ಬೇಕಾಗುವ ಪದಾರ್ಥಗಳು…
ಕಡಲೆ ಹಿಟ್ಟು – 1 ಬಟ್ಟಲು
ಕೊಬ್ಬರಿ ಪುಡಿ – ಅರ್ಧ ಬಟ್ಟಲು
ಗೋಡಂಬಿ ಪುಡಿ – ಅರ್ಧ ಬಟ್ಟಲು
ಸಕ್ಕರೆ – 1 ಬಟ್ಟಲು
ಹಾಲು – ಅರ್ಧ ಬಟ್ಟಲು
ತುಪ್ಪ – ಅರ್ಧ ಬಟ್ಟಲು
ಏಲಕ್ಕಿ ಪುಡಿ – ಸ್ವಲ್ಪ
ಮಾಡುವ ವಿಧಾನ…
ಒಲೆಯ ಮೇಲೆ ಬಾಣಲೆ ಇಟ್ಟು, ಕಾದ ನಂತರ ಕಡಲೆ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು.
ನಂತರ ಕೊಬ್ಬರಿ ಪುಡಿ, ಗೋಡಂಬಿ ಪುಡಿ, ಸಕ್ಕರೆ, ಹಾಲು, ತುಪ್ಪವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಮಿಶ್ರಣ ಗಟ್ಟಿಯಾಗಿ ಪಾತ್ರೆಯ ತಳ ಅಂಟಿಕೊಳ್ಳದಂತೆ ಗಟ್ಟಿಯಾಗುವವರೆಗೂ ಕೈಯಾಡುತ್ತಿರಬೇಕು.
ನಂತರ ಏಲಕ್ಕಿ ಪುಡಿ ಹಾಕಿ 2 ನಿಮಿಷ ಕೈಯಾಡಿಸಿ, ಕೆಳಗಿಳಿಸಿ ತುಪ್ಪ ಸವರಿಸಿದ ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಬೇಕು. ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡರೆ ಕಪ್ ಬರ್ಫಿ ಸವಿಯಲು ಸಿದ್ಧ.