ಬೇಕಾಗುವ ಸಾಮಗ್ರಿಗಳು :
ಅಮೂಲ್ ಹಾಲಿನ ಪುಡಿ ಪೌಡರ್ 3 ಕಪ್
ಚಾಕೋಲೇಟ್ ಪುಡಿ 1 ಕಪ್
ಸಕ್ಕರೆ 2 ಕಪ್
ಬೆಣ್ಣೆ ಅರ್ಧ ಕಪ್

ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ಹಾಲಿನ ಪುಡಿ ಹಾಗೂ ಚಾಕಲೇಟ್ ಪುಡಿಯನ್ನು ಬೆರೆಸಿ.
2. ನಂತರ ದಪ್ಪದ ಕಡಾಯಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ ನೀರು ಬಿಸಿಯಾಗುವಾಗ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. 3. ಪಾಕ ಸ್ವಲ್ಪ ಮಂದವಾಗುತ್ತಾ ಬಂದಾಗ ಬೆಣ್ಣೆ ಹಾಕಿ. ನಂತರ ಬೆರೆಸಿದ ಚಾಕೋಲೇಟ್ ಪುಡಿ ಹಾಗೂ ಹಾಲಿನ ಪುಡಿ ಸೇರಿಸಿ ಕಲಸಿ. ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ.
4. ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಯಲ್ಲಿ ಹಾಕಿ ನಂತರ ತಟ್ಟೆಗೆ ಸುರಿದು ತಣ್ಣಗಾಗಲು ಬಿಡಿ.
5. ನಂತರ ಚಾಕು ತೆಗೆದುಕೊಂಡು ಗಟ್ಟಿಯಾದ ಚಾಕಲೇಟ್ ಅನ್ನು ಚೌಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಚಾಕಲೇಟ್ ರೆಡಿ.

RELATED ARTICLES  ಸವಿ ರುಚಿಯ ನೇಂದ್ರ ಬಾಳೆ ಹಣ್ಣಿನ ಹಲ್ವ!