ನೀವು ಕ್ಯಾರೆಟ್ ಹಲ್ವಾ, ಬಾದಾಮ್ ಹಲ್ವಾ ಎಲ್ಲ ಕೇಳಿರಬಹುದು, ಮಾಡಿ, ತಿಂದಿರಬಹುದು. ಹಾಗೆಯೇ ಹೆಸರು ಬೇಳೆಯಿಂದ ಪಾಯಸ ಕೂಡ ತಯಾರಿಸಿ ಸವಿದಿರಬಹುದು. ಆದರೆ ಹೆಸರುಬೇಳೆಯಿಂದಯಾವತ್ತಾದರೂ ಹಲ್ವಾ ಮಾಡಿದ್ದೀರಾ? ಒಂದೇ ರೀತಿಯ ಹಲ್ವಾ ಮಾಡಿ ಬೇಜಾರಾಗಿದ್ದಾರೆ ಇದನ್ನು ಒಂದು ಬಾರಿ ಮಾಡಿ ನೋಡಿ.

ಪೋಷಕಾಂಶಗಳ ವಿವರ:

ಕಾರ್ಬೋಹೈಡ್ರೇಟ್ : 41.7 ಗ್ರಾಮ್

ಕೊಬ್ಬು : 33.5 ಗ್ರಾಮ್

ಕೊಲೆಸ್ಟ್ರಾಲ್ : 0.0 ಮಿ ಗ್ರಾಮ್

ಪ್ರೊಟೀನ್ : 7.8 ಗ್ರಾಮ್

ಪ್ರಮಾಣ : 4 ಜನರಿಗೆ

ತಯಾರಿಸಲು ಬೇಕಾಗುವ ಸಮಯ : 50 ನಿಮಿಷ

RELATED ARTICLES  ರುಚಿಯಾದ ಪಾಲಕ್ ಪನೀರ್ ಮಾಡುವುದು ಹೇಗೆ ಗೊತ್ತಾ?

ಬೇಕಾಗುವ ಸಾಮಾಗ್ರಿಗಳು:

ಹೆಸರು ಬೇಳೆ : 1/2 ಕಪ್ (5-6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಬೇಕು)

ತುಪ್ಪ : 1/2 ಕಪ್

ಸಕ್ಕರೆ : 1/2 ಕಪ್

ಹಾಲು : 1/2 ಕಪ್

ನೀರು : 1 ಕಪ್

ಏಲಕ್ಕಿ ಪುಡಿ : 1/4 ಟೀ ಚಮಚ

ಹುರಿದ ಬಾದಾಮಿ : 2 ಟೇಬಲ್ ಚಮಚ

ಮಾಡುವ ವಿಧಾನ:

ನೆನೆಸಿದ ಹೆಸರುಬೇಳೆಯನ್ನು ತೊಳೆದು ತರಿತರಿಯಾಗಿ ರುಬ್ಬಿಕೊಳ್ಳಿ.

ಹಾಲಿಗೆ ಸಕ್ಕರೆ ಮತ್ತು ಸ್ವಲ್ಪ ನೀರು ಸೇರಿಸಿ ಕುದಿಸಿ ಆರದೆ ಇರುವ ಹಾಗೆ ಮುಚ್ಚಳ ಮುಚ್ಚಿ ಇಡಿ.

RELATED ARTICLES  ಮನೆಯಲ್ಲೇ ಮಾಡಿ ಸವಿಯಿರಿ ಪಾವ್‌ಬಾಜಿ.

ಈಗ ಒಂದು ಗಟ್ಟಿ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ರುಬ್ಬಿದ ಹೆಸರುಬೇಳೆಯನ್ನು ಮಿಶ್ರ ಮಾಡಿ ಕಡಿಮೆ ಉರಿಯಲ್ಲಿ ನಿಧಾನಕ್ಕೆ ಕದಡುತ್ತಿರಿ.

ಈಗ ಇದಕ್ಕೆ ಸಕ್ಕರೆ ಮಿಶ್ರ ಮಾಡಿದ ಹಾಲನ್ನು ಹಾಕಿ ಚೆನ್ನಾಗಿ ಕದಡಿಕೊಳ್ಳಿ. ನೀರು ಹೀರಿಕೊಂಡು ತಳ ಬಿಡುವವರೆಗೂ ಚೆನ್ನಾಗಿ ಸೌಟಿನಿಂದ ಬೆರೆಸುತ್ತಿರಿ.

ನಂತರ ಏಲಕ್ಕಿ ಪುಡಿ ಮತ್ತು ಬಾದಾಮಿ ಸೇರಿಸಿ.

ತಯಾರಾದ ಹಲ್ವಾವನ್ನು ತುಪ್ಪ ಸವರಿದ ಪ್ಲೇಟ್ ಗೆ ವರ್ಗಾಯಿಸಿ ಬಾದಾಮಿಯಿಂದ ಅಲಂಕರಿಸಿ ಬಿಸಿ ಬಿಸಿಯಾಗಿ ಸವಿಯಲು ಕೊಡಿ.