ಅದೇ ಊಟ, ತಿಂಡಿ, ಹಣ್ಣುಗಳನ್ನು ತಿಂದು ತಿಂದು ಬೋರ್ ಆಗಿದೆಯೇ? ಹಣ್ಣುಗಳನ್ನು ಡೈರೆಕ್ಟ್ ಆಗಿ ತಿನ್ನುವ ಬದಲು ಅದರಿಂದ ವಿವಿಧ ಖಾದ್ಯಗಳನ್ನು ತಯಾರಿಸಿ ತಿಂದ್ರೆ ಅದರ ಮಜಾನೇ ಬೇರೆ.
ಬನ್ನಿ ಇವತ್ತು ಬಾಳೆಹಣ್ಣಿನಿಂದ ಒಂದು ರುಚಿ ರುಚಿಯಾದ ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಟ್ಟು ತಿನ್ನುವ ಖಾದ್ಯ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ;
ಬೇಕಾಗುವ ಸಾಮಾಗ್ರಿಗಳು:
ಬಾಳೆಹಣ್ಣು – 1
ಮೊಟ್ಟೆ – 1
ಲವಂಗ ಪುಡಿ – 1 ಚಿಟಿಕೆ
ಶುಂಠಿ ಪುಡಿ – 1 ಚಿಟಿಕೆ
ಚಕ್ಕೆ ಪುಡಿ – 3 ಚಿಟಿಕೆ
ಜಾಯಿಕಾಯಿ ಪುಡಿ – 1 ಚಿಟಿಕೆ
ವೆನಿಲ್ಲಾ – ಸ್ವಲ್ಪ
ಬ್ರೆಡ್ – 6
ಬೆಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಪೋರ್ಕ್ ನ ಸಹಾಯದಿಂದ ಬಾಳೆಹಣ್ಣನ್ನು ಗಂಟು ಬಿಡುವವರೆಗೂ ಚೆನ್ನಾಗಿ ಕಿವುಚಿ.
ಈಗ ಈ ಪಾತ್ರೆಗೆ ಮೊಟ್ಟೆ ಒಡೆದು ಹಾಕಿ, ಶುಂಠಿ, ಚಕ್ಕೆ, ಜಾಯಿಕಾಯಿ, ಲವಂಗ ಪುಡಿಗಳು ಮತ್ತು ವೆನಿಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಒಂದು ಪಾತ್ರೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಅದಕ್ಕೆ ಬೆಣ್ಣೆ ಹಾಕಿ.
ಈಗ ಬ್ರೆಡ್ ತುಂಡುಗಳನ್ನು ಒಂದೊಂದಾಗಿ ತೆಗೆದುಕೊಂಡು ಅದನ್ನು ಬಾಳೆಹಣ್ಣಿನ ಮಿಶ್ರಣದ ಒಳಗೆ ಚೆನ್ನಾಗಿ ಅದ್ದಿ, ಬೆಣ್ಣೆಯಲ್ಲಿ ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿ.
ಈಗ ರುಚಿ ರುಚಿಯಾದ ‘ಬನಾನ ಬ್ರೆಡ್ ಟೋಸ್ಟ್’ ತಿನ್ನಲು ರೆಡಿ.
ಇದನ್ನು ಬೆಳಗ್ಗಿನ ಬ್ರೇಕ್ ಫಾಸ್ಟ್ ಆಗಿ ಅಥವಾ ಸಂಜೆ ಸ್ನ್ಯಾಕ್ಸ್ ಆಗಿ ಕಾಫಿ, ಟೀ ಜೊತೆ ಸವಿಯಬಹುದು.