ಬೇಕಾಗುವ ಪದಾರ್ಥಗಳು…
ಈರುಳ್ಳಿ- ಕತ್ತರಿಸಿದ್ದು 1 ಬಟ್ಟಲು
ಪೇಪರ್ ಅವಲಕ್ಕಿ – 1 ಚಿಕ್ಕ ಬಟ್ಟಲು
ಖಾರದ ಪುಡಿ – 1 ಚಮಚ
ಗರಂ ಮಸಾಲಾ – ಅರ್ಧ ಚಮಚ
ಆಮ್ ಚೂರ್ ಪುಡಿ – ಅರ್ಧ ಚಮಚ
ಉಪ್ಪು – ಅರ್ಧ ಚಮಚ
ಶುಂಠಿ ಪೇಸ್ಟ್ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಕತ್ತರಿಸಿದ್ದು ಸ್ವಲ್ಪ
ಗೋಧಿ ಹಿಟ್ಟು – 1 ಚಿಕ್ಕ ಬಟ್ಟಲು
ಮೈದಾ ಹಿಟ್ಟು – 1 ಚಿಕ್ಕ ಬಟ್ಟಲು
ಸಕ್ಕರೆ – ಕಾಲು ಚಮಚ
ಉಪ್ಪು – ಅರ್ಧ ಚಮಚ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು

ಮಾಡುವ ವಿಧಾನ…
ಈರುಳ್ಳಿ, ಪೇಪರ್ ಅವಲಕ್ಕಿ. ಖಾರದ ಪುಡಿ, ಗರಂ ಮಸಾಲಾ, ಆಮ್ ಚೂರ್ ಪುಡಿ. ಉಪ್ಪು. ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಗೋಧಿ ಹಿಟ್ಟು, ಮೈದಾಹಿಟ್ಟು, ಸಕ್ಕರೆ, ಉಪ್ಪನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ 3-4 ಚಮಚ ಎಣ್ಣೆಯನ್ನು ಕಾಯಿಸಿ ಮಿಶ್ರಣ ಮಾಡಿದ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಹಿಟ್ಟನ್ನು ತಯಾರಿಸಿಕೊಳ್ಳಬೇಕು. ಕಲಸಿದ ಹಿಟ್ಟು 30 ನಿಮಿಷಗಳ ನೆನೆಯಲು ಬಿಡಬೇಕು.
ನಂತರ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಂಡು ಒಂದೊಂದು ಉಂಡೆಯನ್ನು ತೆಗೆದುಕೊಂಡು ಲಟ್ಟಿಸಿಕೊಂಡು ಸಮೋಸಾ ಆಕಾರ ಮಾಡಿಕೊಳ್ಳಬೇಕು. ನಂತರ ಇದರ ಮಧ್ಯೆ ಈ ಹಿಂದೆ ಮಾಡಿಕೊಂಡ ಈರುಳ್ಳಿ ಮಸಾಲೆಯನ್ನ ಹಾಕಿ ತುಂಬಬೇಕು. ಬಳಿಕ ಸಮೋಸಾವನ್ನು ಕ್ಲೋಸ್ ಮಾಡಲು ಸ್ವಲ್ಪ ಮೈದಾ ಹಿಟ್ಟನ್ನು ತೆಗೆದುಕೊಂಡು ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಸಮೋಸಾ ಬದಿಗಳಲ್ಲಿ ಹಾಕಿ ಮುಚ್ಚಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ, ಕಾಯಲು ಬಿಡಬೇಕು. ಎಣ್ಣೆ ಕಾದ ಬಳಿಕ ತಯಾರು ಮಾಡಿಕೊಂಡ ಸಮೋಸಾಗಳನ್ನು ಹಾಕಿ ಚಿನ್ನದ ಬಣ್ಣ ಬರುವವರೆಗೂ ಚೆನ್ನಾಗಿ ಕರಿದರೆ ರುಚಿಕರವಾದ ಈರುಳ್ಳಿ ಸಮೋಸಾ ಸವಿಯಲು ಸಿದ್ಧ.

RELATED ARTICLES  ದೀಪಾವಳಿ ವಿಶೇಷ ಸಿಹಿ ಬಾದಾಮ್ ಪೂರಿ ಮಾಡುವ ವಿಧಾನ