ಮುಖ ಮನಸ್ಸಿನ ಕನ್ನಡಿ ಎಂಬ ನಾಣ್ಣುಡಿ ಇದೆ. ಅದೇ ಮುಖ ನಮ್ಮ ದೇಹದ ಕನ್ನಡಿಯೂ ಆಗಬಹುದು. ನಮಗೆ ಸುಸ್ತಾದರೆ, ಖುಷಿಯಾದರೆ, ನೋವಾದರೆ, ಗಾಯವಾದರೆ ಎಲ್ಲವೂ ಮುಖದಲ್ಲಿ ಪ್ರತಿಫಲನಗೊಳ್ಳುತ್ತದೆ. ಹಾಗೆಯೇ ನಮ್ಮ ಮುಖ ಕೆಲವು ರೋಗಲಕ್ಷಣಗಳ ಮಾಹಿತಿಯನ್ನೂ ನೀಡುತ್ತದೆ. ವೈದ್ಯರು ನಮಗೆ ಬಂದಿರುವ ಖಾಯಿಲೆಯನ್ನು ಕಂಡುಹಿಡಿಯುವಾಗ ಅದು ಗುಣಪಡಿಸುವ ಹಂತವನ್ನು ದಾಟಿರಲೂಬಹುದು. ಅದಕ್ಕೆ ನಮ್ಮ ಮುಖದಲ್ಲಿ ಆಗುವ ಸಣ್ಣಪುಟ್ಟ ಬದಲಾವಣೆಗಳು ಯಾವ ರೋಗದ ಬಗ್ಗೆ ಸೂಚನೆ ನೀಡುತ್ತದೆ ಎಂಬ ಅರಿವು ನಮಗಾದರೆ ವೈದ್ಯರ ಬಳಿ ಹೋಗಿ ಅದನ್ನಿ ಖಚಿತಪಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬಹುದು.

ಮುಖದಲ್ಲಿ ದದ್ದುಗಳು:

ಮುಖದಲ್ಲಿ ಅಲ್ಲಲ್ಲಿ ದದ್ದುಗಳು, ಕೆಂಪಗಾಗಿದ್ದರೆ ಇಂದು ಜೀರ್ಣಕ್ರೀಯೆಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು. ಇನ್ನು ಈ ದದ್ದುಗಳು ತುರಿಕೆ ಉಂಟುಮಾಡುತ್ತಿದ್ದರೆ ಇದು ಸಿಲಿಯಾಕ್ (celiac) ಖಾಯಿಲೆಯ ಲಕ್ಷಣವಾಗಿರಬಹುದು. ಇದು ಕೆಲ ಆಹಾರದಿಂದ ಅಲರ್ಜಿಯಾಗಿ ಹೊಟ್ಟೆ ಉಬ್ಬರ ಅಥವಾ ಭೇದಿ ಉಂಟಾಗುವ ಖಾಯಿಲೆಯಾಗಿದೆ. ಕೆನ್ನೆಯ ಮೂಳೆಗಳಲ್ಲಿ ಅಥವಾ ಮೂಗಿನ ಮಧ್ಯದಲ್ಲಿ ಈ ತರಹದ ದದ್ದುಗಳು ಉಂಟಾದರೆ ಇದು ಚರ್ಮದ ಕ್ಷಯ(lupus)ವಾಗಿರಬಹುದು. ಅಲರ್ಜಿ, ಎನ್ಝಿಮಾ ಮುಂತಾದ ಸೋಕುಗಳಿದ್ದರೂ ಮುಖದಲ್ಲಿ ದದ್ದುಗಳು ಉಂಟಾಗುತ್ತವೆ.

RELATED ARTICLES  ರುಚಿಕರವಾದ ಮಸಾಲೆ ಬಾತ್.....

ಚರ್ಮ, ತುಟಿಗಳು ಒಣಗುವುದು:

ಸಾಮಾನ್ಯವಾಗಿ ಚಳಿಗಾಲದಲ್ಲೂ ಚರ್ಮ ಮತ್ತು ತುಟಿಗಳು ಒಣಗುತ್ತವೆ. ಆದರೆ ಇದು ಅತಿಯಾಗಿ ಚರ್ಮ ಒಡೆದು ಪದರು ಪದರಾಗಿದ್ದರೆ ಇದು ನಿರ್ಜಲೀಕರಣದ ಸಮಸ್ಯೆಯಾಗಿರುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿದ್ದರೂ ಕೆಲವೊಮ್ಮೆ ಇದು ಹೈಪೋಥೆರಾಡೈಸಮ್ (hypothyroidism)ನಂತಹ ಬೆವರು ಗ್ರಂಥಿಯ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಗಂಟಲಿಗೆ ಸಂಬಂಧಪಟ್ಟ ಖಾಯಿಲೆಯನ್ನುಂಟು ಮಾಡಬಹುದು. ಅಥವಾ ಮಧುಮೇಹದ ಸೂಚನೆಯನ್ನೂ ನೀಡಬಹುದು.

ಕಣ್ಣುಗುಡ್ಡೆಗಳ ಮೇಲೆ ಹಳದಿ ಬಣ್ಣ:

ಕಣ್ಣುಗುಡ್ಡೆಗಳ ಮೇಲೆ ಅಥವಾ ಮೂಲೆಗಳಲ್ಲಿ ಪುಟ್ಟ ಹಳದಿ ಗುಡ್ಡೆಗಳು ಕಾಣಿಸಿಕೊಂಡರೆ ಅವು ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಇದು ಹೃದ್ರೋಗದ ಲಕ್ಷಣವೂ ಆಗಿರಬಹುದು.

ಮುಖದಲ್ಲಿ ಅಸಮತೆ:

ಸಾಮಾನ್ಯವಾಗಿ ಮುಖದ ಎರಡೂ ಬದಿಗಳು ಸಮಾನವಾಗಿರುತ್ತವೆ. ಆದರೆ ಮುಖದ ಬಲಭಾಗ ಮತ್ತು ಎಡಭಾಗದಲ್ಲಿ ವ್ಯತ್ಯಾಸ ಕಂಡುಬಂದರೆ ಅದು ಪಾರ್ಶ್ವವಾಯುವಿನ ಮೊದಲ ಲಕ್ಷಣವಾಗಿರುತ್ತದೆ. ಇದು ಕನ್ನಡಿ ನೋಡುವಾಗ ಸ್ಪಷ್ಟವಾಗಿ ಕಾಣಿಸುತ್ತದೆ. ಇದರಿಂದ ಮಾತಾಡಲು, ನಗಲು ಆಗದೆ ಇರುವುದು, ಮುಖದ ಒಂದು ಭಾಗ ಮರಗಟ್ಟಿದಂತೆ ಆಗುವುದೂ ಇದೆ. ಇದನ್ನು ಖಂಡಿತವಾಗಿಯೂ ಕಡೆಗಣಿಸಬೇಡಿ.

RELATED ARTICLES  ಅಕ್ಕಿ ರೊಟ್ಟಿ ಮಾಡುವ ಸುಲಭ ವಿಧಾನ……..!!

ಗಲ್ಲ ಕಿರಿದಾಗುವುದು:

ಕುತ್ತಿಗೆ ದಪ್ಪವಾಗುವುದರಿಂದ ನಮ್ಮ ಗಲ್ಲ ಕಿರಿದಾಗಿರುವಂತೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ನಿಮಗೆ ಗೊತ್ತಿಲ್ಲದೆ ನಿದ್ದೆಯಲ್ಲಿ ನಿಮ್ಮ ಉಸಿರಾಟ 10 ಸೆಕೆಂಡ್ ಗಳ ಕಾಲ ಸ್ಥಗಿತಗೊಳ್ಳುತ್ತದೆ. ಇದು ಆಗಾಗ ನಡೆಯುತ್ತಿದ್ದರೆ ಗಂಭೀರ ಸಮಸ್ಯೆ ಕಾಡಬಹುದು. ಅಲ್ಲದೆ, ಇದರಿಂದ ಗಟ್ಟಿಯಾಗಿ ಗೊರಕೆ ಹೊಡೆಯಬಹುದು ಮತ್ತು ಮಾರನೇ ದಿನ ತಲೆ ನೋವಿನಂತಹ ಸಮಸ್ಯೆಗಳನ್ನು ತಂದೊಡ್ಡಬಹುದು. ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಮುಖದ ಬಣ್ಣದಲ್ಲಿ ಬದಲಾವಣೆ:

ಮುಖದ ಚರ್ಮದಲ್ಲಿ ಅಲ್ಪಸ್ವಲ್ಪ ಬದಲಾವಣೆಯಾದರೂ ಅದನ್ನು ಕಡೆಗಣಿಸಬಾರದು. ಇದು ಯಾವುದೋ ಖಾಯಿಲೆಯ ಲಕ್ಷಣವಾಗಿರುತ್ತದೆ. ಚರ್ಮದ ಬಣ್ಣ ಹಳದಿಯಾಗಿದ್ದರೆ ಯಕೃತ್ತಿಗೆ ಸಂಬಂಧಪಟ್ಟ ರೋಗ, ಪೇಲವವಾಗಿದ್ದರೆ ರಕ್ತಹೀನತೆಯ ಲಕ್ಷಣವಾಗಿರುತ್ತದೆ. ತುಟಿಗಳಲ್ಲಿ ಮತ್ತು ಉಗುರುಗಳ ಬುಡದಲ್ಲಿ ನೀಲಿ ಕಲೆಗಳು ಕಂಡುಬಂದರೆ ಅದು ಹೈದಯ ಅಥವಾ ಶ್ವಾಸಕೋಶಗಳ ಸಂಬಂಧಿ ಸಮಸ್ಯೆಯಾಗಿರುತ್ತದೆ.

ಕಣ್ಣುಗಳು ಊದಿಕೊಳ್ಳುವಿಕೆ:

ಕಣ್ಣುಗಳಿಗೆ ತೀವ್ರ ಸುಸ್ತಾದಾಗ ಅವು ಊದಿಕೊಳ್ಳುತ್ತವೆ. ಇದು ಅಲರ್ಜಿಯ ಲಕ್ಷಣವಾಗಿರುತ್ತದೆ. ಇವು ರಕ್ತನಾಳಗಳನ್ನು ಹಿಗ್ಗಿಸಬಹುದು ಮತ್ತು ಸೋರಿಕೆಗೆ ಕಾರಣವಾಗಬಹುದು. ಈ ಖಾಯಿಗೆಗಳು ಕಣ್ಣಿನ ಕೆಳಗಿನ ಸಂವೇದನಾಶೀಲ ಚರ್ಮ ಊದಿಕೊಳ್ಳುವಂತೆ ಮಾಡುತ್ತದೆ.