ಹೊನ್ನಾವರ:- ತಾಲೂಕಿನ ಮೂಡ್ಕಣಿ ಸಮೀಪದ ತುಂಬೊಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವರ 5 ನೇ ವರ್ಷದ ವರ್ಧಂತಿ ಮಹೋತ್ಸವವು ಎಪ್ರಿಲ್ 17 ರಂದು ವೇ.ಮೂ.ಕಟ್ಟೆ ಶಂಕರ ಭಟ್ ಇವರ ಅಧ್ವರ್ಯದಲ್ಲಿ ನೆರವೇರಲಿದೆ. ಅಂದು ಬೆಳಿಗ್ಗೆ 10 ಘಂಟೆಯಿಂದ‌ ದೇವತಾ ಪ್ರಾರ್ಥನೆ, ಶುದ್ಧಿಕರ್ಮ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸಂಕಲ್ಪ, ಕಲಶ ಸ್ಥಾಪನೆ, ಸತ್ಯನಾರಾಯಣ ಪೂಜೆ, ಅಧಿವಾಸ ಹೋಮ, ತತ್ವ ಹೋಮಾದಿಗಳು, ಪೂರ್ಣಾಹುತಿ, ಕುಂಬಾಭಿಷೇಕ, ಮಧ್ಯಾಹ್ನ ಪೂಜಾ, ಮಧ್ಯಾಹ್ನ ಬಲಿ, ತೀರ್ಥಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಮತ್ತು ಸಂಜೆ ಕೂಡಾ ವೈದಿಕ ಕಾರ್ಯಕ್ರಮ ನೆರವೇರಲಿದೆ. ಎಂದು ಪ್ರಧಾನ ಅರ್ಚಕ ಸತೀಶ ಹೆಗಡೆ ಮೂಡ್ಕಣಿ “ಸತ್ವಾಧಾರ ನ್ಯೂಸ್” ಗೆ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

RELATED ARTICLES  ಜಾಥಾದಲ್ಲಿ ಭಾಗವಹಿಸಿದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು