ಬೇಕಾಗುವ ಪದಾರ್ಥಗಳು
ತುಪ್ಪ – 2 ಚಮಚ
ಬಾದಾಮಿ – 1 ಬಟ್ಟಲು
ಏಲಕ್ಕಿ ಪುಡಿ – ಅರ್ಧ ಚಮಚ
ಅಕ್ಕಿ- 3 ಚಮಚ
ಹಾಲು – 1 ಲೀಟರ್
ಒಣ ದ್ರಾಕ್ಷಿ- ಅರ್ಧ ಬಟ್ಟಲು
ಸಕ್ಕರೆ – 150 ಗ್ರಾಂ
ಬಾದಾಮಿ – ಉದ್ದುದ್ದಕ್ಕೆ ಕತ್ತರಿಸಿದ್ದು ಒಂದೂವರೆ ಚಮಚ
ಮಾಡುವ ವಿಧಾನ…
ಅಕ್ಕಿಯನ್ನು ಅರ್ಧಗಂಟೆಗಳ ಕಾಲ ನೆನೆಸಬೇಕು. ಒಣಗಿದ ದ್ರಾಕ್ಷಿಯನ್ನು 15 ನಿಮಿಷಗಳ ಕಾಲ ನೆನಸಿಟ್ಟುಕೊಳ್ಳಬೇಕು. ಹಾಲಿನಲ್ಲಿ ಬಾದಾಮಿಯನ್ನು ನೆನೆಸಿ ಸಿಪ್ಪೆ ತೆಗೆದು ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.
ಒಲೆಯ ಮೇಲೆ ಪ್ಯಾನ್ ಇಟ್ಟು ತುಪ್ಪವನ್ನು ಕಾಯಿಸಬೇಕು. ನಂತರ ಕಡಿಮೆ ಉರಿಯಲ್ಲಿ ಬಾದಾಮಿ ಪೇಸ್ಟ್ ಹಾಗಿ 1 ನಿಮಿಷಗಳ ಕಾಲ ಕುದಿಯಲು ಬಿಡಬೇಕು.
ನಂತರ ಹಾಲನ್ನು ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ಬಳಿಕ ನೆನೆಸಿದ ಅಕ್ಕಿಯನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ಹಾಲು ಕೀರು ರೀತಿಯಲ್ಲಿ ಗಟ್ಟಿಯಾದ ಬಳಿಕ ಅದಕ್ಕೆ ಸಕ್ಕರೆಯನ್ನು ಹಾಕಿ ಮಿಶ್ರಣ ಮಾಡಬೇಕು. ನಂತರ ಒಣಗಿದ ದ್ರಾಕ್ಷಿ, ಕತ್ತರಿಸಿದ ಬಾದಾಮಿಯನ್ನು ಹಾಕಿ ಅಲಂಕರಿಸಿದರೆ, ರುಚಿಕರವಾದ ಬಾದಾಮಿ ಕೀರು ಸವಿಯಲು ಸಿದ್ಧ.