ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಸಚಿವಾಲಯದ ಸ್ಕಿಲ್ ಇಂಡಿಯಾ, ಎನ್. ಎಸ್.ಡಿ.ಸಿ. ಹಾಗೂ ಎಸ್.ಡಿ. ಎಮ್. ಕಾಲೇಜು ಹೊನ್ನಾವರ ಇವರುಗಳ ಸಹಭಾಗಿತ್ವದಲ್ಲಿ ಹೊನ್ನಾವರ ತಾಲೂಕಿನ ಎಸ್.ಡಿ.ಎಮ್ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ಬೃಹತ್ ಉದ್ಯೋಗ ಮೇಳವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಮಾನ್ಯ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಅಲ್ಲಿ ನೆರೆದ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು.

RELATED ARTICLES  ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್

ಈ ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಸುಮಾರು 3000 ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಸರು ನೊಂದಣಿ ಮಾಡಿಸಿದ್ದರು. ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ವತಿಯಿಂದ ಹಲವಾರು ಅಭ್ಯರ್ಥಿಗಳನ್ನು ಕಳುಹಿಸಲಾಗಿದ್ದು ಅವರಲ್ಲಿ ಕೆಲವರಿಗೆ ಉದ್ಯೋಗ ದೊರೆತಿದ್ದು ಒಟ್ಟು ಸುಮಾರು 700-800 ಜನರಿಗೆ ತಕ್ಷಣ ಉದ್ಯೋಗಾವಕಾಶ ಲಭಿಸಿದೆ. ರಾಘವೇಂದ್ರ ಗುನಗ, ಯೋಗೇಶ ವಿಠ್ಠಲ್ ನಾಯ್ಕ ಸೇರಿದಂತೆ ಹಲವರಿಗೆ ಸಚಿವರು ಸಾಂಕೇತಿಕವಾಗಿ ನೇಮಕಾತಿ ಪತ್ರವನ್ನು ಸಹ ವಿತರಿಸಿದರು.

RELATED ARTICLES  ಅತ್ಯಂತ ಮಹತ್ವಪೂರ್ಣ ಈ ದೇವಾಲಯದ ಬಗ್ಗೆ ನೀವು ತಿಳಿಯಲೇ ಬೇಕು.