ಬೇಕಾಗುವ ಪದಾರ್ಥಗಳು
ಬಾದಾಮಿ – 200 ಗ್ರಾಂ
ಗುಲಾಬಿ ದಳಗಳು – 40 ಗ್ರಾಂ
ಹಾಲು – 1.5 ಲೀಟರ್
ಹಾಲಿನ ಪುಡಿ – 80 ಗ್ರಾಂ (ಸಿಹಿರಹಿತ)
ಸಕ್ಕರೆ – 70 ಗ್ರಾಂ
ಕೇಸರಿ ದಳ – 5-6

ಮಾಡುವ ವಿಧಾನ…
ಬಾದಾಮಿಯನ್ನು ಹಾಲಿನಲ್ಲಿ ನೆನೆಸಿ ಸಿಪ್ಪೆಯನ್ನು ತೆಗೆದು ಶೇ.90ರಷ್ಟು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಗುಲಾಬಿ ಎಲೆಗಳನ್ನು ಚೆನ್ನಾಗಿ ತೊಳೆದು, ಒಲೆಯ ಮೇಲೆ ಪಾತ್ರೆ ಇಟ್ಟು ಸಕ್ಕರೆ ಹಾಗೂ ಗುಲಾಬಿ ದಳಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಪಾಕ ಗಟ್ಟಿ ಬಂದ ನಂತರ ಇಳಿಸಬೇಕು.
ಸಣ್ಣ ಬಟ್ಟಲು ತೆಗೆದುಕೊಂಡು ಅದಕ್ಕೆ ಬಿಸಿ ಹಾಲು ಹಾಕಿ ಕೇಸರಿ ದಳ ಹಾಕಿ, ಕೇಸರಿಯನ್ನು ತಯಾರಿಸಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಹಾಲನ್ನು ಹಾಕಿ ಶೇ.40 ರಷ್ಟು ಹಾಲು ಆಗುವವರೆಗೂ ಚೆನ್ನಾಗಿ ಕಾಯಿಸಬೇಕು. ನಂತರ ಇದಕ್ಕೆ ಹಾಲಿನ ಪುಡಿ, ಬಾದಾಮಿ ಪೇಸ್ಟ್, ಸಕ್ಕರೆ ಹಾಗೂ ಕೇಸರಿಯನ್ನು ಚೆನ್ನಾಗಿ ಕಾಯಿಸಬೇಕು.
ನಂತರ ಇದು ತಣ್ಣಗಾದ ಬಳಿಕ ಕುಲ್ಫಿ ಕೋನ್ ಗಳಿಗೆ ಹಾಕಿ ಸಕ್ಕರೆಯಲ್ಲಿ ಬೇಯಿಸಿದ ಗುಲಾಬಿ ದಳಗಳು, ಕತ್ತರಿಸಿಕೊಂಡ ಬಾದಾಮಿಗಳನ್ನು ಹಾಕಿ, ಫ್ರಿಡ್ಜ್ ನಲ್ಲಿಟ್ಟು 30-1 ಗಂಟೆಗಳ ಬಳಿಕ ತೆಗೆದರೆ ರುಚಿಕರವಾದ ಬಾದಾಮಿ, ಗುಲಾಬಿ ಕುಲ್ಫಿ ಸವಿಯಲು ಸಿದ್ಧ.

RELATED ARTICLES  ಆ್ಯಪಲ್ ಸಿನಮನ್ ಕೇಕ್ ತಯಾರಿಸಿ.