ಬೇಕಾಗುವ ಪದಾರ್ಥಗಳು
ಹಸಿಮೆಣಸಿನ ಕಾಯಿ – 10
ಕಡೆಲಕಾಯಿ ಬೀಜದ ಪುಡಿ
ಅಚ್ಚ ಖಾರದ ಪುಡಿ – ಅರ್ಧ ಚಮಚ
ಅರಿಶಿಣದ ಪುಡಿ – ಕಾಲು ಚಮಚ
ದನಿಯಾ ಪುಡಿ – 1 ಚಮಚ
ಗರಂ ಮಸಾಲಾ – ಅರ್ಧ ಚಮಚ
ಜೀರಿಗೆ ಪುಡಿ- ಅರ್ಧ ಚಮಚ
ಮಾವಿನ ಪುಡಿ (ಆಮ್ ಚೂರ್) – 1 ಚಮಚ
ಸೋಂಪು ಪುಡಿ – ಅರ್ಧ ಚಮಚ
ಇಂಗು – ಚಿಟಿಕೆ
ಉಪ್ಪು – ಅರ್ಧ ಚಮಚ
ಎಣ್ಣೆ – 2-3 ಚಮಚ
ಮಾಡುವ ವಿಧಾನ…
ಮೊದಲು ಮೆಣಸಿನ ಕಾಯಿಗಳನ್ನು ತೊಳೆದು, ನಂತರ ಮಧ್ಯ ಭಾಗದಲ್ಲಿ ಕತ್ತರಿಸಿ ಬೀಜಗಳನ್ನು ತೆಗೆದಿಟ್ಟುಕೊಳ್ಳಬೇಕು.
ನಂತರ ಪಾತ್ರಯೊಂದನ್ನು ತೆಗೆದುಕೊಂಡು ಅದಕ್ಕೆ, ಕಡಲೆಕಾಯಿ ಬೀಜದ ಪುಡಿ, ಅರಿಶಿನ, ಅಚ್ಚ ಖಾರದ ಪುಡಿ, ದನಿಯಾ ಪುಡಿ, ಇಂಗು, ಜೀರಿಗೆ ಪುಡಿ, ಸೋಂಪು ಪುಡಿ, ಉಪ್ಪು, ಗರಂ ಮಸಾಲಾ, ಆಮ್ ಚೂರ್ ಪುಡಿ ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಈ ಮಿಶ್ರಣವನ್ನು ಕತ್ತರಿಸಿಕೊಂಡ ಹಸಿಮೆಣಸಿನ ಕಾಯಿ ಮಧ್ಯೆ ತುಂಬಿಟ್ಟುಕೊಳ್ಳಬೇಕು.
ಪ್ಯಾನ್’ಗೆ ಎಣ್ಣೆ ಹಾಕಿ ಅದು ಕಾದ ನಂತರ ಮಸಾಲೆ ತುಂಬಿದ ಮೆಣಸಿನ ಕಾಯಿಗಳನ್ನು ಹಾಕಬೇಕು. ನಂತರ ಉಳಿದ ಪುಡಿಯನ್ನು ಇದರ ಮೇಲೆ ಹಾಕಿ 5-10 ನಿಮಿಷ ಚೆನ್ನಾಗಿ ಫ್ರೈ ಮಾಡಿದರೆ, ರುಚಿಕರವಾದ ಮಿರ್ಚಿ ಫ್ರೈ ಸವಿಯಲು ಸಿದ್ಧ.