ಬೇಕಾಗುವ ಪದಾರ್ಥಗಳು

ಗುಂಡು ಬದನೆಕಾಯಿ – 3-4
ಅಚ್ಚ ಖಾರದ ಪುಡಿ – 2 ಚಮಚ
ಅರಿಶಿನ
ಇಂಗು
ಅಕ್ಕಿ ಹಿಟ್ಟು
ಉಪ್ಪು
ಸಣ್ಣ ರವೆ
ಎಣ್ಣೆ – ಕರಿಯಲು

ಮಾಡುವ ವಿಧಾನ…

ಮೊದಲು ಬದನೆಕಾಯಿ ಚೆನ್ನಾಗಿ ತೊಳೆದು ಜುಟ್ಟನ್ನು ತೆಗೆದು ಮಧ್ಯಮ ಗಾತ್ರಕ್ಕೆ ಬದನೆಯಾಯನ್ನು ಕತ್ತರಿಸಿಕೊಳ್ಳಬೇಕು.

RELATED ARTICLES  ರುಚಿ ರುಚಿಯ ಮಜ್ಜಿಗೆ ಹುಳಿ! ಮಾಡೋದು ಹೇಗೆ ಗೊತ್ತಾ?

ಬಳಿಕ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಅಚ್ಚಖಾರದ ಪುಡಿ, ಅರಿಶಿನ, ಉಪ್ಪು, ಚಿಟಿಕೆ ಇಂಗು, ಅಕ್ಟಿ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಾಡಿಕೊಳ್ಳಬೇಕು.

ಈ ಮುಶ್ರಣಕ್ಕೆ ಮಧ್ಯಮ ಗಾತ್ರದಲ್ಲಿ ಕತ್ತರಿಸಿಕೊಂಡ ಬದನೆಕಾಯಿಯನ್ನು ಹಾಕಿ ಮಸಾಲೆ ಬದನೆಕಾಯಿಗೆ ಅಂಟುವಂತೆ ಮಾಡಿಟ್ಟುಕೊಳ್ಳಬೇಕು.

RELATED ARTICLES  ಗಾರ್ಲಿಕ್ ರೈಸ್

ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ಸಣ್ಣ ರವೆ, ಉಪ್ಪು, ಖಾರದ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ಬಳಿಕ ಮಸಾಲೆ ಹಚ್ಚಿದ ಬದನೆಕಾಯಿಗಳನ್ನು ತೆಗೆದುಕೊಂಡು ರವೆಯೊಂದಿಗೆ ಹೊರಳಿಸಬೇಕು.

ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬದನೆಕಾಯಿಗಳನ್ನು ಹಾಕಿ ಚೆನ್ನೈಗಿ ಎರಡೂ ಕಡೆ ಫ್ರೈ ಮಾಡಿದರೆ ರುಚಿಕರವಾದ ಬದನೆಕಾಯಿ ಫ್ರೈ ಸವಿಯಲು ಸಿದ್ಧ.