ಏನೇನು ಬೇಕು?:
ಹೂಕೋಸು 1 ,ಕಾರ್ನ್ ಫ್ಲೋರ್‌ 3 ಕಪ್‌ , ಮೈದಾ 1 ಕಪ್‌ , ಅರಿಶಿನ 1 ಸ್ಪೂನ್‌ , ಅಚ್ಚ ಖಾರದ ಪುಡಿ 2 ಸ್ಪೂನ್‌ , ಅಜಿನಮೊಟೊ 1/2 ಸ್ಪೂನ್‌ , ಸೋಯಾ ಸಾಸ್‌ 2 ಸ್ಪೂನ್‌ , ನಿಂಬೆ ರಸ ಅಥವಾ ವಿನಿಗರ್‌ 1/2 ಸ್ಪೂನ್‌ , ಬ್ಲ್ಯಾಕ್‌ ಪೆಪ್ಪರ್‌ ಪೌಡರ್‌ 1 ಸ್ಪೂನ್‌ , ರೆಡ್‌ ಫ‌ುಡ್‌ ಕಲರ್‌ 1 ಚಿಟಿಕೆ , ಉಪ್ಪು ರುಚಿಗೆ ತಕ್ಕಷ್ಟು.

ಮಾಡೋದು ಹೇಗೆ?:

– ಕಾರ್ನ್ಫ್ಲೋರ್‌, ಮೈದಾ, ಅರಿಶಿನ, ಖಾರದ ಪುಡಿ, ಅಜಿನಮೊಟೊ, ಪೆಪ್ಪರ್‌ ಪೌಡರ್‌ ಹಾಗೂ ಉಪ್ಪನ್ನು ಮಿಕ್ಸ್‌ ಮಾಡಿ.
– ಇದಕ್ಕೆ ಸೊಯಾ ಸಾಸ್‌, ರೆಡ್‌ ಫ‌ುಡ್‌ ಕಲರ್‌ ಹಾಗೂ ನಿಂಬೆರಸವನ್ನು ಮಿಕ್ಸ್‌ ಮಾಡಿ.
– ಇದಕ್ಕೆ ಸ್ವಲ್ಪ ನೀರುಹಾಕಿ ಪೇಸ್ಟ್‌ ಥರ ಕಲಸಿಕೊಳ್ಳಿ. ಗಂಟಾಗದ ಹಾಗೆ ನೋಡಿಕೊಳ್ಳಿ.
– ಬಾಣಲೆಯಲ್ಲಿ ಎಣ್ಣೆ ಬಿಸಿಗಿಡಿ.
– ಹೂಕೋಸಿನ ಹೋಳನ್ನು ರೆಡಿಮಾಡಿಕೊಂಡ ಪೇಸ್ಟ್‌ನಲ್ಲಿ ಸಂಪೂರ್ಣ ಮುಳುಗಿಸಿ.
– ಎಣ್ಣೆಯಲ್ಲಿ ಕರಿಯಿರಿ. ಈ ಹೋಳುಗಳು ಬಿಡಿಬಿಡಿಯಾಗಿರುವಂತೆ ನೋಡಿಕೊಳ್ಳಿ. ಒಂದಕ್ಕೊಂದು ಅಂಟಿಕೊಂಡಂತಾದರೆ ಸ್ಪೂನ್‌ನಿಂದ ಬಿಡಿಸಿ.
– 8 ನಿಮಿಷ ಕರಿಯುವಾಗ ಇದು ಕಂದುಬಣ್ಣಕ್ಕೆ ಬರುತ್ತೆ. ನಂತರ ತೆಗೆಯಿರಿ. ಟೊಮ್ಯಾಟೊ ಕೆಚಪ್‌ ಜೊತೆಗೆ ಸವಿಯಿರಿ.

RELATED ARTICLES  ನೀವೇ ತಯಾರಿಸಿ ದೇಶಿ ಹಳ್ಳಿ ಅವಲಕ್ಕಿ ಚುಡಾ !