ಆಲೂಪಲಾವ್ ಮಾಡಲು ಬೇಕಾಗುವ ಸಾಮಗ್ರಿಗಳು:
1. ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ 2
2. ಜೀರಿಗೆ 1 ಚಮಚ
3. ಬಾಸುಮತಿ ಅಕ್ಕಿ 1/2 ಕಪ್
4. ತುಪ್ಪ 2 ಚಮಚ
5. ಒಂದು ಬೆಳ್ಳುಳ್ಳಿ ಮತ್ತು 1 ಪಲಾವ್ ಎಲೆ
6. 1/2 ಚಮಚ ಕಲ್ಲುಪ್ಪು
7. ಹಸಿ ಏಲಕ್ಕಿ 1
8. ದಾಲ್ಚಿನ್ನಿ ಸ್ವಲ್ಪ
9. ಶುಂಠಿ ಪೇಸ್ಟ್ 1 ಚಮಚ
10.4-5 ಪುದೀನ ಎಲೆ
11.ಹಸಿಮೆಣಸು 2
12. ಕೊತ್ತಂಬರಿ ಅಲಂಕಾರಕ್ಕೆ
13. ಕೆಂಪು ಮೆಣಸಿನ ಪುಡಿ 1/2 ಚಮಚ
14. ಸ್ವಲ್ಪ ತೆಂಗಿನ ತುರಿ
15. ಹುಣಸೆ ಹುಳಿ ರಸ 1 ಚಮಚ
16. ನೀರು 3 ಕಪ್
ಮಾಡುವ ವಿಧಾನ:

RELATED ARTICLES  ಶಂಕರಪೋಳೆ ಮಾಡುವುದು ಎಷ್ಟು ಸುಲಭ ಅಂತೀರಾ!

1. ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನ ಸ್ವಪ್ಪುನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ.
2. ಅದರಲ್ಲಿ ಜೀರಿಗೆ, ಶುಂಠಿ, ಪಲಾವ್ ಎಲೆ ಹಾಕಿ ತುಪ್ಪದಲ್ಲಿ ಹುರಿಯಿರಿ.
3. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವ ಲ್ಪ ಹೊತ್ತು ಹುರಿಯಿರಿ.
4. ಈಗ ನೀರು ಹಾಕಿ , ಕತ್ತರಿಸಿದ ಆಲೂಗೆಡ್ಡೆ , ಮೆಣಸಿನ ಪುಡಿ, ಉಪ್ಪು ಕಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂಪಲಾವ್ ರೆಡಿ.
5. ಆಲೂಪಲಾವ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಿಸಿಬಿಸಿ ಇರುವಾಗಲೇ ತಿನ್ನಲು ನೀಡಿ.

RELATED ARTICLES  ಸಲಾಡ್‌ ಎಂಬ ಸವಿರುಚಿ : ತಯಾರಿಸಿ ಸವಿಯೋಣ ಬನ್ನಿ