ಬೇಕಾಗುವ ಪದಾರ್ಥಗಳು
ಕಡಲೆಹಿಟ್ಟು – ಅರ್ಧ ಬಟ್ಟಲು
ಅಕ್ಕಿಹಿಟ್ಟು- 2 ಚಮಚ
ಜೋಳದ ಹಿಟ್ಟು (ಕಾರ್ನ್’ಫ್ಲೋರ್) – 2 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಅರಿಶಿನ – ಚಿಟಿಕೆ
ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಇಂಗು – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಸೋಡಾ – ಸ್ವಲ್ಪ
ಕಡಲೆಕಾಯಿ ಬೀಜ – ಎರಡು ಬಟ್ಟಲು
ಮಾಡುವ ವಿಧಾನ…
ಮೊದಲು ಪಾತ್ರಯೊಂದಕ್ಕೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ನಂತರ ಖಾರದ ಪುಡಿ, ಅರಿಶಿನ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಇಂಗು, ಉಪ್ಪು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಮಾಡಿಕೊಳ್ಳಬೇಕು. ನಂತರ 1 ಚಮಚ ಎಣ್ಣೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಂದು ಚಮಚದಷ್ಟು ನೀರು ಹಾಕುತ್ತಾ ಮಸಾಲೆ ಕಡಲೆಕಾಯಿ ಬೀಜಕ್ಕೆ ಅಂಟಿಕೊಳ್ಳುವಂತೆ ಮಿಶ್ರಣ ಮಾಡಿ, 5 ನಿಮಿಷ ನೆನೆಯಲು ಬಿಡಬೇಕು.
ನಂತರ ಒಲೆಯ ಮೇಲೆ ಬಾಣಲೆಯಿಟ್ಟು, ಎಣ್ಣೆ ಹಾಕಿ ಕಾಯಲು ಬಿಡಬೇಕು. ಮಸಾಲೆ ಹಾಕಿದ ಕಡಲೆಕಾಯಿ ಬೀಜಕ್ಕೆ ಸ್ವಲ್ಪ ಅಕ್ಕಿಹಿಟ್ಟು ಹಾಕಿ ಮಿಶ್ರಣ ಮಾಡಿ ಅಂಟು ಇಲ್ಲದಂತೆ ಕಡಲೆಕಾಯಿ ಬೀಜ ಬಿಡಿ ಬಿಡಿಯಾಗಿರುವಂತೆ ಮಾಡಿ, ಕಾದ ಎಣ್ಣೆಗೆ ಹಾಕಿ, ಕೆಂಪಗೆ ಕರಿದರೆ, ರುಚಿಕರವಾದ ಮಸಾಲೆ ಕಡಲೆಕಾಯಿ ಬೀಜ ಸವಿಯಲು ಸಿದ್ಧ.