ಬೇಕಾಗುವ ಪದಾರ್ಥಗಳು
ಕಡಲೆಬೇಳೆ – ಸ್ವಲ್ಪ
ಉದ್ದಿನ ಬೇಳೆ – ಸ್ವಲ್ಪ
ಒಣಗಿದ ಮೆಣಸಿನ ಕಾಯಿ – ಸ್ವಲ್ಪ
ಎಣ್ಣೆ – ಸ್ವಲ್ಪ
ಈರುಳ್ಳಿ – ಕತ್ತರಿಸಿದ್ದ 1
ಬೆಳ್ಳುಳ್ಳಿ – 3 ಎಸಳು
ಕ್ಯಾರೆಟ್ – 1 ಬಟ್ಟಲು
ಕಾಯಿ ತುರಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಹುಣಸೆಹಣ್ಣು – ಸ್ವಲ್ಪ
ಮಾಡುವ ವಿಧಾನ…
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನ ಬೇಳೆ, ಒಣಗಿದ ಮೆಣಸಿನಕಾಯಿ ಹಾಯಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೆಟ್ ಹಾಕಿ ಹುರಿದುಕೊಳ್ಳಬೇಕು. ಬಳಿಕ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿದುಕೊಂಡ ಮಿಶ್ರಣವನ್ನು ಹಾಕಿ ಉಪ್ಪು, ಕಾಯಿತುರಿ, ಉಪ್ಪು ಹಾಗೂ ಹುಣಸೆಹಣ್ಣು, ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಭಬೇಕು.
ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ, ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ರುಬ್ಬಿಕೊಂಡ ಚಟ್ನಿಗೆ ಹಾಕಿದರೆ, ರುಚಿಕರ ಹಾಗೂ ಆರೋಗ್ಯಕರವಾದ ಕ್ಯಾರೆಟ್ ಚಟ್ನಿ ಸವಿಯಲು ಸಿದ್ಧ.