ಬೇಕಾಗುವ ಪದಾರ್ಥಗಳು
ಮಿಲ್ಕ್ ಮೇಡ್: 397 ಗ್ರಾಂ
ಬಟರ್ ಮಿಲ್ಕ್ – ಅರ್ಧ ಬಟ್ಟಲು
ಆಲಿವ್ ಆಯಿಲ್ – 1/4 ಬಟ್ಟಲು
ವಿನಿವ್ವಾ ಎಕ್ಸ್ಟಾಕ್ಟ್ – ಚಮಚ
ವಿನೇಗರ್ – 1 ಚಮಚ
ಮೈದಾ ಹಿಟ್ಟು – 2 ಬಟ್ಟಲು (263 ಗ್ರಾಂ)
ಬೇಕಿಂಗ್ ಪೌಡರ್ – 1 ಚಮಚ
ಬೇಕಿಂಗ್ ಸೋಡಾ – ಅರ್ಧ ಚಮಚ
ಚಕ್ಕೆ ಪುಡಿ – ಮುಕ್ಕಾಲು ಚಮಚ
ಉಪ್ಪು – ಚಿಟಿಕೆಯಷ್ಟು
ಕ್ಯಾರೆಟ್ – ತುರಿದದ್ದು 1 ಬಟ್ಟಲು (180 ಗ್ರಾಂ)
ಬಾದಾಮಿ – ಸಣ್ಣಗೆ ಹೆಚ್ಚಿದ್ದು 2 ಚಮಚ
ಒಣ ದ್ರಾಕ್ಷಿ – 2 ಚಮಚ.

RELATED ARTICLES  ಕನಸು -೨

ಮಾಡುವ ವಿಧಾನ…
ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮಿಲ್ಕ್ ಮೇಡ್, ಬಟರ್ ಮಿಲ್ಕ್, ಆಲಿವ್ ಆಯಿಲ್, ವಿನಿವ್ವಾ ಎಕ್ಸ್ಟಾಕ್ಟ್. ವಿನೇಗರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಮೈದಾ ಹಿಟ್ಟು, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಚಕ್ಕೆ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಭಬೇಕು.

RELATED ARTICLES  ರುಚಿಕರವಾದ ಜೋಳದ ಚಿಪ್ಸ್..

ಬಳಿಕ ಕ್ಯಾರೆಟ್, ಬಾದಾಮಿ, ಒಣ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪ್ಯಾನ್ ತೆಗೆದುಕೊಂಡು ಅದಕ್ಕೆ ಈ ಮಿಶ್ರಣವನ್ನು ಹಾಕಿ ಒವನ್ ನಲ್ಲಿ 180 ಡಿಗ್ರಿ ಸೆಲ್ಶಿಯಸ್ ನಲ್ಲಿ 30 ನಿಮಿಷ ಬೇಯಲು ಬಿಟ್ಟರೆ ರುಚಿಕರವಾದ ಕ್ಯಾರೆಟ್ ಕೇಕ್ ಸವಿಯಲು ಸಿದ್ಧ.