ಅಂಕೋಲಾ : ಶೆಟಗೇರಿಯ ‘ಪ್ರಾರ್ಥನಾ’ಮನೆಯಂಗಳದಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾದ ಡಾ. ಬಾಳಾಸಾಹೇಬ ಲೋಕಾಪುರವರನ್ನು ರೇಣುಕಾ ರಮಾನಂದವರ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.

ರೇಣುಕಾ ರ ಕವನಗಳು ಸವೇಂದನಾ ಶೀಲವಾದವು

‘ರೇಣುಕಾ ರಮಾನಂದವರು ಸೂಕ್ಷ್ಮ ಸಂಗತಿಗಳನ್ನು ಗಂಭೀರವಾಗಿ ಪರಿಗಣ ಸಿ ತುಕದ ಶಬ್ದಗಳನ್ನು ಜೋಡಿಸುವ ಮೂಲಕ ಹೊಸತಲೆಮಾರಿನವರಲ್ಲಿ ಕಾವ್ಯದ ಕುತೂಹಲವನ್ನು ಹುಟ್ಟಿಸುತ್ತಿದ್ದಾರೆ. ಅವನತಿಯ ಅಂಚಿನಲ್ಲಿರುವ ಗ್ರಾಮೀಣ ಶಬ್ದಗಳನ್ನು ಕವನದಲ್ಲಿ ಬಳಸುವ ಮೂಲಕ ಆಧುನಿಕ ನಾಗರಿಕತೆಯ ಜನರಲ್ಲಿ ಅವುಗಳ ಕುರಿತಾದ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾಳೆ. ಭತ್ತದ ಕುರಿತಾದ ಅವರ ಕವನ ಅತ್ಯಂತ ಮನಮುಟ್ಟುವ ಕವನವಾಗಿದ್ದು ಅಂತಹ ಮೌಲಿಕ ಕವನವನ್ನು ಸಂಕಲನ ಒಳಗೊಂಡಿದೆ’.ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಅಭಿಪ್ರಾಯ ಪಟ್ಟರು.
ಅವರು ಶೇಟಗೇರಿಯ ‘ಪ್ರಾರ್ಥನಾ’ಮನೆಯಂಗಳದಲ್ಲಿ ರೇಣುಕಾ ರಮಾನಂದರÀ ಚೊಚ್ಚಲ ಕವನ ಸಂಕಲನ ಹೊಸಪೇಟೆಯ ಪಲ್ಲವ ಪ್ರಕಾಶನ ಪ್ರಕಟಿಸಿರುವ ‘ಮೀನು ಪೇಟೆಯ ತಿರುವು’ ಬಿಡುಗಡೆ ಗೊಳಿಸಿ ಮಾತನಾಡುತ್ತಿದ್ದರು. ಲೇಖಕಿ ಶ್ರೀಮತಿ ಸುನಂದಾ ಕಡಮೆ ಸಂಕಲನದ ಕುರಿತು ಮಾತನಾಡಿದರು. ಕರಾವಳಿ ಮುಂಜಾವಿನ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೆಗುತ್ತಿರವರು ಮಾತನಾಡಿ ಕವನವು ಎಂದಿಗೂ ಸತ್ಯವನ್ನು ಬಿಚ್ಚಿಡಲಾರದು. ಬದುಕಿನ ನೋವು ನಲಿವುಗಳು ಕವನದ ಸ್ವರುಪ ಪಡೆದುಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ರೇಣುಕಾ ರಮಾನಂದ ಜಿಲ್ಲೆಯ ಭರವಸೆಯ ಕವಯತ್ರಿ ಎಂದರು. ಮಾಧ್ಯಮ ಮುಖ್ಯಸ್ಥರಾದ ಜಿ.ಎನ್.ಮೋಹನ ಮಾತನಾಡಿ ಸು.ರಂ. ಎಕ್ಕುಂಡಿಯವರ ಕವನಗಳಲ್ಲಿ ಬಳಕೆಯಾದ ಗ್ರಾಮೀಣ ಸೊಗಡು ರೇಣುಕಾರವರ ಕಾವ್ಯದಲ್ಲಿ ಕಾಣಬಹುದು ಎಂದರು.
ಕವಯತ್ರಿ ಶ್ರೀಮತಿ ರೇಣುಕಾ ರಮಾನಂದ ಮಾತನಾಡಿ ತಮ್ಮ ಓದು ಬರವಣ ಗೆಯ ದಿನಗಳನ್ನು ಮೆಲಕು ಹಾಕಿ ಪ್ರೋತ್ಸಾಹಿಸಿದ ಸರ್ವರನ್ನು ಅಭಿನಂಧಿಸಿದರು.ಇದೇ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಬಾಳಾ ಸಾಹೇಬ ಲೋಕಾಪುರರವರನ್ನು ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು.
ಪುಸ್ತಕವನ್ನು ಪ್ರಕಟಿಸಿದ ಪಲ್ಲವ ಪ್ರಕಾಶನದ ಮಾಲಿಕ ವೆಂಕಟೇಶ ಸಾಂಧರ್ಭಿಕವಾಗಿ ಮಾತನಾಡಿದರು. ಶಿಕ್ಷಕ ರೇಣುಕಾರವರ ಪತಿ ರಮಾನಂದ ನಾಯಕ ಸರ್ವರನ್ನು ಸ್ವಾಗತಿಸಿದರು.ಮಕ್ಕಳಾದ ಪ್ರಾರ್ಥನಾ, ತ್ರಿಭುವನ ಅತಿಥಿಗಳಿಗೆ ಪುಷ್ಪ ಸಮರ್ಪಿಸಿದರು. ಜಯಲಕ್ಷ್ಮೀ ನಾಯಕ, ನೇತ್ರಾವತಿ ನಾಯಕ, ಕು||ಪುರ್ವಿ ಅತಿಥಿಗಳಿಗೆ ಮಾಲಾರ್ಪಣೆ ಮಾಡಿದರು. ಕು|| ಪ್ರಿಯಾಂಜಲಿ ವೈದ್ಯ ಪ್ರಾರ್ಥಿಸಿದರು. ಶಿಕ್ಷಕ ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಉಲ್ಲಾಸ ಹುದ್ದಾರ ಸರ್ವರ ಉಪಕಾರ ಸ್ಮರಿಸಿದರು. ಜಿಲ್ಲೆಯ ಹಾಗೂ ತಾಲೂಕಿನ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದರು.

RELATED ARTICLES  ಇಂಡೋನೇಷ್ಯಾದಲ್ಲಿ ಮಾತೃಭಕ್ತಿ ಬಿಂಬಿಸುವ ಫೋಟೋ!