ಬೇಕಾಗುವ ಸಾಮಗ್ರಿಗಳು:

10 ಟೊಮೆಟೊ, 2 ಚಮಚ ಜೀರಿಗೆ, 5 ಚಮಚ ಸಕ್ಕರೆ, 2 ಚಮಚ ಉಪ್ಪು, 10 ಕಾಳಮೆಣಸಿನ ಪುಡಿ (10 ಕಾಳು), 2 ಚಮಚ ಮುಸುಕಿನ ಜೋಳದ ಪುಡಿ(Cornflour Powder), 1 ಚಮಚ ತುಪ್ಪ.

ಮಾಡುವ ಬಗೆ:

RELATED ARTICLES  ಕನಸು -೧

1. ಟೊಮೆಟೊವನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

2. ಜೀರಿಗೆ ಹಾಗೂ ಬೇಯಿಸಿದ ಟೊಮೆಟೊವನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆಮೇಲೆ ಅದನ್ನು ಜರಡಿಗೆ ಹಾಕಿ ಸೋಸಿರಿ.

3. ರಸಕ್ಕೆ ಸಕ್ಕರೆ, ಉಪ್ಪು,ಕಾಳಮೆಣಸಿನ ಪುಡಿ , ಮುಸುಕಿನ ಜೋಳದ ಪುಡಿ , ತುಪ್ಪ ಹಾಕಿ 5 ನಿಮಿಶ ಚೆನ್ನಾಗಿ ಕುದಿಸಿ.

RELATED ARTICLES  ಆರೋಗ್ಯಕರ ನುಗ್ಗೆಸೊಪ್ಪಿನ ಹುಡಿ ಪಲ್ಯ ಮಾಡುವ ವಿಧಾನ

4. ಆಮೇಲೆ ತಯಾರಿಸಿದ ಸೂಪನ್ನು ಕಪ್ ನಲ್ಲಿ ಹಾಕಿ.

5. ಅದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಗೂ ಕಟ್ ಮಾಡಿದ ರಸ್ಕ್ ತುಂಡುಗಳನ್ನು ಹಾಕಿ ಸವಿಯಲು ನೀಡಿ.