ಬೇಸಿಗೆಕಾಲ ಬಂತೆಂದರೆ ದಿನಾ ಮೊಸರು ತಿನ್ನಬೇಕೆನಿಸುತ್ತದೆ. ಆರೋಗ್ಯಕ್ಕೂ ಉತ್ತಮವಾದ ಮೊಸರನ್ನು ಪ್ರತಿನ ಬಳಸಿದರೂ ಅದು ರುಚಿಯಾಗಿದರೆ ಹುಳಿ ಹುಳಿಯಾಗುತ್ತದೆ ಎಂಬುದು ಹಲವರ ಸಮಸ್ಯೆ.

ಹಾಗಾದರೆ ಮೊಸರು ಹುಳಿ ಬರದಂತೆ ತಡೆಯುವುದು ಮತ್ತು ಅದರ ತಾಜಾತನ ಕಾಪಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ;

ಮನೆಯಲ್ಲಿರುವ ಮೊಸರನ್ನು ಒಂದು ತೆಳ್ಳನೆಯ ಕಾಟನ್ ಬಟ್ಟೆಗೆ ಸುರಿದು ಗಂಟಿನಂತೆ ಕಟ್ಟಿ ಅದರ ನೀರನ್ನು ನಿಧಾನವಾಗಿ ಹಿಂಡಿ. ಬಳಿಕ ಗಂಟು ಬಿಚ್ಚಿ ಗಟ್ಟಿ ಮೊಸರನ್ನು ಒಂದು ಬೌಲ್‌ಗೆ ಹಾಕಿ.

ಈಗ ಈ ಮೊಸರಿಗೆ ತಣ್ಣಗಿನ ಹಾಲು ಹಾಕಿ ಮಿಕ್ಸ್‌ ಮಾಡಿ ಫ್ರಿಜ್‌ನಲ್ಲಿಡಿ. ಇದರಿಂದ ಮೊಸರು ಹುಳಿಯಾಗದೆ ಫ್ರೆಶ್‌ ಆಗಿರುತ್ತದೆ. ಹಿಂಡಿರುವ ಹುಳಿ ನೀರನ್ನು ತರಕಾರಿ ಪದಾರ್ಥಗಳಿಗೆ ಬಳಸಬಹುದು.

ಅಂಗಡಿಯಿಂದ ತಂದ ಮೊಸರು ಬೇಗ ಹುಳಿಯಾಗುವುದರಿಂದ ಆದಷ್ಟು ಮನೆಯಲ್ಲಿಯೇ ಮೊಸರು ಮಾಡುವುದು ಉತ್ತಮ.

ಮನೆಯಲ್ಲಿಯೇ ಮೊಸರು ಮಾಡುವುದಾದರೆ, ಹಾಲು ಸಂಪೂರ್ಣವಾಗಿ ತಣ್ಣಗಾದ ಮೇಲೆ ಕಾಲು ಟೀ ಸ್ಪೂನ್ ನಷ್ಟು ಮಾತ್ರ ಹೆಪ್ಪು ಹಾಕಿ. ಹೆಚ್ಚು ಹೆಪ್ಪು ಹಾಕಿದರೆ ಮೊಸರು ಬೇಗ ಹುಳಿಯಾಗುತ್ತದೆ.