ಬೇಕಾಗುವ ಪದಾರ್ಥಗಳು
ಪಾಲಾಕ್ ಸೊಪ್ಪು – 2 ಬಟ್ಟಲು
ಶುಂಠಿ- ಸ್ವಲ್ಪ
ಬೆಳ್ಳುಳ್ಳು – ಸ್ವಲ್ಪ
ಹಸಿಮೆಣಸಿನ ಕಾಯಿ -3-4
ಉಪ್ಪು – ರುಚಿಗೆ ತಕ್ಕಷ್ಟು
ಜೀರಿಗೆ – ಸ್ವಲ್ಪ
ಎಣ್ಣೆ- ಸ್ವಲ್ಪ
ಪನ್ನೀರ್ –
ಕಸೂರಿ ಮೇಥಿ – ಸ್ವಲ್ಪ
ಚಕ್ಕೆ – 1-2
ಲವಂಗ- 2-3
ಏಲಕ್ಕಿ – 2
ಪಲಾವ್ ಎಲೆ – 1-2
ಈರುಳ್ಳಿ – ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಟೊಮೊಟೋ – ಸಣ್ಣಗೆ ಹೆಚ್ಚಿದ್ದು 1 ಬಟ್ಟಲು
ಎಣ್ಣೆ – ಸ್ವಲ್ಪ

RELATED ARTICLES  ಘಮಘಮಿಸುವ ಸಾಂಬಾರ್-ರಸಂ ಪುಡಿಗಳು ಇಲ್ಲಿವೆ ನೋಡಿ.

ಪನ್ನೀರ್ ಮಧ್ಯಮ ಗಾತ್ರದಲ್ಲಿ ಕತ್ತರಿಸಿದ್ದು- 11
ಮಾಡುವ ವಿಧಾನ…
ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಹಾಕಿ 2-5 ನಿಮಿಷ ಬೇಯಿಸಿಕೊಳ್ಳಬೇಕು.
ನಂತರ ಸೊಪ್ಪನ್ನು ತೆಗೆದು ತಣ್ಣನೆಯ ನೀರಿಗೆ ಹಾಕಿ ನಂತರ ಮಿಕ್ಸಿ ಜಾರ್ ಗೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಕಾಯಿ ಹಾಕಿ ರುಬ್ಬಿಕೊಳ್ಳಬೇಕು.
ಒಲೆಯ ಮೇಲೆ ಬಾಣಲೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಪನ್ನೀರ್’ನ್ನು ಕೆಂಪಗೆ ಹುರಿದು ತೆಗೆದಿಟ್ಟುಕೊಳ್ಳಬೇಕು.
ನಂತರ ಇದೇ ಬಾಣಲೆಗೆ 1 ಚಮಚ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ ಕೆಂಪಗಿ ಹುರಿದು, ನಂತರ ಈರುಳ್ಳಿ, ಟೊಮೆಟೋ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು.

RELATED ARTICLES  ರುಚಿಯಾದ ಬಿಸಿಯಾದ ಬಾದುಶ!!

ನಂತರ ರುಬ್ಬಿಟ್ಟಕೊಂಡ ಮಿಶ್ರಣವನ್ನು ಹಾಕಿ ಕುದಿಯಲು ಬಿಡಬೇಕು. ನಂತರ ಪನ್ನೀರ್, ಉಪ್ಪು, ಸ್ವಲ್ಪ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಕುದಿಯಲು ಬಿಟ್ಟರೆ ರುಚಿಕರವಾದ ಪಾಲಾಕ್ ಪನ್ನೀರ್ ಸವಿಯಲು ಸಿದ್ಧ.