ಆಂಬೊಡೆ ಎಂದರೆ ಕಡ್ಲೆ ಬೇಳೆ ವಡೆ ಎಂದು ಅರ್ಥ. ಹಬ್ಬ, ಯಾವುದೇ ವಿಶೇಷ ಸಂದರ್ಭಗಳಲ್ಲಿ ಆಂಬೊಡೆ ತಯಾರಿಸಲಾಗುತ್ತದೆ. ಮಳೆಗಾಲದಲ್ಲಂತೂ ಸಂಜೆ ವೇಳೆ ಬಿಸಿ ಕಾಫಿಯೊಂದಿಗೆ ಆಂಬೊಡೆ ತಿನ್ನುವಾಗ ಸಿಗುವ ಮಜಾ ಹೇಳಲು ಸಾಧ್ಯವಿಲ್ಲ.
ಸಾಮಗ್ರಿಗಳು
ಕಡ್ಲೆಬೇಳೆ – 2 ಕಪ್
ಅಕ್ಕಿ ಹಿಟ್ಟು – 2 tbsp.
ತೆಂಗಿನತುರಿ – 1 ಕಪ್
ಕರಿಬೇವಿನ ಸೊಪ್ಪು – 8 ಎಸಳು
ಉಪ್ಪು – ರುಚಿಗೆ ತಕ್ಕಷ್ಟು
ಶುಂಠಿ – ನಿಂಬೆಗಾತ್ರದ್ದು
ಜೀರ್ಗೆ – 1 tbsp.
ಕೊತ್ತಂಬರಿ ಸೊಪ್ಪು – 2 ಕಟ್ಟು
ಅಚ್ಚ ಖಾರದ ಪುಡಿ – 2tbsp.
ಹಸಿಮೆಣಸಿನ ಕಾಯಿ – 6
ತಯಾರಿಸುವ ವಿಧಾನ
ಕಡ್ಲೆಬೇಳೆಯನ್ನು ತೊಳೆದು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ನೆನೆಸಿದ ಕಡ್ಲೆಬೇಳೆಯನ್ನು ಚೆನ್ನಾಗಿ ನೀರು ಶೋಧಿಸಿ ಅದರೊಂದಿಗೆ ಚಿಕ್ಕ ನಿಂಬೆ ಗಾತ್ರದ ಶುಂಠಿ, ಹಸಿಮೆಣಸಿನ ಕಾಯಿ ಹಾಕಿ ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಿ.
ಕಡ್ಲೆಬೇಳೆ ಮಿಶ್ರಣವನ್ನು ಬೇರೆ ಬೌಲ್‌ಗೆ ವರ್ಗಾಯಿಸಿ, ಅದರೊಂದಿಗೆ ಕಾಯಿತುರಿ, ಜೀರ್ಗೆ, ಅಚ್ಚ ಖಾರದ ಪುಡಿ , ಉಪ್ಪು , ಅಕ್ಕಿಹಿಟ್ಟು, ಕೊತ್ತಂಬರಿ, ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಮಿಶ್ರಣವನ್ನು ನಿಂಬೆಗಾತ್ರದ ಉಂಡೆ ಮಾಡಿ ಅದನ್ನು ತಟ್ಟಿಕೊಂಡು ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಕರಿಯಿರಿ.
ಕಡ್ಲೆ ಬೇಳೆ ವಡೆಗೆ ಬಹಳಷ್ಟು ಕಡೆ ಈರುಳ್ಳಿ ಬಳಸುತ್ತಾರೆ. ನಿಮಗೆ ಬೇಕಿದ್ದಲ್ಲಿ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿ ಮಿಶ್ರಣಕ್ಕೆ ಹಾಕಿಕೊಳ್ಳಬಹುದು.