ಪ್ರತಿನಿತ್ಯ ಆಹಾರ ಪದಾರ್ಥವಾಗಿ ಬಳಸಲ್ಪಡುವ ಕೊತ್ತಂಬರಿಯಲ್ಲಿ ಅಧಿಕ ಪ್ರಮಾ಼ದ ಔಷಧೀಯ ಗುಣವಿದೆ. ಅಡುಗೆಗೆ ವಿಶಿಷ್ಟ ರೀತಿಯ ಪರಿಮಳವನ್ನು ನೀಡುವ ಕೊತ್ತಂಬರಿ ಸೊಪ್ಪು ಎಪಿಯಾಸಿಯಸ್ ಸಸ್ಯ ವರ್ಗಕ್ಕೆ ಸೇರಿದೆ.

ಮನೆಯ ಹಿತ್ತಲಲ್ಲಿ ವರ್ಷಪೂರ್ತಿ ಬೆಳೆಯಬಹುದಾದ ಕೊತ್ತಂಬರಿ ಬರೀ ಅಡುಗೆಗೆ ಮಾತ್ರ ಸೀಮಿತವಾಗದೆ ಸೌಂದರ್ಯ ವರ್ಧಕ, ಸಾಬೂನುಗಳ ತಯಾರಿಕೆ, ಟೂತ್ ಪೇಸ್ಟ್ ಗಳ ಉತ್ಪಾದನೆಯಲ್ಲಿ ಇದನ್ನು ಬಳಸುತ್ತಾರೆ.

ಸುಗಂಧ ಭರಿತವಾಗಿರುವ ಕೊತ್ತಂಬರಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ತ್ವಚೆಯ ಆರೋಗ್ಯ ಕಾಪಾಡುವ ಕೊತ್ತಂಬರಿ ದೇಹದ ಬೊಜ್ಜು ಕರಗಿಸಲು ಸಹಕಾರಿ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಇದರ ನಿಯಮಿತ ಸೇವನೆಯಿಂದ ಜೀರ್ಣಾಂಗವ್ಯೂಹದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು.

RELATED ARTICLES  ಡ್ರೈ ಫ್ರೂಟ್ಸ್‌ ಜಾಮೂನ್‌

ಅಜೀರ್ಣ ಮತ್ತು ಉರಿಯೂತದಂತಹ ಹಲವು ರೋಗಗಳನ್ನು ತಡೆಯುವ ಕೊತ್ತಂಬರಿ ಸೊಪ್ಪು ಚರ್ಮ ರೋಗಕ್ಕೆ ರಾಮಬಾಣ. ಇದರಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಕೂಡ ಕಡಿಮೆಯಾಗುತ್ತದೆ. ಮಾತ್ರವಲ್ಲ ರಕ್ತ ಸಂಚಾರ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ.

ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾಗಿರುವ ಕ್ಯಾಲ್ಸಿಯಂ ಮತ್ತು ಖನಿಜಾಂಶ ಮೂಳೆಯ ಬೆಳವಣಿಗೆಗೆ ಸಹಕಾರಿ. ಜೊತೆಗೆ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಅಂಶವು ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ಮಾತ್ರವಲ್ಲ ಇದರಿಂದ ಕೂದಲ ಬುಡ ಸಡಿಲವಾಗುವುದು ತಪ್ಪುತ್ತದೆ.

ಉತ್ತಮವಾದ ನಂಜು ನಿವಾರಕವಾಗಿರುವ ಇದು ಸೋಂಕು ಬಾರದಂತೆ ತಡೆಯುತ್ತದೆ. ಮಹಿಳೆಯರ ಮಾಸಿಕ ಋತು ಚಕ್ರವು ಹಲವು ಕಾರಣಗಳಿಂದ ಏರುಪೇರಾಗುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿರುವ ಪೋಷಕಾಂಶಗಳು ಋತು ಚಕ್ರ ಕ್ರಮಬದ್ಧವಾಗಿ ಸಾಗುವಂತೆ ನೋಡಿಕೊಳ್ಳುತ್ತದೆ.

RELATED ARTICLES  'ಟೀ'ಗೆ ರುಚಿಕರವಾದ ತಿಂಡಿ ಬೀನ್ಸ್ ಸುಂಡಲ್.

ಇದಲ್ಲಿರುವ ವಿಟಮಿನ್ ಎ ಯು ಉತ್ತಮ ದೃಷ್ಟಿಗೆ ಸಹಾಯ ಮಾಡುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪಿನಲ್ಲಿರುವ ಬೀಟಾ ಕ್ಯಾರೋಟಿನ್ ಅಂಶವು ಕಣ್ಣಿನ ಆರೋಗ್ಯ ಉತ್ತಮಗೊಳಿಸುತ್ತದೆ. ಜೊತೆಗೆ ಇದರಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಉತ್ತೇಜಿಸಿ ಮಧುಮೇಹವನ್ನು ಕಡಿಮೆಗೊಳಿಸುತ್ತದೆ.

ಒಟ್ಟಿನಲ್ಲಿ ಕೊತ್ತಂಬರಿ ಸೊಪ್ಪಿನ ನಿಯಮಿತ ಸೇವನೆಯಿಂದ ಹೊಟ್ಟೆ ಹುಣ್ಣು, ಹೊಟ್ಟೆಯ ಉರಿ, ದಮ್ಮು, ಚರ್ಮವ್ಯಾಧಿ ಗಳಿಂದ ದೇಹವನ್ನು ಕಾಪಾಡಿಕೊಳ್ಳಬಹುದು.