ಬೇಕಾಗುವ ಪದಾರ್ಥಗಳು
ದನಿಯಾ (ಕೊತ್ತಂಬರಿ ಬೀಜ)- 1 ಚಮಚ
ಬಿಳಿ ಎಳ್ಳು – 1 ಚಮಚ
ಜೀರಿಗೆ – 1 ಚಮಚ
ಮೆಣಸು – 1 ಚಮಚ
ನಕ್ಷತ್ರ ಮೊಗ್ಗು – 1
ಕೊಬ್ಬರಿ – ಸಣ್ಣ ಚೂರು 3-4
ಏಲಕ್ಕಿ – 1
ಚಕ್ಕೆ – 2-3
ಲವಂಗ – 3-4
ಗಸಗಸೆ- 1 ಚಮಚ
ಎಣ್ಣೆ – 1 ಚಮಚ
ತುಪ್ಪ – ಸ್ವಲ್ಪ
ಪಲಾವ್ ಎಲೆ – 1-2
ಸಾಸಿವೆ – ಕಾಲು ಚಮಚ
ಈರುಳ್ಳು – 1-2
ಹಸಿ ಮೆಣಸಿನ ಕಾಯಿ – 2
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟಮಚ
ಗೋಡಂಬಿ – 5-6
ಅಚ್ಚ ಖಾರದ ಪುಡಿ – 1 ಚಮಚ
ಅರಿಶಿನದ ಪುಡಿ – ಅರ್ಧ ಚಮಚ
ಅಕ್ಕಿ – ಒಂದು ಬಟ್ಟಲು
ತರಕಾರಿ- ಬೀನ್ಸ್, ಕ್ಯಾರೆಟ್, ಟೊಮೆಟೋ, ಬಟಾಣಿ, ಆಲೂಗಡ್ಡೆ, ಹೂಕೋಸು – 2 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
ಮೊದಲು ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ದನಿಯಾ, ಬಿಳಿ ಎಳ್ಳು, ಜೀರಿಗೆ, ಮೆಣಸು, ನಕ್ಷತ್ರ ಮೊಗ್ಗು, ಕೊಬ್ಬರಿ, ಏಲಕ್ಕಿ, ಚಕ್ಕೆ, ಲವಂಗ, ಗಸಗಸೆ ಎಲ್ಲವನ್ನು ಕೆಂಪಗೆ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಾಸಿವೆ, ಪಲಾವ್ ಎಲೆ ಹಾಕಬೇಕು. ನಂತರ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿ ಮೆಣಸಿನ ಕಾಯಿ, ಟೊಮೆಟೋ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಬೇಕು.
ಬಳಿಕ ಕತ್ತರಿಸಿಕೊಂಡ ಎಲ್ಲಾ ತರಕಾರಿಗಳನ್ನು ಹಾಕಿ ಉಪ್ಪು, ಪುಡಿ ಮಾಡಿಕೊಂಡ ಮಸಾಲೆ, ಅರಿಶಿನ, ಖಾರದ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಅಕ್ಕಿ ಹಾಗೂ 2 ಬಟ್ಟಲು ನೀರು ಹಾಕಿ 10 ನಿಮಿಷ ಬೇಯಿಸಿದರೆ ರುಚಿಕರವಾದ ಮಸಾಲೆ ಬಾತ್ ಸವಿಯಲು ಸಿದ್ಧ.