ ಚಾಲ್ತಿಯಲ್ಲಿರೋದು ಒಳಿತು.

    ಜಾಯಿಕಾಯಿ ಹಸಿಯಾಗಿರುವಾಗ ಅದರ ಸಿಪ್ಪೆಯಿಂದಲೂ ತಂಬಳಿ, ಚಟ್ನಿಯಂತಹ ಖಾದ್ಯಗಳನ್ನು ತಯಾರಿಸಿಕೊಳ್ಳಬಹುದು. ಜಾಯಿಕಾಯಿ ಮಾತ್ರವಲ್ಲ, ಜಾಯಿಪತ್ರೆ ಮತ್ತು ಜಾಯಿಕಾಯಿಯ ಹೊರ ಭಾಗದ ಸಿಪ್ಪೆ ಕೂಡ ಈ ಎಲ್ಲಾ ಕೆಳಗಿನ ಗುಣಗಳನ್ನು ಹೊಂದಿರುತ್ತೆ. ಹಾಗಾಗಿ ಈ ಕಾಯಿಯ ತೃಣವೂ ಅಪ್ರಯೋಜಕವಲ್ಲ.ಬದಲಾಗಿ ಎಲ್ಲವೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ..

    • ನಮ್ಮ ಮನಸ್ಸನ್ನು ಸಾಂತ್ವನಗೊಳಿಸುವ ಶಕ್ತಿಯಿದೆ.
    • ಇದರ ‘ಬೀಜ’ ಹಾಗೂ ‘ಪ’ತ್ರೆ ವಿವಿಧ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
    • ‘ಹುರಿದ ಜಾಯಿಪುಡಿ’ನ್ನು ಬೆಲ್ಲದ ಜೊತೆ ಸೇರಿಸಿ ತಿಂದರೆ ಅಜೀರ್ಣದ ಭೇದಿ ನಿಲ್ಲುತ್ತದೆ.
    • ಇದರ ಚೂರ್ಣವನ್ನು ಬಾಳೆಹಣ್ಣಿನೊಂದಿಗೆ ತಿಂದರೂ ಭೇದಿ ಶಮನವಾಗುತ್ತದೆ.
    • ‘ಜಾಯಿಪತ್ರೆ’ಗಳನ್ನು ‘ಅಡಿಕೆಪುಡಿ’ಯೊಂದಿಗೆ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.
    • ನಿದ್ರಾಹೀನತೆಯ ಪರಿಹಾರಕ್ಕಾಗಿ,
    • ತಲೆಗೆ ಬಳಸುವ ಎಣ್ಣೆಗಾಗಿ
    • ಪುಡಿಯನ್ನು ಕುದಿಯುವ ನೀರಿಗೆ ಹಾಕಿಬಾಯಿಮುಕ್ಕಳಿಸಿದರೆ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
    • ‘ಜಾಯಿಪುಡಿ’ಯನ್ನು ಸೈಂಧವ ಲವಣದೊಡನೆ ಸೇರಿಸಿ ಹಲ್ಲುಜ್ಜುವುದರಿಂದ ವಸಡುಗಳ ರಕ್ತಸ್ರಾವ ನಿಲ್ಲುತ್ತದೆ.
    • ‘ಜಾಯಿಕಾಯಿ’ಯನ್ನು ಅತಿಯಾಗಿ ಬಳಸಿದರೆ ಅಮಲನ್ನು ತರುತ್ತದೆ. ಆದ್ದರಿಂದ ಇದನ್ನು ಅತಿಯಾಗಿ ಸೇವನೆಮಾಡುವುದು ಒಳ್ಳೆಯದಲ್ಲ.

  • ಅಸ್ತಮಾ ರೋಗವನ್ನು ನಿವಾರಿಸುವಂತಹ ಸರಳ ಯೋಗಾಸನಗಳು.!!

    ಅಸ್ತಮಾ ರೋಗವನ್ನು ನಿವಾರಿಸುವಂತಹ ಸರಳ ಯೋಗಾಸನಗಳು.!!

     ಮಳೆಗಾಲ, ಚಳಿಗಾಲ ಸಮೀಪಿಸುತ್ತಿದ್ದಂತೆ ಅಸ್ತಮಾ ಖಾಯಿಲೆ ಉಲ್ಬಣಗೊಳ್ಳುವ ಸಂಭವತೆ ಹೆಚ್ಚು. ಧೂಳು, ಗಾಳಿ, ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಶೀತ, ನೆಗಡಿ, ಕಫಕಟ್ಟುವುದು ಇಂತಹ ಸಮಸ್ಯೆಗಳು ಕಾಡುತ್ತವೆ. ಇದು ನಿಧಾನವಾಗಿ ಅಸ್ತಮವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇದನ್ನು ನಿವಾರಿಸಲು ಪ್ರಕೃತಿಚಿಕಿತ್ಸೆಗಳು ಬಹಳ ಸಹಾಯಮಾಡುತ್ತದೆ.

     ಅಸ್ತಮಾ ಇರುವವರಿಗೆ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಕೆಲವೊಂದು ಸಂದರ್ಭದಲ್ಲಿ ಇದರಿಂದ ತುಂಬಾ ಅಪಾಯ ಎದುರಿಸಬೇಕಾಗುತ್ತದೆ. ಆದರೆ ಅಸ್ತಮಾವನ್ನು ಯೋಗಾಸನಗಳ ಮೂಲಕ ಪರಿಹರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಹೆಚ್ಚಿನ ಅಸ್ತಮಾ ರೋಗಿಗಳು ಇನ್ ಹೇಲರ್ ಉಪಯೋಗಿಸುತ್ತಾರೆ. ಆದರೆ ಅಸ್ತಮಾ ರೋಗವನ್ನು ಯೋಗಾಸನಗಳ ಮೂಲಕ ಪರಿಹಾರ ಪಡೆಯಬಹುದು. ಯೋಗದ ಕೆಲವೊಂದು ಆಸನಗಳಿಂದ ಅಸ್ತಮಾವನ್ನು ಹೇಗೆ ನಿವಾರಿಸಬಹುದು  ಹಾಗಾದರೆ ಬನ್ನಿ ತಿಳಿದುಕೊಳ್ಳೋಣ….

    ಪ್ರಾಣಾಯಾಮ:

    ಇದು ತುಂಬಾ ಸರಳ ಆಸನವಾಗಿದೆ. ಎರಡು ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಿ. ತಲೆ, ಕುತ್ತಿಗೆ ಮತ್ತು ಬೆನ್ನು ತುಂಬಾ ನೇರವಾಗಿರಲಿ. ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಾಟದ ಕಡೆ ಗಮನಹರಿಸಿ. ಹೊಟ್ಟೆಯನ್ನು ಬಳಸಿಕೊಂಡು ಸತತವಾಗಿ ಉಸಿರಾಡಿ. 2-3 ನಿಮಿಷ ಹೀಗೆ ಮಾಡಿ ಬಳಿಕ ವಿಶ್ರಾಂತಿ ಪಡೆಯಿರಿ. ಇದನ್ನೇ ಪುನಾರವರ್ತಿಸಿ…. 

    ಶವಾಸನ:

    ನೆಲದ ಮೇಲೆ ಬೆನ್ನು ಬಳಸಿ ನೇರವಾಗಿ ಮಲಗಿ, ಕೈಗಳು ನೇರವಾಗಿರಲಿ. ಅಂಗೈ ನೆಲವನ್ನು ಮುಟ್ಟಲಿ. ಪಾದಗಳು ಆಕಾಶವನ್ನು ನೋಡುತ್ತಿರಲಿ. ದೇಹವನ್ನು ಹಗುರವಾಗಿಸಿ ಉಸಿರಾಟದ ಕಡೆ ಗಮನಹರಿಸಿ. ನಿಮ್ಮ ಕಡೆ ಗಮನ ಕೇಂದ್ರೀಕರಿಸಿ ಮತ್ತು ದೇಹದ ಎಲ್ಲಾ ಭಾಗಗಳು ಆರಾಮವಾಗಿರಲಿ. 5-10 ನಿಮಿಷ ಕಾಲ ಈ ಆಸನವನ್ನು ಮಾಡಿ. 

    ಪತಂಗ ಆಸನ:

    ಪಾದಗಳು ಜತೆಯಾಗಿ ಇರುವಂತೆ ಮೊಣಕಾಲುಗಳು ಎದುರಿಗೆ ಇರುವಂತೆ ಕುಳಿತುಕೊಳ್ಳಿ. ಇದು ಪತಂಗದ ರೆಕ್ಕೆಯಂತಿರಲಿ. ಹಿಂಗಾಲುಗಳನ್ನು ಕೈಯಿಂದ ಹಿಡಿದುಕೊಂಡು ಪಾದಗಳನ್ನು ಸೊಂಟದ ಕಡೆ ತನ್ನಿ. ಉಸಿರಾಟದ ಕಡೆ ಗಮನಹರಿಸಿ ದೇಹವನ್ನು ಮುಂದಕ್ಕೆ ಬಾಗಿಸಿ. ಇದೇ ಭಂಗಿಯಲ್ಲಿ ಹತ್ತರ ತನಕ ಎಣಿಕೆ ಮಾಡಿ.

    ಸೇತುವೆ ಆಸನ :

    ಬೆನ್ನನ್ನು ನೆಲಕ್ಕೆ ಮಾಡಿಕೊಂಡು ನೇರವಾಗಿ ಮಲಗಿ ಕೈಗಳು ದೇಹಕ್ಕೆ ಅಂಟಿಕೊಂಡಿರಲಿ. ಈಗ ಕಾಲುಗಳನ್ನು ಬಗ್ಗಿಸಿ ಪೃಷ್ಠದ ಹತ್ತಿರಕ್ಕೆ ತನ್ನಿ. ಪಾದಗಳು ಮೊಣಕಾಲಿನ ಅಡಿಯಲ್ಲಿರುತ್ತದೆ. ಬೆನ್ನಿನ ಕೆಲ ಭಾಗದೊಂದಿಗೆ ಪೃಷ್ಠವನ್ನು ಮೇಲಕ್ಕೆ ಎತ್ತಿ. ಕೈಗಳು ನೇರವಾಗಿರಲಿ ಮತ್ತು ಎದೆಯು ಅಗಲವಾಗಬೇಕು. 30 ಸೆಕೆಂಡಿನಿಂದ 1 ನಿಮಿಷ ತನಕ ಹಾಗೆ ಇರಲಿ. ಉಸಿರಾಟದ ಕಡೆ ಗಮನಹರಿಸಿ. ಮೊದಲಿನ ಸ್ಥಿತಿಗೆ ನಿಧಾನವಾಗಿ ಬನ್ನಿ. ಪೃಷ್ಠ ಮತ್ತು ಬೆನ್ನಿನ ಕಡೆ ಗಮನಹರಿಸಿ….


  • “ಸಿಹಿ ಗೆಣಸು”, ಸಿಹಿ ಎಂದು ತಿನ್ನದೇ ಇರಬೇಡಿ , ಇದರ ಸೇವನೆಯಿಂದ ಆರೋಗ್ಯಕರ ಲಾಭ ಪಡೆದುಕೊಳ್ಳಿ..!!

    “ಸಿಹಿ ಗೆಣಸು”, ಸಿಹಿ ಎಂದು ತಿನ್ನದೇ ಇರಬೇಡಿ , ಇದರ ಸೇವನೆಯಿಂದ ಆರೋಗ್ಯಕರ ಲಾಭ ಪಡೆದುಕೊಳ್ಳಿ..!!

     ‘ಸಿಹಿ ಗೆಣಸು‘ ಒಂದು ಜಾತಿಯ ಗೆಡ್ದೆ. ಇದು ದಕ್ಷಿಣ ಅಮೇರಿಕಾ ಮೂಲದಿಂದ ಬಂದು ಪ್ರಪಂಚದಾದ್ಯಂತ ಬಳಕೆಯಲ್ಲಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶರ್ಕರಪಿಷ್ಠವನ್ನು ಹೊಂದಿರುತ್ತದೆ.

    ಸಿಹಿ ಗೆಣಸು ಪುಷ್ಟಿದಾಯಕ ಆಹಾರ. ಗೆಣಸನ್ನು ಉಪ್ಪು ಹಾಕಿ ಬೇಯಿಸಿ ಹಾಗೇ ತಿನ್ನಬಹುದು, ಇಲ್ಲವೇ ಕೆಂಡದ ಮೇಲೆ ಸುಟ್ಟು ತಿಂದರೂ ಬಲು ರುಚಿಕರ. 

    ದೇಹಕ್ಕೆ ಬೇಕಾದ ಬಿ6, ವಿಟಮಿನ್, ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳಿವೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ನಾರಿನಂಶ, ವಿಟಮಿನ್ ಸಿ ಮತ್ತು ವಿಟಮಿನ್ ಎ ಸಹಾ ಇದ್ದು ಹಲವು ತೊಂದರೆಗಳಿಂದ ರಕ್ಷಣೆ ನೀಡುತ್ತದೆ. 

    ಮಧುಮೇಹದ ನಿಯಂತ್ರಣಕ್ಕಾಗಿ ನೈಸರ್ಗಿಕ ಆಹಾರವಸ್ತುಗಳನ್ನು ಪರಿಗಣಿಸುವಾಗ ಸಿಹಿ ಗೆಣಸಿನಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳ ಕುರಿತು ಹೆಚ್ಚು ಹೆಚ್ಚು ತಿಳಿದುಕೊ೦ಡಿರುವುದು ಒಳ್ಳೆಯದು. ಬಿಟಾ-ಕೆರೊಟಿನ್ ಹೆಚ್ಚಾಗಿರುವ ಈ ಸಿಹಿ ಗೆಣಸಿನಲ್ಲಿ ಆರೋಗ್ಯದ ದೃಷ್ಟಿಯಿಂದ ಮಧುಮೇಹಿ ರೋಗಿಗಳಿಗೆ ಅತ್ಯುತ್ತಮವಾಗಿದೆ. 

    ಸಿಹಿ ಗೆಣಸಿನ ಸೇವನೆಯಿಂದ ಆಗುವ  ಉಪಯೋಗಗಳು :

    1. ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
    2. ಶೀತ ಮತ್ತು ಜ್ವರದ ಸೊಂಕು ಹರಡುವುದನ್ನು ತಡೆಗಟ್ಟುತ್ತದೆ. 
    3. ಇದರಲ್ಲಿರುವ ವಿಟಮಿನ್ ಸಿ ಜೀವಸತ್ವವು ಮೂಳೆ ಮತ್ತು ಹಲ್ಲಿನ ರಚನೆ, ಜೀರ್ಣಕ್ರಿಯೆ ಮತ್ತು ರಕ್ತ ಕಣ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ .
    4. ಇದು ಗಾಯವನ್ನು ಗುಣಪಡಿಸುವಿಕೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
    5. ಚರ್ಮದ ಯೌವನದ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
    6. ಇದು ನಮ್ಮ ದೇಹವನ್ನು ಕ್ಯಾನ್ಸರ್ ಸಂಬಂಧಿತ ಜೀವಾಣುಗಳ ವಿರುದ್ಧ ರಕ್ಷಣೆ ನೀಡುತ್ತದೆ. 
    7. ಇದರಲ್ಲಿರುವ ಬಿಟಾ-ಕೆರೊಟಿನ್ ಅಂಶ ಮಧುಮೇಹವನ್ನು ನಿಯಂತ್ರಿಸುತ್ತದೆ. 
    8. ಇದರ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. 
    9. ಸಿಹಿ ಗೆಣಸಿನಲ್ಲಿರುವ ಪೊಟ್ಯಾಶಿಯಂ ದೇಹದ ಮೇಲೆ ಸೋಡಿಯಂ ಪ್ರಭಾವವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಕಾರ್ಯವೈಖರಿಯನ್ನು ಸುಗಮಗೊಳಿಸುತ್ತದೆ.
    10. ಇದರಲ್ಲಿ ಫೊಲಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿರುವುದರಿಂದ ಗರ್ಭಾವಧಿಯಲ್ಲಿ ಭ್ರೂಣದ ಕೋಶ ಮತ್ತು ಕೋಶಗಳ ಬೆಳವಣಿಗೆಗೆ ಸಹಕರಿಸುತ್ತದೆ.

    ಹಾಗಾಗಿ ಸಿಹಿ ಗೆಣಸು, ಸಿಹಿ ಎಂದು ತಿನ್ನದೇ ಇರಬೇಡಿ. ಇದನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನೂ ಉತ್ತಮವಾಗಿಸಿಕೊಳ್ಳಿ. 

  • ಜೀರಿಗೆ ನೋಡಲು ಚಿಕ್ಕದಾದರೂ ಅದರ ಉಪಯೋಗಗಳು ಬಹಳಷ್ಟಿವೆ..!!

    ಜೀರಿಗೆ ನೋಡಲು ಚಿಕ್ಕದಾದರೂ ಅದರ ಉಪಯೋಗಗಳು ಬಹಳಷ್ಟಿವೆ..!!

      ಜೀರಿಗೆಯನ್ನ ನಾವು ಅಡುಗೆಯಲ್ಲಿ ಬಳಸುತ್ತೇವೆ ಅಡುಗೆಯ ರುಚಿ ಹೆಚ್ಚಿಸಲು, ಅದನ್ನ ಹೊರತು ಪಡಿಸಿ ಅದರ ಉಪಯೋಗ ಹಲವರಿಗೆ ತಿಳಿದಿಲ್ಲ.

    ಜೀರಿಗೆ ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿದೆ. ಇದು ಕೇವಲ ಅಡುಗೆಗೆ ಸುವಾಸನೆಗೆ ಮಾತ್ರವಲ್ಲ ಇದರಿಂದ ಹಲವಾರು ಆರೋಗ್ಯಕರ ಲಾಭಗಳಿವೆ. 

    ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಜೀರಿಗೆ ಆ್ಯಸಿಡಿಟಿಯನ್ನೂ ದೂರ ಓಡಿಸುತ್ತದೆ. ಬಾಣಂತಿಯರು ಸೇವಿಸಿದರೆ ಎದೆಹಾಲು ಹೆಚ್ಚಿಸುತ್ತದೆ. ಮಗುವಿಗೆ ಹೊಟ್ಟೆನೋವು ಸಹ ಆಗುವುದಿಲ್ಲ. ಉದರ ಸಂಬಂಧೀ ಸಮಸ್ಯೆಗಳಿಗೆ ಜೀರಿಗೆ  ರಾಮಬಾಣವೆಂದೇ ಹೇಳಬಹುದು.

    ಉಪಯೋಗಗಳು :

    * ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

    ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಜೀರಿಗೆ ಮಹತ್ವದ ಸ್ಥಾನವನ್ನು ಹೊಂದಿದೆ. ಅತೀ ಹೆಚ್ಚಿನ ಮಟ್ಟದಲ್ಲಿ ಕಬ್ಬಿಣಾಂಶ ಮತ್ತು ನಾರಿನಂಶವನ್ನು ಹೊಂದಿರುವ ಜೀರಿಗೆ ನಿಮ್ಮ ಇಮ್ಮ್ಯುನಿಟ್ ಸಿಸ್ಟೆಮ್ ಸರಿಯಾದ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅಜೀರ್ಣದಿಂದಾಗುವ ಹೊಟ್ಟೆ ನೋವನ್ನು ಸಹ ಇದು ಕಡಿಮೆ ಮಾಡುತ್ತದೆ.

    * ದೇಹದ ತೂಕವನ್ನು ಇಳಿಸುತ್ತದೆ

    ದೇಹದ ತೂಕ ಹೆಚ್ಚಾಗಿದ್ದಲ್ಲಿ ಪ್ರತಿದಿನ ಜೀರಿಗೆ ನೀರಿನ ಸೇವನೆ ಮಾಡಿಬೇಕು. ಜೀರಿಗೆ ದೇಹದಲ್ಲಿ ಮೆಟಾಬಾಲಿಸಂ ಅನ್ನು ಹೆಚ್ಚಿಸಿ. ದೇಹದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಲೋಟ ಜೀರಿಗೆ ನೀರನ್ನು ಕುಡಿದರೆ ಆರೋಗ್ಯಕರ ಜೀವನಶೈಲಿ ನಿಮ್ಮದಾಗುವುದರ ಜೊತೆಗೆ ದೇಹದ ತೂಕವನ್ನು ಇಳಿಸಿಕೊಳ್ಳಬಹುದು.

    * ಗರ್ಭಿಣಿಯರಿಗೆ ಒಳ್ಳೆಯದು

    ಜೀರಿಗೆ ನೀರಿನಲ್ಲಿರುವ ಗುಣಗಳು ಗರ್ಭಿಣಿಯರಲ್ಲಿನ ಮಲಬದ್ಧತೆ ಸಮಸ್ಯೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಾಕರಿಕೆ ಮತ್ತು ಮಲಬದ್ಧತೆ ಮುಂತಾದ ಗರ್ಭಾವಸ್ಥೆಯ ಲಕ್ಷಣಗಳನ್ನು ಪರಿಹರಿಸಲು ಜೀರಿಗೆ ಬೀಜಗಳು ಸಹಾಯ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ಇದರ ಸೇವನೆ ಮಾಡುವುದರಿಂದ ಗರ್ಭಿಣಿ ಮತ್ತು ಮಗು ಉತ್ತಮ ಆರೋಗ್ಯವನ್ನು ಪಡೆಯಬಹುದು.

    * ಹೊಳೆಯುವ ಆರೋಗ್ಯಕರ ತ್ವಚೆಗಾಗಿ

    1 ಚಮಚ ಜೇನುತುಪ್ಪ ಮತ್ತು 1/2  ಚಮಚ ಜೀರಿಗೆ ಪುಡಿಯನ್ನು ಸೇರಿಸಿ ತಯಾರಿಸಿದ ಫೇಸ್ ಪ್ಯಾಕ್ ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮತ್ತು ನಯವಾಗಿರುವಂತೆ ಮಾಡುತ್ತದೆ. ಜೇನುತುಪ್ಪ ಊತಿದ ಅಂಗಾಂಶಗಳನ್ನು ಶಮನಗೊಳಿಸುತ್ತದೆ ಮತ್ತು ಜೀರಿಗೆಯು ಚರ್ಮ ಶುಷ್ಕವಾಗುವುದನ್ನು ತಡೆಯುತ್ತದೆ. ಇನ್ನೂ ಪ್ರತಿದಿನ ಬೆಳಿಗ್ಗೆ ಖಾಲಿ ಹೋಟ್ಟೆಯಲ್ಲಿ 1 ಲೋಟ ಜೀರಿಗೆ ನೀರನ್ನು ಕುಡಿದರೆ ಆರೋಗ್ಯಕರ ತ್ವಚೆ ನಿಮ್ಮದಾಗುತ್ತದೆ.

    * ಆಸ್ತಮಾ ಮತ್ತು ಶೀತವನ್ನು ನಿವಾರಿಸುತ್ತದೆ

    ಜೀರಿಗೆಯ ಆಂಟಿಬ್ಯಾಕ್ಟೀರಿಯಾ ಮತ್ತು ಆಂಟಿಇಂಫ್ಲಾಮೇಟರಿ ಗುಣಲಕ್ಷಣಗಳ ಕಾರಣ, ಜೀರಿಗೆ ಬೀಜಗಳು ಶೀತ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದಾಗಿದೆ. ಇದು ಕೆಮ್ಮು, ಜ್ವರ, ಶೀತವನ್ನು ಬೇಗನೇ ಕಡಿಮೆ ಮಾಡುತ್ತದೆ.

    ಜೀರಿಗೆ ನೀರು ಮಾಡುವುದು ಹೇಗೆ?

    ಬೇಕಾಗುವ ಸಾಮಗ್ರಿಗಳು – 

    2 ಲೋಟ ನೀರು

    2 ಚಮಚ ಜೀರಿಗೆ

    ಮಾಡುವ ವಿಧಾನ – 

    2 ಲೋಟ ನೀರಿಗೆ 2 ಚಮಚ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರನ್ನು ಸೋಸಿ, ದಿನಕ್ಕೆ 2-3 ಬಾರಿ ಕುಡಿಯಿರಿ.

  • ಆರೋಗ್ಯಕ್ಕೆ ಬೇಕು ಹಸಿ ಮೆಣಸಿನಕಾಯಿ..! ಅಬ್ಬಾ ಅದೇನು ಅಂತೀರಾ?

    ಆರೋಗ್ಯಕ್ಕೆ ಬೇಕು ಹಸಿ ಮೆಣಸಿನಕಾಯಿ..! ಅಬ್ಬಾ ಅದೇನು ಅಂತೀರಾ?

    ಸಾಮಾನ್ಯವಾಗಿ ನಾವು ಪ್ರತಿ ದಿನ ಅಡುಗೆಗೆ ಹಸಿಮೆಣಸಿನಕಾಯಿ ಬಳಸುತ್ತಿರುತ್ತೇವೆ. ಬಹಳಷ್ಟು ಮಂದಿ ಸಾರಿಗೆ ಕೆಂಪು ಮೆಣಸಿನಕಾಯಿಗೆ ಬದಲಾಗಿ ಹಸಿ ಮೆಣಸಿನಕಾಯಿ ಬಳಸುತ್ತಿರುತ್ತಾರೆ. ಸಾರಿಗೆ ಹಸಿಮೆಣಸಿನಕಾಯಿ ಬಳಸುವುದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ. ಹಸಿಮೆಣಸಿನಕಾಯಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

    ಇವುಗಳಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಸಿಮೆಣಸಿನಕಾಯಿ ಕೊಬ್ಬಿನ ಅಂಶವನ್ನ ಕಡಿಮೆ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ಹಸಿರು ಮೆಣಸಿನಕಾಯಿಯನ್ನು ತುಂಬಾ ಜನರು ಉಪಯೋಗಿಸುತ್ತಾರೆ. ಹಲವು ಪೌಷ್ಟಿಕಾಂಶಗಳು ಹಸಿರು ಮೆಣಸಿನಕಾಯಿಯಲ್ಲಿದ್ದು, ದೇಹದ ಆರೋಗ್ಯಕ್ಕೆ ಯೋಗ್ಯವಾಗ ಪೋಷಕಾಂಶಗಳನ್ನು ಒದಗಿಸುತ್ತದೆ.

    ಹಸಿಮೆಣಸಿನಕಾಯಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಎ, ಐರನ್, ಕಾಪರ್, ಪೊಟ್ಯಾಷಿಯಂ, ನಿಯಾಸಿನ್, ಫೈಬರ್, ಫೋಲೇಟ್‌ನಂತಹ ಪೋಷಕಾಂಶಗಳು ಇರುತ್ತವೆ. ಹಸಿಮೆಣಸಿನಕಾಯಿಅಲ್ಲಿ ಇರುವ ವಿಟಮಿನ್ ಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ.

    ಜೀರ್ಣಶಕ್ತಿ ಹೆಚ್ಚಿಸುತ್ತದೆ. : ಹಸಿರು ಮೆಣಸಿನಕಾಯಿಯಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಅಜೀರ್ಣತೆ ತಡೆಗಟ್ಟುತ್ತದೆ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ. ಗ್ರೀನ್ ಚಿಲ್ಲಿ ತಿನ್ನುವುದರಿಂದ ಅಲ್ಸರ್‌ ನಿವಾರಿಸುತ್ತದೆ. ಆದ್ರೆ ಪೆಪ್ಟಿಕ್ ಅಲ್ಸರ್‌ ನಿಂದ ಬಳಲುತ್ತಿರುವವರು, ಹಸಿಮೆಣಸಿನಕಾಯಿ ತಿನ್ನುವುದನ್ನು ಅವಾಯ್ಡ್ಡ್ ಮಾಡಿ.

    ತೂಕ ನಷ್ಟ: ಡಯಟ್‌ನಲ್ಲಿ ಹಸಿಮೆಣಸಿನಕಾಯಿ ಬಳಸುವುದರಿಂದ ದೇಹದ ಕೊಬ್ಬನ್ನು ಇದು ನಿವಾರಿಸುತ್ತದೆ. ನಮ್ಮ ದೇಹದಲ್ಲಿರುವ ಕ್ಯಾಲೋರಿಗಳನ್ನು ಬರ್ನ್​​ ಮಾಡುತ್ತದೆ.

    ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ನಿಯಮಿತವಾಗಿ ಹಸಿಮೆಣಸಿನಕಾಯಿ ತಿನ್ನುವುದರಿಂದ ಮಧುಮೇಹ ತಡೆಗಟ್ಟಬಹುದು. ಹಸಿರು ಮೆಣಸಿನಕಾಯಿ ಸೇವಿಸಿದರೆ, ದೇಹದಲ್ಲಿ ಹೆಚ್ಚಾಗುವ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗೂ ದೇಹ ಸಮತೋಲನದಲ್ಲಿರಲು ಸಹಾಯಕಾರಿಯಾಗುತ್ತದೆ.

    ಕ್ಯಾನ್ಸರ್ ತಡೆಯಲು ಸಹಾಯ : ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಹೆಚ್ಚಾಗಿರುವ ಕಾರಣ, ಕ್ಯಾನ್ಸರ್ ವಿರುದ್ಧ ಹೋರಾಡಲು ಇದು ಸಹಾಯಾರಿಯಾಗಿದೆ. ಶೀತ ಭಾದೆಗೂ ಮೆಣಸಿನಕಾಯಿ ಸಹಕಾರಿ: ಹಸಿರು ಮೆಣಸಿನಕಾಯಿಯಲ್ಲಿ ಕ್ಯಾಪ್ಸೈಸಿನ್ ಅಂಶ ಹೆಚ್ಚಾಗಿರುವುದರಿಂದ ಅತಿ ಬೇಗ ಶೀತವನ್ನು ಗುಣಪಡಿಸುತ್ತದೆ.

  • ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದರಿಂದ ನಿಮಗೆ ಏನು ಪ್ರಯೋಜನ ಗೊತ್ತೇ?

    ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದರಿಂದ ನಿಮಗೆ ಏನು ಪ್ರಯೋಜನ ಗೊತ್ತೇ?

    ಪ್ರತಿ ದಿನ ಬೆಳಿಗ್ಗೆ ನಿಂಬೆ ಪಾನೀಯವನ್ನು ಕುಡಿಯುವುದು ನಿಮಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಅದು ನಿಮಗೆ ತಾಜಾತನವನ್ನು ನೀಡುತ್ತದೆ. ಯಾರು ನಿಮ್ಮ ದಿನವನ್ನು ನಿಂಬೆಹಣ್ಣಿನೊಂದಿಗೆ ಪ್ರಾರಂಭಿಸಲು ಬಯಸುವಿರೋ ಅವರಿಗೆ ಉತ್ತಮವಾದ ಅನೇಕ ಪ್ರಯೋಜನಗಳಿವೆ. 

    ಹೌದು, ನಿಂಬೆ ಬಹಳ ಪರಿಣಾಮಕಾರಿಯಾಗಿದೆ. ಅನೇಕ ರೀತಿಯಲ್ಲಿ ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಂಬೆಯನ್ನು ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿ ಎಂದು ಪರಿಗಣಿಸಲಾಗುತ್ತದೆ.

    ಇದು ನೀರು, ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಸಕ್ಕರೆಗಳನ್ನು ಹೊಂದಿರುತ್ತದೆ. ನಿಂಬೆ ವಿಟಮಿನ್ ‘ಸಿ’ ಉತ್ತಮ ಮೂಲವಾಗಿದೆ. ಇದು ಥೈಯಾಮೈನ್, ರಿಬೋಫ್ಲಾವಿನ್, ನಿಯಾಸಿನ್, ವಿಟಮಿನ್ B6, ಫೋಲೇಟ್ ಮತ್ತು ವಿಟಮಿನ್-ಇ ನಂತಹ ಒಂದು ಸಣ್ಣ ಪ್ರಮಾಣದ ವಿವಿಧ ವಿಟಮಿನ್ಗಳನ್ನು ಒಳಗೊಂಡಿದೆ. ನಿಂಬೆ ಅನೇಕ ಗುಣಗಳನ್ನು ಹೊಂದಿದ್ದು ದೇಹದ ತೂಕ ನಿಯಂತ್ರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

    ಸಕ್ಕರೆ ಇಲ್ಲದೆ ನಿಂಬೆ ಪಾನಕ ಸೇವಿಸುವುದರಿಂದ ಸಂಪೂರ್ಣವಾಗಿ ಕ್ಯಾಲೊರಿ ಮುಕ್ತವಾಗಿದೆ. ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಶಕ್ತಿಯ ರೂಪದಲ್ಲಿ ಸಂಗ್ರಹಗೊಳ್ಳಲು ಆರಂಭಿಸುತ್ತದೆ. ಇದಕ್ಕೆ ಕಾರಣವೆಂದರೆ ದೇಹದಲ್ಲಿ ಕೊಬ್ಬಿನ ಶಕ್ತಿಯ ಬದಲಾವಣೆಯು ನಿಮ್ಮ ದೇಹದಲ್ಲಿ ಇರುವ ನೀರಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಮತ್ತು ನಿಂಬೆ ಪಾನಕವು ನಿದ್ದೆ ಮಾಡಲು ಕೂಡಾ ಸಹಾಯಕವಾಗಿದೆ.

    ಪ್ರತಿದಿನ ಬೆಳಿಗ್ಗೆ ನಿಂಬೆ ರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ತೂಕ ನಷ್ಟದಲ್ಲಿ ಇದು ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಇಷ್ಟಪಟ್ಟಲ್ಲಿ ದಿನಕ್ಕೆ ಹಲವು ಬಾರಿ ಅದನ್ನು ಸೇವಿಸಬಹುದು. ಪ್ರತಿ ಗಂಟೆಗೊಮ್ಮೆ ಒಂದು ಲೋಟ ನೀರಿಗೆ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಇದೊಂದು ಉತ್ತಮ ಹಾರೈಕೆಯಾಗಿ ಕಾರ್ಯನಿರ್ವಹಿಸುತ್ತದೆ.

    ನಿಂಬೆಹಣ್ಣಿನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ ಮತ್ತು ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಜತೆಗೆ ತೂಕವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಬಿಸಿ ನೀರು, ನಿಂಬೆ ಮತ್ತು ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ. 

    ನಿಂಬೆ ನಿಮ್ಮ ದೇಹದ ವಿಲಕ್ಷಣ ಅಂಶಗಳನ್ನು ಹೊರಹಾಕುತ್ತದೆ. ನಿಂಬೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆ ಮತ್ತು ವಿವಿಧ ರೀತಿಯ ಕ್ಯಾನ್ಸರ್ ವಿರುದ್ಧ ರಕ್ಷಿಸಿ ಉತ್ತಮ ಆರೋಗ್ಯ ನೀಡುತ್ತದೆ.

  • ನೀರು ಕುಡಿದು ಆರೋಗ್ಯ ಗಳಿಸುವುದು ಹೇಗೆ ಗೊತ್ತೇ?

    ನೀರು ಕುಡಿದು ಆರೋಗ್ಯ ಗಳಿಸುವುದು ಹೇಗೆ ಗೊತ್ತೇ?

    ನಮ್ಮ ದೇಹದ ಶೇ.75ರಷ್ಟು ನೀರಿನಾಂಶವಿದೆ. ದೇಹಕ್ಕೆ ಹೇಗೆ ಆಹಾರ ಅತೀ ಅಗತ್ಯವೋ ಹಾಗೆ ನೀರು ಕೂಡ ಮುಖ್ಯ. ನೀರಿಲ್ಲದೆ ಹೆಚ್ಚು ಸಮಯ ಬದುಕಲು ಸಾಧ್ಯವಿಲ್ಲ. ದಿನದಲ್ಲಿ ನಮ್ಮ ದೇಹದ ತೂಕಕ್ಕೆ ಅನುಗುಣವಾಗಿ ಇಂತಿಷ್ಟು ಪರಿಣಾಮವಾಗಿ ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ಈಗಲೂ ವಾದವಿವಾದಗಳು ನಡೆಯುತ್ತಿದೆ.

    ಆದರೆ ಇಂದಿನ ದಿನಗಳಲ್ಲಿ ಜನರು ಹೆಚ್ಚು ಚಾ, ಕಾಫಿ ಹಾಗೂ ತಂಪು ಪಾನೀಯಗಳನ್ನು ಅತಿಯಾಗಿ ಕುಡಿಯುತ್ತಾರೆ. ದಿನವಿಡಿ ಸೋಡಾ ಹಾಗೂ ಕೆಫಿನ್ ಸೇವನೆ ಮಾಡುತ್ತಿರುವರು. ಆದರೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರ ಬದಲಿಗೆ ನೀರು ಸೇವಿಸಬೇಕು. ಇದರಿಂದ ಕೆಲವೊಂದು ಅಚ್ಚರಿಯ ಫಲಿತಾಂಶಗಳು ನಿಮಗೆ ಸಿಗುವುದು. ನೀವು ಹೆಚ್ಚು ನೀರು ಕುಡಿದಷ್ಟು ಅದರಿಂದ ಆರೋಗ್ಯಕ್ಕೆ ಶ್ರೇಷ್ಠ ಲಾಭವಾಗಲಿದೆ. ಹೆಚ್ಚಾಗಿ ನಾವೆಲ್ಲರೂ ಬೇಕಾಗುವಷ್ಟು ನೀರು ಕುಡಿಯಲು ವಿಫಲವಾಗುತ್ತೇವೆ. ನೀವು ಬೇರೆಲ್ಲಾ ಪಾನೀಯವನ್ನು ಬಿಟ್ಟು ನೀರನ್ನು ಕುಡಿಯಬೇಕು. ಇದರಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನೀವು ತಿಳಿಯಿರಿ…

    ತೂಕ ಇಳಿಕೆಗೆ ವೇಗ ನೀಡುವುದು

    ತೂಕ ವೇಗವಾಗಿ ಇಳಿಸಬೇಕಾದರೆ ಎಲ್ಲಾ ಪಾನೀಯಗಳನ್ನು ಬಿಟ್ಟು ಕೇವಲ ನೀರು ಕುಡಿಯಬೇಕು. ನೀರು ಹೆಚ್ಚಿನ ಪ್ರಮಾಣದಲ್ಲಿ ಕುಡಿದರೆ ಆಗ ವೇಗವಾಗಿ ತೂಕ ವೇಗವಾಗಿ ಇಳಿಸಬಹುದು. ಅಧ್ಯಯನದ ವರದಿಯ ಪ್ರಕಾರ 9 ದಿನಗಳ ಕಾಲ ನೀವು ಬೇರೆ ಪಾನೀಯಗಳ ಬದಲಿಗೆ ನೀರನ್ನು ಸೇವಿಸಬೇಕು. ಇದರಿಂದ ನೀವು ಪ್ರತಿನಿತ್ಯ 8 ಕಿ.ಮೀ.ಜಾಗಿಂಗ್ ಮಾಡುಷ್ಟೇ ಪ್ರಮಾಣದ ಕ್ಯಾಲರಿ ದಹಿಸಲಿದ್ದೀರಿ. ಇದರಿಂದಾಗಿ ಬೇರೆ ಪಾನೀಯಗಳನ್ನು ತ್ಯಜಿಸಿ ಮತ್ತು ನೀರು ಕುಡಿಯಿರಿ.

    ಚಯಾಪಚಯ ವೃದ್ಧಿಸುವುದು

    ಬೇರೆಲ್ಲಾ ಪಾನೀಯಗಳ ಬದಲಿಗೆ ನೀರನ್ನು ಕುಡಿದರೆ ಆಗ ಚಯಾ ಪಚಯ ಕ್ರಿಯೆ ಸುಧಾರಣೆ ಆಗುವುದು ಮತ್ತು ಶಕ್ತಿಯ ಮಟ್ಟವು ಹೆಚ್ಚಾಗುವುದು. ಇದರಿಂದ ದಿನವಿಡಿ ಸಾಧ್ಯವಾದಷ್ಟು ನೀರು ಕುಡಿಯಿರಿ ಮತ್ತು ದಿನವಿಡಿ ಶಕ್ತಿಯಿಂದ ಇರಿ. ನೀರು ಕುಡಿದರೆ ಆಗ ನಿಮ್ಮ ದಿನದ ಕಾರ್ಯಗಳನ್ನು ಮಾಡಲು ಶಕ್ತಿ ಸಿಗುವುದು.

    ಮೆದುಳಿನ ಕಾರ್ಯ ಸುಧಾರಿಸುವುದು

    ಮನುಷ್ಯನ ಮೆದುಳಿನಲ್ಲಿ ಸೇ.75ರಿಂದ 85ರಷ್ಟು ನೀರಿನಾಂಶ ಇರುವುದು ಎಂದು ನಿಮಗೆ ತಿಳಿದಿರಬೇಕು. ಅಧಿಕ ನೀರು ಕುಡಿಯುವ ಕಾರಣದಿಂದ ಏಕಾಗ್ರತೆ ಹೆಚ್ಚಿಸಲು ನೆರವಾಗುವುದು. ಇದರಿಂದ ದೈನಂದಿನ ಕಾರ್ಯಗಳನ್ನು ತುಂಬಾ ವೇಗ ಹಾಗೂ ಪರಿಣಾಮಕಾರಿಯಾಗಿ ಮಾಡಲು ನೆರವಾಗುವುದು. ಇದರಿಂದ ಕೆಫಿನ್ ಸೇವನೆ ಕಡಿಮೆ ಮಾಡಿ ಮತ್ತು ನೀರು ಸೇವಿಸಿ.

    ಹಸಿವು ಕಡಿಮೆ ಮಾಡುವುದು

    ನೀರು ಹೆಚ್ಚಾಗಿ ಕುಡಿದರೆ ಆಗ ಕಡಿಮೆ ತಿನ್ನಬಹುದು. ನಿಮಗೆ ಅಧಿಕ ಕ್ಯಾಲರಿ ಸೇವಿಸುವ ಭಾವನೆಯಾಗುತ್ತಲಿದ್ದರೆ ಆಗ ನೀವು ಒಂದು ಲೋಟ ನೀರು ಕುಡಿಯಿರಿ. ಆಗ ಬಯಕೆ ಕಡಿಮೆ ಆಗುವುದು. ಇದರಿಂದ ತೂಕ ನಿಯಂತ್ರಣದಲ್ಲಿ ಇಡಲು ಹಾಗೂ ಆರೋಗ್ಯವಾಗಿರಲು ನೆರವಾಗುವುದು. ಕೆಲವೊಂದು ಸಲ ದಾಹದಿಂದಾಗಿ ಬಯಕೆ ಮೂಡಬಹುದು. ನಿಮ್ಮ ಹತ್ತಿರ ಯಾವಾಗಲೂ ನೀರನ್ನು ಇಟ್ಟುಕೊಳ್ಳಿ ಮತ್ತು ಅನಗತ್ಯ ಕ್ಯಾಲರಿಗೆ ಗುಡ್ ಬೈ ಹೇಳಿ.

    ವಿಷವನ್ನು ವೇಗವಾಗಿ ಹೊರಹಾಕುವುದು

    ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ಆಗ ವಿಷಕಾರಿ ಅಂಶಗಳನ್ನು ವೇಗವಾಗಿ ಹೊರಹಾಕಬಹುದು ಮತ್ತು ಚರ್ಮವು ಆರೋಗ್ಯವಾಗಿ ಇರುವುದು ಮತ್ತು ವಯಸ್ಸಾಗುವ ಲಕ್ಷಣ ತಡೆಯಬಹುದು. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದರೆ ಅದರಿಂದ ಯೌವನಯುತ ಚರ್ಮ ಕಾಪಾಡಲು ನೆರವಾಗುವುದು. ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿ ನಿಮ್ಮ ಚರ್ಮದ ಆರೋಗ್ಯ ಕಾಪಾಡಿಕೊಳ್ಳಿ.

    ಕಾಯಿಲೆಗಳನ್ನು ತಡೆಯುವುದು

    ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಪರಿಣಾಮ ಹಲವಾರು ಕಾಯಿಲೆಗಳ ಅಪಾಯ ತಡೆಯಬಹುದು ಮತ್ತು ಕೆಲವೊಂದು ಗಂಭೀರ ಕಾಯಿಲೆಗಳಾಗಿರುವ ಅಧಿಕ ರಕ್ತದೊತ್ತಡ, ಅಪಧಮನಿ ಕಾಯಿಲೆ, ಮೂತ್ರಕೋಶದ ಸಮಸ್ಯೆ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆ ಮಾಡಬಹುದು. ನೀರು ಸಾಕಷ್ಟು ಪ್ರಮಾಣದಲ್ಲಿ ಕುಡಿದರೆ ಆಗ ವೈದ್ಯರ ಬಳಿಗೆ ಹೋಗುವ ಸಂಭವ ಕಡಿಮೆ ಆಗುವುದು.

  • ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ…

    ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ…

    ವಿಶ್ವದೆಲ್ಲೆಡೆ ಎಲ್ಲಾ ಜನರು ಯಾವುದೇ ಅಳುಕಿಲ್ಲದೇ ಸೇವಿಸುವ ಆಹಾರವೆಂದರೆ ಹಾಲು. ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಜೀರ್ಣವಾಗುವ ಹಾಲನ್ನು ಹಾಗೇ ಸೇವಿಸುವ ಜೊತೆಗೇ ಹಲವು ಖಾದ್ಯಗಳಲ್ಲಿಯೂ ಬಳಸಲಾಗುತ್ತದೆ. ಇದರಲ್ಲಿರುವ ಪೌಷ್ಟಿಕಾಂಶಗಳ ವೈವಿಧ್ಯತೆಯಿಂದಾಗಿ ಇದನ್ನೊಂದು ಪರಿಪೂರ್ಣ ಆಹಾರ ಎಂದು ಕರೆಯಲಾಗುತ್ತದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರಿಗೂ ಸುಲಭವಾಗಿ ಜೀರ್ಣವಾಗುವ ಹಾಲು ಪುಟ್ಟ ಮಕ್ಕಳ ಪಾಲಿಗೆ ಜೀವನದ ಮೊದಲ ಆಹಾರವೂ ಆಗಿದೆ.  ಅಷ್ಟೇ ಅಲ್ಲ, ಮಕ್ಕಳು ಬೆಳೆಯುತ್ತಾ ಹೋದಂತೆ ಮಕ್ಕಳು ನಿತ್ಯವೂ ಹಾಲನ್ನು ಕುಡಿಯುವಂತೆ ತಾಯಂದಿರು ಕಾಳಜಿ ವಹಿಸುತ್ತಾರೆ. ಅಷ್ಟೇ ಅಲ್ಲ, ಸಾಮಾನ್ಯ ಶೀತ ಕೆಮ್ಮು ಅಥವಾ ಜ್ವರ ಬಂದರೆ ನಮಗೆ ಮೊತ್ತ ಮೊದಲಾಗಿ ನೀಡಲಾಗುವ ಸಿದ್ಧೌಷಧಿ ಎಂದರೆ ಅರಿಶಿನ ಬೆರೆತ ಹಾಲು. ವಿಧಾನ ಇಂದಿನದ್ದೇನೂ ಅಲ್ಲ, ತಕ್ಷಣದ ಉಪಶಮನಕ್ಕಾಗಿ ವಿಧಾನವನ್ನು ನೂರಾರು ವರ್ಷಗಳಿಂದ ವಿಧಾನವನ್ನು ನಮ್ಮ ಪೂರ್ವಜರು ಅನುಸರಿಸುತ್ತಾ ಬಂದಿದ್ದಾರೆ. ಹಾಲು ಶಕ್ತಿಯ ಆಗರವಾಗಿದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಒಂದು ಲೋಟ ಹಾಲಿನ ಸೇವನೆಯಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತಾಗಿ ಅನಗತ್ಯ ಆಹಾರ ಸೇವನೆಯಿಂದ ತಡೆದಂತಾಗುತ್ತದೆ. ಒಂದು ಲೋಟ ಹಾಲನ್ನು ಮುಂಜಾನೆಯ ಉಪಾಹಾರದೊಂದಿಗೆ ಸೇವಿಸಿದರೆ ಇಡಿಯ ದಿನ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಬೆಳವಣಿಗೆಗೆ ನೆರವಾಗುವ ಜೊತೆಗೇ ಇದರಲ್ಲಿರುವ ಪ್ರೋಟೀನುಗಳು ಸ್ನಾಯುಗಳನ್ನೂ ಬಲಪಡಿಸುತ್ತದೆ. ಅಲ್ಲದೇ ಉಳಿದ ಪೋಷಕಾಂಶಗಳು ದಿನದ ಚಟುವಟಿಕೆಗಳನ್ನು ನಿರಾಯಾಸವಾಗಿ ಪೂರೈಸಲು ನೆರವಾಗುತ್ತವೆ.   ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಕೆಲವು ಆಹಾರಗಳಲ್ಲಿವೆ ಹಾಗೂ ಹಾಲು ಇದರಲ್ಲಿ ಪ್ರಮುಖವಾಗಿದೆ. ಇದಕ್ಕೆ ಕಾರಣ ಹಾಲಿನಲ್ಲಿರುವ ಸತು ಮತ್ತು ವಿಟಮಿನ್ ಡಿ. ವಿಶೇಷವಾಗಿ ಪೋಷಕಾಂಶಗಳು ಹೃದಯದ ಆರೋಗ್ಯಕ್ಕೆ ಅಗತ್ಯವಾಗುವೆ. ಅಲ್ಲದೇ ದಿನಕ್ಕೊಂದು ಲೋಟ ಹಾಲು ಕುಡಿಯುವ ಮೂಲಕ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ಅಲ್ಲದೇ ಹಾಲಿನಲ್ಲಿರುವ ಆರೋಗ್ಯಕರ ಕೊಬ್ಬುಗಳು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ.

     

     ಕೆಲವು ಅಧ್ಯಯನಗಳ ಪ್ರಕಾರ ಹಾಲು ಮಧುಮೇಹವನ್ನು ತಡೆಗಟ್ಟುವ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ. ಒಂದು ವೇಳೆ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿದ್ದರೆ ಹಾಲಿನ ಸೇವನೆಯ ಬಳಿಕ ಮಟ್ಟ ಇಳಿಯುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹಾಲಿನಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ.

    ಹಾಲಿನ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೀರು ದೊರಕುತ್ತದೆ ಹಾಗೂ ನಿರ್ಜಲೀಕರಣದಿಂದ ತಪ್ಪಿಸುತ್ತದೆ ಹಾಗೂ ಆರ್ದ್ರತೆ ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಆದರೆ ಹಾಲು ಇಂದು ವ್ಯಾಪಾರದ ವಸ್ತುವಾಗಿದ್ದು ಹೆಚ್ಚು ಲಾಭ ಪಡೆಯುವ ವಂಚಕರು ಹಾಲಿನಲ್ಲಿ ಅಪಾಯಕಾರಿ ವಸ್ತುಗಗಳನ್ನು ಮಿಶ್ರಣ ಮಾಡಿರುತ್ತಾರೆ. ಒಂದು ವೇಳೆ ಹಾಲನ್ನು ಕುಡಿದರೆ ಆರೋಗ್ಯ ಕೆಡುವ ಜೊತೆಗೇ ತ್ವಚೆಯಲ್ಲಿ ಮೊಡವೆಗಳು ಮೂಡಲೂ ತೊಡಗುತ್ತವೆ. ಏಕೆಂದರೆ ಹಾಲಿಗೆ ಮಿಶ್ರಣ ಮಾಡುವ ರಾಸಾಯನಿಕಗಳು ದೇಹದಲ್ಲಿ ಆಕ್ಸಿಟೋಸಿನ್  ಪ್ರಮಾಣವನ್ನು ಹೆಚ್ಚಿಸಿ ದೇಹದ ಸಮತೋಲನವನ್ನು  ಏರುಪೇರುಗೊಳಿಸುತ್ತವೆ.  

    ಹಾಲು ಸುಲಭವಾಗಿ ಕೆಡುವ ಆಹಾರವಾಗಿರುವ ಕಾರಣ ಇದನ್ನು ದೀರ್ಘಾವಧಿಯಲ್ಲಿ ಬಳಸಲು ಇಂದು ಹಲವಾರು ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ಯಾಶ್ಚರೀಕರಿಸಿ ತಣಿಸಿ ವಾಯುವಿನ ಸಂಪರ್ಕವಿಲ್ಲದಂತೆ ಪ್ಯಾಕ್ ಮಾಡಿ ವಿತರಿಸುವುದು ಒಂದು ವಿಧಾನ. ಹಾಲಿನ ನೀರಿನಂಶವನ್ನು ಆವಿಯಾಗಿಸಿ ಹಾಲಿನ ಪುಡಿಯನ್ನಾಗಿಸಿ ಅಗತ್ಯವಿದ್ದಾಗ ಇದಕ್ಕೆ ಬಿಸಿನೀರು ಬೆರೆಸಿ ಹಾಲನ್ನು ಪಡೆಯುವುದು ಇನ್ನೊಂದು ವಿಧಾನ. ಆದರೆ ಆರೋಗ್ಯದ ದೃಷ್ಟಿಯಿಂದ ಮೊದಲ ವಿಧಾನವೇ ಹೆಚ್ಚು ಸೂಕ್ತವಾಗಿದೆ.  

     ಒಂದು ವೇಳೆ ನೀವು ಯಾವುದಾದರೂ ಔಷಧಿಯನ್ನು ಸೇವಿಸುತ್ತಿದ್ದರೆ ಅಥವಾ ವೈದ್ಯರ ನಿಗಾವಿರುವ ಆಹಾರವನ್ನು ಸೇವಿಸುತ್ತಿದ್ದು ಹಾಲು ನಿಮಗೆ ಸೂಕ್ತವಲ್ಲ ಎಂದು ಸೂಚಿಸಿದ್ದರೆ ಹಾಲು ನಿಮಗೆ ಸೂಕ್ತವಲ್ಲ! ಉಳಿದಂತೆ ಎಲ್ಲರಿಗೂ ಹಾಲು ಒಗ್ಗುತ್ತದೆ. ಹಾಲಿನಲ್ಲಿರುವ ಲ್ಯಾಕ್ಟೋಸ್ ಒಂದು ಅದ್ಭುತ ಕಾರ್ಬೋಹೈಡ್ರೇಟ್ ಆಗಿದೆ ಹಾಗೂ ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ಕೆಲವರು ಲ್ಯಾಕ್ಟೋಸ್ ಅಸಹಿಷ್ಣುಗಳಾಗಿರುತ್ತಾರೆ.

     ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ ಅಂದರೆ ಇವರ ಜೀರ್ಣಾಂಗಗಳು ಲ್ಯಾಕ್ಟೋಸ್ ಇರುವ ಯಾವುದೇ ಆಹಾರವನ್ನು ಜೀರ್ಣಗೊಳಿಸಲು ಅಸಮರ್ಥವಾಗಿರುತ್ತವೆ. ಹಾಗಾಗಿ ಇವರು ಹಾಲು ಕುಡಿದರೆ ಹೊಟ್ಟೆಯುಬ್ಬರಿಕೆ, ಅಪಾನವಾಯು ಅಜೀರ್ಣತೆ, ಹೊಟ್ಟೆಯುರಿ ಮೊದಲಾದವು ಕಾಣಿಸಿಕೊಳ್ಳುತ್ತದೆ. ಉಳಿದವರಲ್ಲಿ ಲ್ಯಾಕ್ಟೋಸ್ ಜೀರ್ಣಗೊಂಡ ಬಳಿಕ ಗ್ಯಾಲಾಕ್ಟೋಸ್ ಮತ್ತು ಗ್ಲೂಕೋಸ್ ಆಗಿ ಒಡೆಯುತ್ತವೆ. ಹಾಗಾಗಿ ವ್ಯಕ್ತಿಗಳು ಲ್ಯಾಕ್ಟೋಸ್ ರಹಿತ ಹಾಲುಗಳಾದ ಓಟ್ಸ್ ಹಾಲು, ಸೋಯಾ ಅವರೆಯ ಹಾಲು, ಬಾದಾಮಿಯ ಹಾಲು ಮೊದಲಾದವುಗಳನ್ನು ಸೇವಿಸಬಹುದು. ವ್ಯಕ್ತಿಗಳು ಇತರ ಸ್ಥಳಗಳಲ್ಲಿ ಹಾಲು ಅಥವಾ ಹಾಲಿನಿಂದ ತಯಾರಿಸಿದ ಯಾವುದೇ ಆಹಾರವನ್ನು ಸೇವಿಸಬಾರದು ಏಕೆಂದರೆ ಹೆಚ್ಚಿನವು ಹಸುವಿನ ಹಾಲಿನಿಂದಲೇ ತಯಾರಿಸಿರಲಾಗಿರುತ್ತದೆ.  

    ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಸಂಗತಿಗಳು ತಿಳಿದಿರಲಿ ಎಲ್ಲಾ ವಿಷಯಗಳಿಂದ ಹಾಲು ಎಷ್ಟರ ಮಟ್ಟಿಗೆ ಸುರಕ್ಷಿತ ಆಹಾರ ಎಂದು ಸ್ಪಷ್ಟವಾಗುತ್ತದೆ. ಯಾರಿಗೆ ಲ್ಯಾಕ್ಟೋಸ್ ಸಹಿಸಲು ಸಾಧ್ಯವಿಲ್ಲವೋ ವ್ಯಕ್ತಿಗಳನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿತ್ಯವೂ ಹಾಲನ್ನು ಯಾವುದೇ ಭಯವಿಲ್ಲದೇ ಸೇವಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಹಾಲನ್ನು ನಿತ್ಯವೂ ಸೇವಿಸಬಹುದು, ಆದರೆ ಇದಕ್ಕೊಂದು ಮಿತಿ ಇರುವುದು ಅಗತ್ಯ. ಆರೋಗ್ಯಕರ ಮಿತಿ ಎಂದರೆ ದಿನಕ್ಕೊಂದು ಲೋಟ. ಹಾಲು ತಾಜಾ ಆಗಿದ್ದು ಒಮ್ಮೆ ಬಿಸಿ ಮಾಡಿ ಆರಿಸಿದ ವಿಧಾನ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಎಲ್ಲರಿಗೂ ಸೌಲಭ್ಯ ಸಿಗುವುದು ಸಾಧ್ಯವಿಲ್ಲದ ಕಾರಣ ಕೆನೆಸಹಿತ ಪ್ಯಾಕ್ ಮಾಡಲಾದ, ಪ್ಯಾಶ್ಚರೀಕರಿಸಿದ ತಾಜಾ ಹಾಲು ಉತ್ತಮ ಆಯ್ಕೆಯಾಗಿದೆ.

      ಆದರೆ ಹಾಲನ್ನು ಒಂದು ಅಥವಾ ಎರಡು ದಿನಕ್ಕಿಂತ ಹೆಚ್ಚು ಕಾಲ ಉಳಿಸಿಕೊಳ್ಳಬಾರದು. ಮಾರುಕಟ್ಟೆಯಲ್ಲಿ ಹೆಚ್ಚು ಕಾಲ ಉಳಿಸಿಡುವಂತೆ ಸಂರಕ್ಷಿಸಲಾದ ಯು.ಎಚ್. ಟಿ (ಅಲ್ಟ್ರಾ ಹೀಟ್ ಟ್ರೀಟ್ಮೆಂಟ್) ಹಾಲು, ಸ್ಕಿಮ್ಡ್ ಅಥವಾ ಹಾಲಿನ ಪುಡಿಯನ್ನು ನೀರಿಗೆ ಬೆರೆಸಿ ತಯಾರಿಸಿದ ಹಾಲು ಪ್ಯಾಕೆಟ್ಟುಗಳಲ್ಲಿ ದೊರಕುತ್ತವೆ. ಹಾಲುಗಳು ಅನಿವಾರ್ಯ ಸಂದರ್ಭಕ್ಕೆ ಉಚಿತವೇ ಹೊರತು ನಿತ್ಯ ಬಳಕೆಗೆ ತಾಜಾ ಹಾಲೇ ಉತ್ತಮ. ನಿತ್ಯವೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ. ಒಂದು ವೇಳೆ ಸ್ಥೂಲಕಾಯ, ತೂಕ ಇಳಿಕೆ ಮೊದಲಾದ ಗುರಿಗಳಿಗೆ ಹಾಲು ಅಡ್ಡಿಯಾಗುತ್ತದೆ ಎಂದಿದ್ದಲ್ಲಿ ಕೆನೆರಹಿತ ಉತ್ಪನ್ನಗಳನ್ನು ಬಳಸಬಹುದು.