ಬೇಕಾಗುವ ಪದಾರ್ಥಗಳು
ಹೂಕೋಸು- 2 ಬಟ್ಟಲು
ಕಡೆಲೆಹಿಟ್ಟು – ಮುಕ್ಕಾಲು ಬಟ್ಟಲು
ಮೊಸರು- 1 ಬಟ್ಟಲು
ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಅರಿಶಿನ – ಅರ್ಧ ಚಮಚ
ಕಾಶ್ಮೀರಿ ಚಿಲ್ಲಿ ಪೊಡರ್ – 1 1/2 ಚಮಚ
ದನಿಯಾ ಪುಡಿ – 1 ಚಮಚ
ಜೀರಿಗೆ ಪುಡಿ – 1 ಚಮಚ
ಗರಂ ಮಸಾಲಾ – 1/2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಬ್ಲಾಕ್ ಸಾಲ್ಟ್ – 1/4 ಚಮಚ
ನಿಂಬೆ ರಸ – 1 ಚಮಚ
ಕಸೂರಿ ಮೇಥಿ – ಅರ್ಧ ಚಮಚ
ಎಣ್ಣೆ- ಕರಿಯಲು
ಮಾಡುವ ವಿಧಾನ…
ಮೊದಲು ಹೂಕೋಸನ್ನು ಬಿಡಿಸಿಕೊಂಡು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ ಸ್ವಲ್ಪ ನೀರು, ಉಪ್ಪು ಹಾಕಿ ಕಾಯಲು ಬಿಡಬೇಕು. ನಂತರ ಹುಕೋಸನ್ನು ಹಾಕಿ 2-3 ನಿಮಿಷ ಬೇಯಿಸಿ ತೆಗೆದಿಟ್ಟುಕೊಳ್ಳಬೇಕು.
ಒಲೆಯ ಮೇಲೆ ಬಾಣಲೆ ಇಟ್ಟು ಕಾದ ನಂತರ ಅದಕ್ಕೆ ಕಡಲೆ ಹಿಟ್ಟು ಹಾಕಿ, ಕೆಂಪಗೆ ಹುರಿದುಕೊಳ್ಳಬೇಕು.
ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೊಸರು, ಹುರಿದುಕೊಂಡ ಕಡಲೆಹಿಟ್ಟು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಕಾಶ್ಮೀರಿ ಚಿಲ್ಲಿ ಪೌಡರ್, ದನಿಯಾ ಪುಡಿ, ಜೀರಿಗೆ ಪುಡಿ. ಗರಂ ಮಸಾಲಾ, ಉಪ್ಪು, ಬ್ಲಾಕ್ ಸಾಲ್ಟ್, ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಕಸೂರಿ ಮೇಥಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಮಿಶ್ರಣಕ್ಕೆ ಬೇಯಿಸಿಕೊಂಡ ಹೂಕೋಸನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಫ್ರಿಡ್ಜ್ ನಲ್ಲಿ 1 ಗಂಟೆಗಳ ಕಾಲ ಇಡಬೇಕು. ನಂತರ ಪ್ಯಾನ್’ಗೆ 3-4 ಚಮಚ ಎಣ್ಣೆಯನ್ನು ಹಾಕಿ ಹೂಕೋಸುಗಳನ್ನು ಚೆನ್ನೈಗಿ ಫ್ರೈ ಮಾಡಿದರೆ, ರುಚಿಕರವಾದ ಗೋಬಿ ತಂದೂರಿ ಸವಿಯಲು ಸಿದ್ಧ.