ಅಗತ್ಯವಿರುವ ಸಾಮಾಗ್ರಿಗಳು:
*ಬೀನ್ಸ್- 1 ಕಪ್
*ಕ್ಯಾರೆಟ್ ತುರಿ – 1 ಕಪ್
*ದೊಣ್ಣೆಮೆಣಸು – 1 ಕಪ್
*ಪನೀರ್ – 1 ಕಪ್
*ಹೂಕೋಸು- 1 ಕಪ್
*ಹಸಿರು ಬಟಾಣಿ – 1 ಕಪ್
*ಟೊಮೇಟೊ – 2
*ಗೋಡಂಬಿ – 10 (ಒಂದು ಗಂಟೆ ನೀರಿನಲ್ಲಿ ನೆನೆಸಿದ್ದು)
*ಹಸಿಮೆಣಸು – 4 ರಿಂದ 5
*ಗರಂ ಮಸಾಲೆ ಪುಡಿ – 1 ಚಿಕ್ಕ ಚಮಚ
*ಅರಿಶಿನ – 1 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ – 1 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಎರಡು ಚಮಚ)
*ದಾಲ್ಚಿನ್ನಿ ಎಲೆ- 1 ರಿಂದ 2
*ಜೀರಿಗೆ – 1/2 ಚಿಕ್ಕ ಚಮಚ
*ಹಸಿಶುಂಠಿ ಪೇಸ್ಟ್- 1/2 ಚಿಕ್ಕ ಚಮಚ
*ಬೆಣ್ಣೆ – 1 ದೊಡ್ಡ ಚಮಚ
*ಎಣ್ಣೆ-ಹುರಿಯಲು ಅಗತ್ಯವಿದ್ದಷ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು (ಕಡೆಯ ಅಲಂಕಾರಕ್ಕಾಗಿ)

RELATED ARTICLES  ಸುಲಭವಾಗಿ ಮಾಡಬಹುದು ಈ ರುಚಿ ರುಚಿಯಾದ ‘ಬನಾನ ಫ್ರೆಂಚ್ ಟೋಸ್ಟ್’!

ವಿಧಾನ:
1) ದಪ್ಪತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಬಳಿಕ ಮೊದಲು ಹೂಕೋಸು, ಬಳಿಕ ಪನೀರ್ ನಂತರ ಎಲ್ಲಾ ತರಕಾರಿಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಕೊಂಚ ಕಂದು ಬಣ್ಣ ಬಂದ ಬಳಿಕ ಬೀನ್ಸ್, ಕ್ಯಾರೆಟ್, ದೊಣ್ಣೆಮೆಣಸು ಹಾಕಿ. ಇವು ಕೂಡಲೇ ಬೇಯುತ್ತವೆ. ಬಳಿಕ ಇವನ್ನೆಲ್ಲಾ ಒಂದು ತಟ್ಟೆಯಲ್ಲಿ ಹರಡಿ.
2) ಮಿಕ್ಸಿಯ ಜಾರ್ ನಲ್ಲಿ ಟೊಮೇಟೊಗಳನ್ನು ಹಾಕಿ ನುಣ್ಣಗೆ ಅರಿಯಿರಿ. ಈಗ ನೆನೆಸಿಟ್ಟ ಗೋಡಂಬಿಗಳನ್ನು ಹಾಕಿ ಅರೆಯಿರಿ.
3) ಇನ್ನೊಂದು ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಜೀರಿಗೆ, ದಾಲ್ಚಿನ್ನಿ ಎಲೆ, ಅರಿಶಿನ, ಶುಂಠಿ ಪೇಸ್ಟ್, ಹಸಿಮೆಣಸು ಎಲ್ಲವನ್ನೂ ಹಾಕಿ ಕೊಂಚ ಹುರಿಯಿರಿ. ಬಳಿಕ ಗರಂ ಮಸಾಲಾ, ಕೆಂಪುಮೆಣಸಿನ ಪುಡಿ ಹಾಕಿ ಹುರಿಯಿರಿ. ಬಳಿಕ ಕೊಂಚ ನೀರು ಹಾಕಿ ಚೆನ್ನಾಗಿ ಬಾಡಿಸಿ.
4) ಐದು ನಿಮಿಷಗಳ ಬಳಿಕ ಮಿಕ್ಸಿ ಜಾರ್ ನಲ್ಲಿದ್ದ ಟೊಮೇಟೊ ಮತ್ತು ಗೋಡಂಬಿ ಲೇಪನವನ್ನು ಸೇರಿಸಿ ತಿರುವಿ.
5) ಚೆನ್ನಾಗಿ ಮಿಶ್ರಣಗೊಂಡ ಬಳಿಕ ಹುರಿದಿಟ್ಟ ಎಲ್ಲಾ ತರಕಾರಿಗಳನ್ನು ಒಂದೊಂದಾಗಿ ಸೇರಿಸಿ. ನಂತರ ಬೆಣ್ಣೆ ಮತ್ತು ಉಪ್ಪು ಹಾಕಿ ಮಿಶ್ರಣ ಮಾಡಿ.
6) ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಒಂದು ವೇಳೆ ಚಪಾತಿಗೆ ಬೇಕಿದ್ದರೆ ಕಡಿಮೆ ನೀರು ಹಾಕಿ. ಅನ್ನಕ್ಕಾದರೆ ಕೊಂಚ ಹೆಚ್ಚು ಸೇರಿಸಬಹುದು.
7) ಚೆನ್ನಾಗಿ ಕುದಿಬಂದ ಬಳಿಕ ಇಳಿಸಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಅಲಂಕರಿಸಿ. ಸ್ವಾದಿಷ್ಟ ಕೊಲ್ಲಾಪುರಿ ಕರಿ ಸವಿಯಲು ಸಿದ್ಧ.

RELATED ARTICLES  ರುಚಿಯಾದ ಗೋದಿ ತರಿ(ಕಡಿ) ಪಾಯಸ..