ತುಂಬಾ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಇದರಿಂದ ಅವರ ಆರೋಗ್ಯ ಎಲ್ಲಿ ಹಾಳಾಗುತ್ತದೆಯೊ ಎಂಬ ಚಿಂತೆ ಪೋಷಕರನ್ನು ಕಾಡುತ್ತಿರುತ್ತದೆ. ಈ ಚಿಂತೆ ಹೋಗಲಾಡಿಸಲು ಸರಳ ಉಪಾಯವೆಂದರೆ ಅಧಿಕ ಪೋಷಕಾಂಶವಿರುವ ಆಹಾರ ಕೊಡುವುದು. ಆವಾಗ ಸ್ವಲ್ಪ ಆಹಾರ ತಿಂದರೂ ಅಧಿಕ ಪೋಷಕಾಂಶ ದೇಹವನ್ನು ಸೇರುತ್ತದೆ. ಅಂತಹ ಆಹಾರಗಳಲ್ಲಿ ಒಂದು ರಾಗಿ-ಅಕ್ಕಿ ದೋಸೆ. ಅದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* 1 ಕಪ್ ರಾಗಿ ಹಿಟ್ಟು
* 1 ಕಪ್ ಅಕ್ಕಿ ಹಿಟ್ಟು
* 1 ಕಪ್ ಉದ್ದಿನ ಬೇಳೆ
* ಒಂದು ಹಿಡಿಯಷ್ಟು ಅವಲಕ್ಕಿ ( 20 ನಿಮಿಷ ನೀರಿನಲ್ಲಿ ನೆನೆ ಹಾಕಿರಬೇಕು)
* ರುಚಿಗೆ ತಕ್ಕ ಉಪ್ಪು
* ಎಣ್ಣೆ

RELATED ARTICLES  ಎಲ್ಲಾ ಗೊತ್ತಿದ್ದೂ ಹುಚ್ಚರಂತೇಕೆ ವರ್ತಿಸಬೇಕು? ಇದು ಶ್ರೀಧರರ ಉತ್ತರ

ದೋಸೆ ಹಿಟ್ಟು:
1. ಉದ್ದಿನ ಬೇಳೆ ಮತ್ತು ಅವಲಕ್ಕಿ ಅರೆಯಬೇಕು.
2.ಒಂದು ಪಾತ್ರೆಯಲ್ಲಿ ಅಕ್ಕಿ ಮತ್ತು ರಾಗಿ ಹಿಟ್ಟು ಹಾಕಿ ಅದಕ್ಕೆ ನುಣ್ಣಗೆ ಅರೆದ ಉದ್ದಿನ ಬೇಳೆ, ಅಲವಕ್ಕಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ , ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಈ ಮಿಶ್ರಣ ತುಂಬಾ ಗಟ್ಟಿಯಾಗಲಿ ಅಥವಾ ತೆಳ್ಳಗಾಗಲಿ ಇರಬಾರದು.
3.ದೋಸೆ ಹಿಟ್ಟು ತಯಾರಾದ ನಂತರ ಪಾತ್ರೆಯ ಬಾಯಿ ಮುಚ್ಚಿ ಬೇಸಿಗೆಯಲ್ಲಿಯಾದರೆ 6-7 ಗಂಟೆ, ಚಳಿಗಾಲದಲ್ಲಿಯಾದರೆ 24 ಗಂಟೆ ಕಾಲ ಇಡಬೇಕು.
ಹೀಗೆ ಕಲೆಸಿಡುವ ಪಾತ್ರೆ ಸ್ವಲ್ಪ ದೊಡ್ಡದಿರಲಿ, ಇಲ್ಲದಿದ್ದರೆ ಹಿಟ್ಟು ಉಬ್ಬಿ ಚೆಲ್ಲಿ ಹೋಗುವುದು.

RELATED ARTICLES  ಎಲ್ಲವೂ ಇದ್ದು ಇಲ್ಲದಂತೆ ಆಗಿರುವ ಬಗೆಗೆ ದೇವತಾ ಸ್ವರೂಪಿ ಶ್ರೀಧರರು ಹೇಳಿದ್ದು ಹೀಗೆ.

ದೋಸೆ:
ನಂತರ ಕಾವಲಿಯನ್ನು ಬಿಸಿ ಮಾಡು ಅದಕ್ಕೆ ಎಣ್ಣೆ ಹಾಕಿ ದೋಸೆ ಹುಯ್ಯಬೇಕು. ದೋಸೆ ಬೆಂದ ನಂತರ ಒಮ್ಮೆ ಮಗುಚಿ ಹಾಕಿ 20 ಸೆಕಂಡ್ ಬಿಸಿ ಮಾಡಿ ನಂತರ ತೆಗೆದರೆ ರುಚಿಕರವಾದ ರಾಗಿ, ಅಕ್ಕಿ ಹಿಟ್ಟಿನ ದೋಸೆ ರೆಡಿ.

ಇದನ್ನು ಸಬ್ಜಿ ಜೊತೆ ತಿನ್ನಲು ಕೊಟ್ಟರೆ ಮಕ್ಕಳಿಗೆ ಇಷ್ಟವಾಗುವುದು. ಇದನ್ನು ಚಟ್ನಿ ಜೊತೆ ಕೂಡ ತಿನ್ನಬಹುದು.