ಬೇಕಾಗುವ ಪದಾರ್ಥಗಳು
ಕಡಲೆ ಹಿಟ್ಟು – 1 ಬಟ್ಟಲು
ಓಂ ಕಾಳು – ಕಾಲು ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿಣದ ಪುಡಿ – ಚಿಟಿಕೆಯಷ್ಟು
ಈರುಳ್ಳಿ – ಸಣ್ಣಗೆ ಹೆಚ್ಚಿದ್ದು (2)
ಟೊಮೆಟೋ – ಸಣ್ಣಗೆ ಹೆಚ್ಚಿದ್ದು (1)
ಹಸಿಮೆಣಸಿನ ಕಾಯಿ – ಸಣ್ಣಗೆ ಹೆಚ್ಚಿದ್ದು (1-2)
ಕೊತ್ತಂಬರಿ ಸೊಪ್ಪು – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಶುಂಠಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ಎಣ್ಣೆ -ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ…
ಮೊದಲು ಪಾತ್ರೆಗೆ ಕಡಲೆಹಿಟ್ಟು, ಅರಿಶಿಣ, ಓಂಕಾಳು, ಉಪ್ಪು ಹಾಗೂ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ 30 ನಿಮಿಷಗಳ ಕಾಲ ನೆನೆಯಲು ಬಿಡಬೇಕು.
ಬಳಿಕ ಈ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಈರುಳ್ಳು, ಶುಂಠಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ, ಟೊಮೆಟೋ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಒಲೆಯ ಮೇಲೆ ಪ್ಯಾನ್ ಇಟ್ಟು ಹಿಟ್ಟನ್ನು ದೋಸೆಯಂತೆ ಹಾಕಿ. ಬೇಯಲು ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ, ರುಚಿಕರವಾದ ವೆಜ್ ಆಮ್ಲೆಟ್ ಸವಿಯಲು ಸಿದ್ಧ.

RELATED ARTICLES  ಮನೆಯಲ್ಲೇ ಮಾಡಿ ಸವಿಯಿರಿ ಪಾವ್‌ಬಾಜಿ.