ಬೇಕಾಗುವ ಪದಾರ್ಥಗಳು
ಮೈದಾ ಹಿಟ್ಟು – 1 ಬಟ್ಟಲು
ಸಕ್ಕರೆ – ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಬೆಣ್ಣೆ- ಅರ್ಧ ಬಟ್ಟಲು
ಎಣ್ಣೆ – 1 ಚಮಚ
ಮೊಸರು – ಅರ್ಧ ಬಟ್ಟಲು
ಅಡುಗೆ ಸೋಡಾ – ಅರ್ಧ ಚಮಚ
ಬೇಕಿಂಗ್ ಪೌಡರ್ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ…

RELATED ARTICLES  ಆತ್ಮ-ಚಿರಶಾಂತಿಯಿಂದ ಪ್ರಾರಬ್ಧದ ದಿವಸಗಳನ್ನು ಕಳೆಯಬೇಕು.

ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಸಕ್ಕರೆ, ಅಡುಗೆ ಸೋಡಾ, ಉಪ್ಪು, ಬೇಕಿಂಗ್ ಪೌಡರ್, ಮೊಸರು, ಎಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ನೀರು ಹಾಕಿ ಹಿಟ್ಟನ್ನು ತಯಾರಿಸಿ, 10-15 ನಿಮಿಷ ನೆನೆಯಲು ಬಿಡಬೇಕು.

ಬೆಣ್ಣೆಯನ್ನು ಕಾಯಿಸಿ ಅದನ್ನು ಬಟ್ಟಲಿಗೆ ಹಾಕಿಕೊಂಡು, ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಹಿಟ್ಟನ್ನು ಸಣ್ಣಗೆ ಉಂಡೆಗಳನ್ನಾ ಮಾಡಿಕೊಂಡು ಲಟ್ಟಿಸಿಕೊಳ್ಳಬೇಕು. ಒಂದು ಬದಿಯಲ್ಲಿ ನೀರಿನಲ್ಲಿ ಸವರಿಟ್ಟುಕೊಳ್ಳಬೇಕು.

RELATED ARTICLES  ಬಟಾಣಿ ಪರೋಟ

ತವಾವನ್ನು ಒಲೆಯ ಮೇಲಿಟ್ಟು ಅದು ಕಾದ ನಂತರ ಸ್ವಲ್ಪ ಬೆಣ್ಣೆ ಹಾಕಿ ಲಟ್ಟಿಸಿಕೊಂಟ ಹಿಟ್ಟನ್ನು ಹಾಕಿ ಒಂದು ಬದಿಯಲ್ಲಿ ಸುಡಬೇಕು. ಮತ್ತೊಂದು ಬದಿಗೆ ಬೆಣ್ಣೆಯನ್ನು ಹಾಕಿ ಸವರಿ, ಎರಡೂ ಬದಿಯಲ್ಲೂ ಕಂಪಗೆ ಸುಟ್ಟರೆ ರುಚಿಕರವಾದ ಬಟಲ್ ನಾನ್ ಸವಿಯಲು ಸಿದ್ಧ.