ಬೇಕಾಗುವ ಪದಾರ್ಥಗಳು…
ಬಟಾಣಿ (ಬೇಯಿಸಿದ್ದು)- 1 ಬಟ್ಟಲು
ಹಸಿಮೆಣಸಿನ ಕಾಯಿ – 2-3
ಶುಂಠಿ- ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಗೋದಿ ಹಿಟ್ಟು – 2 ಬಟ್ಟಲು
ಜೀರಿಗೆ – ಅರ್ಧ ಚಮಚ
ಗರಂ ಮಸಾಲೆ ಪುಡಿ – ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ಅನುಗುಣವಾಗಿ

RELATED ARTICLES  ಕನಸು - ೩

ಮಾಡುವ ವಿಧಾನ…
ಬೇಯಿಸಿ ನೀರು ತೆಗೆದ ಬಟಾಣಿ, ಕೊತ್ತಂಬರಿ ಸೊಪ್ಪು, ಶುಂಠಿ, ಹಸಿಮೆಣಸಿನ ಕಾಯಿ ಹಾಗೂ ನೀರನ್ನು ಮಿಕ್ಸಿ ಜಾರ್’ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಪಾತ್ರಯೊಂದಕ್ಕೆ ಗೋದಿ ಹಿಟ್ಟು, ಜೀರಿಗೆ, ಗಂರಂ ಮಸಾಲೆ ಪುಡಿ, ಉಪ್ಪು ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಂಡು, ನಂತರ ರುಬ್ಬಿಕೊಂಡ ಮಿಶ್ರಣವನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸ್ವಲ್ಪವೇ ನೀರಿ ಹಾಕಿ ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು.
ನಂತರ ಚಪಾತಿಯಾಕಾರಕ್ಕೆ ಲಟ್ಟಿಸಿಕೊಂಡು, ಒಲೆಯ ಮೇಲೆ ಹೆಂಚನ್ನು ಇಟ್ಟು ಎಣ್ಣೆ ಹಾಕಿ ಎರಡೂ ಬದಿಯಲ್ಲೂ ಕೆಂಪಗೆ ಸುಟ್ಟರೆ ರುಚಿಕರವಾದ ಬಟಾಣಿ ಪರೋಟ ಸವಿಯಲು ಸಿದ್ಧ.

RELATED ARTICLES  ರುಚಿ ರುಚಿಯ ಮಜ್ಜಿಗೆ ಹುಳಿ! ಮಾಡೋದು ಹೇಗೆ ಗೊತ್ತಾ?