ಬೇಕಾಗುವ ವಸ್ತುಗಳು: 1 ಲೀಟರ್ ಹಾಲು, 3-4 ಚಮಚ ಹಾಲಿನ ಪುಡಿ, 2 ಏಲಕ್ಕಿ, ಸ್ವಲ್ಪ ಬಾದಾಮಿ, 1 ಚಮಚ ಸೋಂಪು, 3 ವೀಳ್ಯದೆಲೆ, 1 ಚಮಚ ಗುಲ್ಕನ್, 2 ಚಮಚ ಸಕ್ಕರೆ, 1 ಚಮಚ ಪಿಸ್ತಾ ಚೂರುಗಳು.

ಮಾಡುವ ವಿಧಾನ: ವೀಳ್ಯದೆಲೆಯ ತೊಟ್ಟು, ನಾರು ತೆಗೆದು ಸಣ್ಣಗೆ ಚೂರು ಮಾಡಿ ಕುಟ್ಟಾಣಿಗೆ ಹಾಕಿ ಗುದ್ದಿಡಿ. ನಂತರ ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ ಕುದಿಸಿ. 1\2 ಲೀಟರ್ ಪ್ರಮಾಣಕ್ಕೆ ಹಾಲು ಬಂದಾಗ ಹಾಲಿನ ಪುಡಿ, ಸಕ್ಕರೆ, ಏಲಕ್ಕಿ, ಸೋಂಪು, ಬಾದಾಮಿ, ಪಿಸ್ತಾ ಚೂರು ಹಾಕಿ ಕೆಳಗಿಳಿಸಿ. ಹಾಲು ತಣ್ಣಗಾದ ಮೇಲೆ ಗುಲಕನ್, ವೀಳ್ಯದೆಲೆ ಚೂರು ಹಾಕಿ ಸರಿಯಾಗಿ ಬೆರೆಸಿ. ನಂತರ ಕುಲ್ಫಿ ಮೋಲ್ಡ್ ಯಾ ಗ್ಲಾಸಿಗೆ ಹಾಕಿ ಫ್ರೀಜರ್ ನಲ್ಲಿಡಿ. 2 ಗಂಟೆ ನಂತರ ಐಸ್ ಕ್ರೀಮ್ ಕಡ್ಡಿ ಚುಚ್ಚಿ 6-8 ಗಂಟೆ ಫ್ರಿಜರ್ ನಲ್ಲಿಟ್ಟು ತೆಗೆದರೆ ರುಚಿಯಾದ ವೀಳ್ಯದೆಲೆ ಕುಲ್ಫಿ ಸವಿಯಲು ಸಿದ್ಧ.

RELATED ARTICLES  ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!