ಬೇಕಾಗುವ ಪದಾರ್ಥಗಳು…
ಎಣ್ಣೆ -3-4 ಚಮಚ
ಪನ್ನೀರ್ – 12 ಸಣ್ಣ ತುಂಡುಗಳು
ಬಾದಾಮಿ (ನೆನೆಸಿ ಸಿಪ್ಪೆ ತೆಗೆದದ್ದು) – 10-15
ಆಲೂಗಡ್ಡೆ – 1 ಬಟ್ಟಲು
ಕ್ಯಾರೆಟ್- ಅರ್ಧ ಬಟ್ಟಲು
ಹೂಕೋಸು – 1 ಬಟ್ಟಲು
ಬೀನ್ಸ್ – ಅರ್ಧ ಬಟ್ಟಲು
ಬಟಾಣಿ- 1 ಬಟ್ಟಲು
ಪಲಾವ್ ಎಲೆ – 2-3
ಜೀರಿಗೆ – ಅರ್ಧ ಚಮಚ
ಕಸೂರಿ ಮೇಥಿ – ಅರ್ಧ ಚಮಚ
ಹಸಿ ಮೆಣಸಿನಕಾಯಿ – ಸಣ್ಣಗೆ ಹೆಚ್ಚಿದ್ದು 1
ಈರುಳ್ಳಿ- ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಶುಂಠಿ,ಬೆಳ್ಳುಳ್ಳಿ ಪೇಸ್ಟ್ – ಚಮಚ
ಅರಿಶಿನದ ಪುಡಿ – ಅರ್ಧ ಚಮಚ
ಅಚ್ಚ ಖಾರದ ಪುಡಿ – 1 ಚಮಚ
ದನಿಯಾ ಪುಡಿ – 1 ಚಮಚ
ಗರಂ ಮಸಾಲೆ ಪುಡಿ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಟೊಮೆಟೋ – 2
ಚಕ್ಕೆ 1-2
ಲವಂಗ – 2-3
ಏಲಕ್ಕಿ – 1
ಮೊಸರು – ಬಟ್ಟಲು
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ…
ಮೊದಲು ಬಾಣೆಲೆಗೆ ಎಣ್ಣೆ ಹಾಕಿ ಪನ್ನೀರ್ ನ್ನು ಕೆಂಪಗೆ ಹುರಿದುಕೊಳ್ಳಬೇಕು. ಅದನ್ನು ಒಂದು ಪ್ಲೇಟ್ ಗೆ ತೆಗೆದಿಡಬೇಕು.
ಇದೇ ಬಾಣೆಲೆಗೆ ಬಾದಾಮಿಗಳನ್ನು ಹಾಕಿ ಕೆಂಪಗೆ ಹುರಿದು, ಪಕ್ಕಕ್ಕೆ ಎತ್ತಿಡಬೇಕು.
ನಂತರ ಆಲೂಗಡ್ಡೆ, ಕ್ಯಾರೆಟ್, ಹೂಕೋಸು, ಬೀನ್ಸ್, ಬಟಾಣಿಯನ್ನು ಎಣ್ಣೆಯಲ್ಲಿ ಹುರಿದು ಪಕ್ಕಕ್ಕೆ ಎತ್ತಿಡಬೇಕು.
ಬಳಿಕ ಇದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಅದಕ್ಕೆ ಪಲಾವ್ ಎಲೆ, ಜೀರಿಗೆ, ಕಸೂರಿ ಮೇಥಿ, ಹಸಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು.
ಇದಕ್ಕೆ ಈರುಳ್ಳಿ ಹಾಕಿ ಕೆಂಪಗಾದ ಬಳಿಕ ಶುಂಠಿ,ಬೆಳ್ಳುಳ್ಳಿ ಪೇಸ್ಟ್, ಅರಿಶಿನದ ಪುಡಿ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಗರಂ ಮಸಾಲೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಟೊಮೆಟೋ, ಚಕ್ಕೆ, ಲವಂಗ ಹಾಗೂ ಹುರಿದಿಟ್ಟುಕೊಂಡಿದ್ದ ಗೋಡಂಬಿಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು.
ರುಬ್ಬಿಂದ ಟೊಮೆಟೋವನ್ನು ಈಗಾಗಲೇ ತಯಾರು ಮಾಡಿಕೊಂಡ ಮಸಾಲೆಗೆ ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ನಂತರ ಮೊಸರು ಹಾಕಿ 2 ನಿಮಿಷ ಬಿಟ್ಟು ಹುರಿದಿಟ್ಟುಕೊಂಡಿದ್ದ ತರಕಾರಿಗಳನ್ನು ಹಾಕಿ ಸ್ವಲ್ಪ ನೀರು ಹಾಗಿ ಬೇಯಲು ಬಿಡಬೇಕು.
ನಂತರ ಕೊತ್ತಂಬರಿ ಸೊಪ್ಪು ಹಾಗೂ ಕಸೂರಿ ಮೇಥಿಯಿಂದ ಅಲಂಕರಿಸಿದರೆ, ರುಚಿಕರವಾದ ಮಿಕ್ಸ್ ವೆಜ್ ಕರಿ ಸವಿಯಲು ಸಿದ್ಧ.