ಮಜ್ಜಿಗೆ ಹುಳಿ ಎಂದ ಕೂಡಲೇ ಎಲ್ಲರ ಬಾಯಲ್ಲಿ ನೀರೂರುವುದು ಸಹಜ! ಮಜ್ಜಿಗೆ ಹುಳಿಯೊಂದಿಗೆ ಅನ್ನ ಮತ್ತು ಮುದ್ದೆ ಊಟ ಮಾಡಬಹುದು. ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನಕ್ಕೆ ಪ್ರಜಾವಾಣಿ ರೆಸಿಪಿಯಲ್ಲಿರುವ ‘ಮಜ್ಜಿಗೆ ಹುಳಿ’ ವಿಡಿಯೊ ನೋಡಿ…
ಸಾಮಗ್ರಿಗಳು
1. ಬೂದುಗುಂಬಳ ಕಾಯಿ ಹೆಚ್ಚಿದ್ದು – 1 ಕಪ್
2. ಶುಂಠಿ – 1 ಇಂಚು
3. ಕಡಲೆ ಬೇಳೆ ನೆನೆಸಿದ್ದು – ಒಂದು ಸ್ಪೂನ್
4. ಹಸಿಮೆಣಸಿನ ಕಾಯಿ – 3
5. ಜೀರಿಗೆ – 1/4 ಕಪ್
6. ತೆಂಗಿನ ತುರಿ – 1/4 ಕಪ್
7. ಕೊತ್ತಂಬರಿ ಸೊಪ್ಪು – ಸ್ವಲ್ಪ
8. ಅರಿಶಿನ – 1/2 ಸ್ಪೂನ್
9. ಸಕ್ಕರೆ – ಒಂದು ಸ್ಪೂನ್
10. ಮೊಸರು – ಒಂದು ಕಪ್
ಒಗ್ಗರಣೆಗೆ
1. ಎಣ್ಣೆ – 1 ಸ್ಪೂನ್
2. ಸಾಸಿವೆ – ಸ್ವಲ್ಪ
3. ಕರಿಬೇವು – ಸ್ವಲ್ಪ
4. ಇಂಗು- ಸ್ವಲ್ಪ
5. ಒಣಮೆಣಸಿನ ಕಾಯಿ –
ಮಾಡುವ ವಿಧಾನ: ಬೂದುಗುಂಬಳದ ಹೋಳುಗಳನ್ನು ಸ್ವಲ್ಪ ಉಪ್ಪು ಹಾಕಿ ಒಂದು ಕಪ್ ನೀರೂ ಹಾಕಿ ಬೇಯಿಸಬೇಕು. ಒಂದು ಕಡೆ ಅದು ಬೇಯುತ್ತಿರುವಂತೆ, ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಹಸಿಮೆಣಸಿನ ಕಾಯಿ, ಜೀರಿಗೆ ಹಾಕಿ ಹುರಿಯಬೇಕು. ಕೊಂಚ ತಣ್ಣಗಾದ ಮೇಲೆ ಇದರ ಜೊತೆಗೆ ಶುಂಠಿ, ನೆನೆದ ಕಡಲೆ ಬೇಳೆ, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಅರಿಶಿನ ಸೇರಿಸಿ ರಬ್ಬಿಕೊಳ್ಳಬೇಕು.
ರುಬ್ಬಿದ ಈ ಮಿಶ್ರಣವನ್ನು ಬೇಯುತ್ತಿರುವ ಬೂದುಗುಂಬಳ ಕಾಯಿಗೆ ಹಾಕಿ ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೇಯಿಸಿ ಸ್ಟವ್ ಆಫ್ ಮಾಡಿ ಮೊಸರನ್ನು ಸೇರಿಸಬೇಕು. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಾನುಗಳನ್ನು ಸೇರಿಸಿ, ಬಾಡಿಸಿ ಮಜ್ಜಿಗೆ ಹುಳಿಗೆ ಸೇರಿಸಿದರೆ ಮಜ್ಜಿಗೆ ಹುಳಿ ಸವಿಯಲು ಸಿದ್ಧ.