ಏನೇನು ಬೇಕು?:
1/2 ಕಪ್ ತೊಗರಿಬೇಳೆ , 2-3 ಬೇಯಿಸಿ ಮ್ಯಾಷ್ ಮಾಡಿದ ನೆಲ್ಲಿಕಾಯಿ,1 ಟೊಮೆಟೊ, 1 ಚಮಚ ರಸಂಪುಡಿ, 1 ಒಣಮೆಣಸು, 2 ಹಸಿಮೆಣಸು, 1/2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ, 1 ಎಸಳು ಕರಿಬೇವು, ಸ್ವಲ್ಪ ಕೊತ್ತಂಬರಿಸೊಪ್ಪು, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ತುಂಡು ಬೆಲ್ಲ.
ಮಾಡೋದು ಹೇಗೆ?
ಬಾಣಲೆ ಒಲೆಯ ಮೇಲಿಟ್ಟು 2 ಕಪ್ ನೀರು, ಜಜ್ಜಿದ ನೆಲ್ಲಿಕಾಯಿ ಹಾಕಿ ಕುದಿಸಿ. ನಂತರ ರಸಂಪುಡಿ, ಬೆಲ್ಲ, ಟೊಮೆಟೊ ಚೂರು, ಬೇಯಿಸಿದ ತೊಗರಿಬೇಳೆ, ಹಸಿಮೆಣಸು ಚೂರು, ಉಪ್ಪು ಸೇರಿಸಿ 5-10 ನಿಮಿಷ ಕುದಿಸಿ. ನಂತರ ತುಪ್ಪದಲ್ಲಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಕೆಂಪುಮೆಣಸು ಸೇರಿಸಿ ಒಗ್ಗರಣೆ ಕೊಡಿ. ಕೊನೆಗೆ ಕೊತ್ತಂಬರಿಸೊಪ್ಪು ಹಾಕಿ
ಒಲೆಯಿಂದ ಇಳಿಸಿ. ಈಗ ಪೌಷ್ಟಿಕವಾದ ರುಚಿಯಾದ ನೆಲ್ಲಿಕಾಯಿ ಸಾರು ಅನ್ನದೊಂದಿಗೆ ಸವಿಯಲು ಸಿದ್ಧ.