ಏಪ್ರಿಲ್ ತಿಂಗಳ ಗುಂಪೆ ವಲಯ ಸಭೆ ಶ್ರೀಯುತ ಸುಬ್ಬಾ ಭಟ್ ಎಡಕ್ಕಾನ ಇವರ ಮನೆಯಲ್ಲಿ ತಾ. 08-04-2018 ನೇ ಆದಿತ್ಯವಾರ ಸಾಯಂಕಾಲ ಗಂಟೆ 04-15 ವಲಯ ಅಧ್ಯಕ್ಷ ಶ್ರೀ ಯುತ ಅಮ್ಮಕಂಲ್ಲು ರಾಮ ಭಟ್ ನೇತೃತ್ವದಲ್ಲಿ ನಡೆಯಿತು. ವಲಯ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಗತ ಸಭೆಯ ವರದಿ, ಕೋಶಾಧಿಕಾರಿ ಜಯರಾಮ ಭಟ್ಟ ಚೆಕ್ಕೆಮನೆ ಜಯರಾಮ ಭಟ್ ಲೆಕ್ಕ ಪತ್ರ ವನ್ನು ಮಂಡಿಸಿದರು.
*ಮಂಗಳೂರು ಸಮೀಪದ ಕೈರಂಗಳದ ಪುಣ್ಯಕೋಟಿನಗರದಲ್ಲಿ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಕೄಪಾಶೀರ್ವಾದದಲ್ಲಿ ಕಾರ್ಯಾಚರಿಸುತ್ತಿರುವ ಅಮೄತಧಾರಾಗೋಶಾಲೆಯಿಂದ ಇತ್ತೀಚೆಗಿನ ದಿನದಲ್ಲಿ ಕಟುಕರಿಂದ ಕಳವಿಗೀಡಾದ ಬಗ್ಗೆ ಪ್ರತಿಭಟಿಸಿ, ಗೋಕಳ್ಳರನ್ನು ಸೆರೆಹಿಡಿದು ಸೂಕ್ತ ಶಿಕ್ಷೆಯಾಗುವಂತೆಯೂ-ಮುಂದಕ್ಕೆ ಈ ರೀತಿಯ ದುಷ್ಕರ್ಮ ಆವರ್ತನೆಯಾಗಬಾರದೆಂದೂ ಸಂಬಂಧಿಸಿದ ಅಧಿಕಾರ ವರ್ಗದವರನ್ನು ಮನಮುಟ್ಟುವ ಉದ್ದೇಶದಿಂದ ಗೋಶಾಲಾ ಸಮಿತಿಯ ಅಧ್ಯಕ್ಷರಾದ ಟಿ ಜಿ ರಾಜಾರಾಮ ಭಟ್ಟರು ಎಂಟು ದಿನಗಳಿಂದ ನಡೆಸುತ್ತಿರುವ ಆಮರಣಾಂತ ಸತ್ಯಾಗ್ರಹ #ಕೈರಂಗಳ_ಗೋಕಳ್ಳತನ ಗೋಕಳ್ಳರು ಬೇಗ ಸಿಕ್ಕಲಿ, ಹಾಗು ರಾಜರಾಮ ಭಟ್ಟ ಇವರಿಗೆ ನೈತಿಕ ಬೆಂಬಲ ನೀಡಲಾಯಿತು*.
ಮೂಲಮಠ : ಈವರೆಗೆಸಂಗ್ರಹಿಸಿದ ಮಾಹಿತಿಯನ್ನ ತಿಳಿಸಿದರು ,ಹಾಗು ಮನೆ ಭೇಟಿಯಕುರಿತು ಚರ್ಚಿಸಿದರು ಇದೇ ಸಂದರ್ಭದಲ್ಲಿ ಮರುವಳ ತಿರುಮಲೇಶ್ವರ ಭಟ್ ಮೂಲ ಮಠನಿಧಿ ಸಮರ್ಪಣೆ ಮಾಡಿದರು.
*ಶಂಕರಪಂಚಮಿ ರುದ್ರಪಟಣ ಮಾಡುವವರು 19.04.2018 ಬಾನ್ಕುಳಿ ಮಠಕ್ಕೆ ಬೆಳಿಗ್ಗೆ 6.30 ರೊಳಗೆ ಇರಲು ಸೂಚಿಸಲಾಯಿತು, 21/4/2018 ರಂದು ಮಂಡಲದಿಂದ ಒಂದು ಕುಂಡದ ಜವಾಬ್ದಾರಿಯನ್ನು 11 ರುತ್ವಿಜರು ,ವಲಯದಿಂದ1 ರುತ್ವಿಜರು ,ಅತಿರುದ್ರ ಪುರಶ್ಚರಣ ಮಹಾಯಾಗದಲ್ಲಿ ಪಾಲ್ಗೊಳ್ಳಲು ವೈಧಿಕಪ್ರದಾನರ ಜವಾಬ್ದಾರಿಯಲ್ಲಿ ವ್ಯವಸ್ಥೆ ಗೋಳಿಸಲು ಮಂಡಲ ಧರ್ಮ ವಿಭಾಗದ ಪ್ರಧಾನ ಶ್ರೀಯುತ ಗಣೇಶ ಮಾಡವು ತಿಳಿಸಿದರು*.
ದಿನ ಸಮರ್ಪಣಾ ದಿನ ,18/4/2018 ರಂದು ಶ್ರೀ ಗಳ ಪೀಟಾರೊಹಣ ದಿನದಂದು ನಮ್ಮ ಸಮಾಜದ ಸೇವಾ ಭಿಂದುಗಳು ಒಂದು ವರ್ಷದ ಸೇವಾದಿನಗಳನ್ನು ಘೊಷಿಸುವ ಅವಕಾಶಿಸುವ ಸಂಭಂದಿಸಿದ ಲಿಂಕ್ ನೀಡಲಾಯಿತು .ಸೇವಾ ಪ್ರದಾನರ ಉಸ್ತುವಾರಿಯಲ್ಲಿ ಈ ಚಟುವಟಿಕೆ ನಿರ್ವಹೀಸಲು ತಿಮರ್ಮಾನಿಸಲಾಯಿತು
*ಮಕ್ಕಳ ಬೇಸಿಗೆ ಶಿಬಿರ .ಸ್ಥಳ,ರಾಮಚಂದ್ರಾಪುರಮಠ ಹೊಸನಗರ ದಿನಾಂಕ 23/4/2018 ರಿಂದ 29/4/2018 ರ ವರೆಗೆ ,6 ನೇ ತರಗತಿ ಇಂದ P U C ವರೆಗಿನ ಮಕ್ಕಳು ನೊಂದಾಯಿಸಲು ಕೋನೆಯ ದಿನಾಂಕ 15/4/2018 ವಿದ್ಯಾರ್ಥಿ ವಾಹಿನಿ ಮುಲಕ ಶಿಭಿರದಲ್ಲಿ ಬಾಗವಹೀಸುವಂತೆ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ ತಿಳಿಸಿದರು* ಹಾಗೂ ಚಂದ್ರಮೌಳೀಶ್ವರ ದೇವರ ಬ್ರಹ್ಮಕಲಶದಲ್ಲಿ ವಿದ್ಯಾರ್ಥಿ ವಾಹಿನೀ ಕಾರ್ಯಕರ್ತರ ತೊಡಗಿಸುವ ಬೇಕೆಂದು ಸಭೆಗೆ ತಿಳಿಸಿದರು.
*ಬಿಂದು-ಸಿಂಧು, ಮುಷ್ಟಿ ಅಕ್ಕಿ ಪ್ರತಿ ಮನೆ ಮನೆ ಗಳಲ್ಲಿ ಇಡಬೇಕು ಎಂದು ಮುಳ್ಳೇರಿಯ ಮಂಡಲ ಬಿಂದು-ಸಿಂಧು ಪ್ರಧಾನೆ ದೇವಕಿ ಜಿ ಭಟ್ ಪನ್ನೆ ಸಭೆಗೆ ತಿಳಿಸಿದರು*.
ಮಾಣಿ ಮಠದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಚಿತ್ರರಚನೆ ಮಾಡಿ ಪ್ರದರ್ಶನಕ್ಕೆ ಚಿತ್ರಗಳನ್ನಿತ್ತ ವಿದ್ಯಾರ್ಥಿಗಳಿಗೆ ಶ್ರೀ ರಾಮ ನುಗ್ರಹ ಅಭಿನಂದನಾಪತ್ರ ಈ ಸಭೆಯಲ್ಲಿ ವಿದ್ಯಾರ್ಥಿ ಗಳಾದ ಸ್ಪೂರ್ತಿ ಲಕ್ಮಿ ಗುಂಪೆ, ಹಿರಣ್ಮಯೀ ಮರುವಳ, ಶಿಶಿರ ಶಂಕರ ಚೆಕ್ಕೆಮನೆ, ಕೀರ್ತನ ನೀರಮೂಲೆ,ಸ್ಕಂದ ಪ್ರಸಾದ ಅಮ್ಮಕಂಲ್ಲು, ಚಿನ್ಮಯಿ ಬೆಜಪ್ಪೆ, ಪ್ರಶಾಂತ ಬೆಜಪ್ಪೆ ನೀಡಲಾಯಿತು.
ಶಿವಪಂಚಾಕ್ಷರಿ ಸ್ತೋತ್ರ ,ಮುಷ್ಠಿಭಿಕ್ಷೆ, ಧರ್ಮ ಭಾರತೀ ,ಗೋ ಸ್ವರ್ಗ ,ದೀಶಾದರ್ಶಿ ,ರಾಜ ರಾಜೇಶ್ವರಿ ದೇವಸ್ಥಾನ ನಿರ್ಮಾಣ ಪ್ರಗತಿ,ಚಂದ್ರ ಮೌಳೇಶ್ವರ ದೇವಸ್ಥಾನದ ಪ್ರತಿಷ್ಟೆ ಸಂಗ್ರದ ಕುರಿತು ಚರ್ಚಿಸಲಾಯಿತು ,ಚಂದ್ರಮೌಳೀಶ್ವರ ದೇವಸ್ಥಾನದ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಸಮರ್ಪಕ ವಿತರಣೆ ಕುರಿತು ಚರ್ಚಿಸಲಾಯಿತು*. ರಾಮತಾರಕ ಶಾಂತಿ ಮಂತ್ರ ಶಂಖ ನಾದದೊಂದಿಗೆ ಸಭೆ ಮುಕ್ತಾಯ ವಾಯಿತು ಹರೇ ರಾಮ