ಅಗತ್ಯವಿರುವ ಸಾಮಾಗ್ರಿಗಳು:
*ಕಡ್ಲೆಹಿಟ್ಟು: ಒಂದು ಕಪ್
*ಸಕ್ಕರೆ: ಎರಡು ಕಪ್
*ಹಾಲು ಒಂದು ಕಪ್
*ತುಪ್ಪ: ಒಂದು ಕಪ್
*ಕಾಯಿತುರಿ: ಒಂದು ಕಪ್
*ಬಾದಾಮಿ: ಒಂದು ಕಪ್
ತಯಾರಿಕಾ ವಿಧಾನ:
1) ಒಂದು ದಪ್ಪತಳದ ಪಾತ್ರೆ ಅಥವಾ ಕಾವಲಿಯಲ್ಲಿ ಕಾಲು ಚಿಕ್ಕಚಮಚ ತುಪ್ಪ ಹಾಕಿ, ಕರಗಿದ ಬಳಿಕ ಕಡ್ಲೆಹಿಟ್ಟು ಹಾಕಿ ಚಿಕ್ಕ ಉರಿಯಲ್ಲಿ ಹುರಿಯಿರಿ. ನಯವಾಗಿ ತಿರುವುತ್ತಾ ಕೊಂಚ ಕಂದುಬಣ್ಣ ಬರುತ್ತಿದ್ದಂತೆ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
2) ಹಾಲು ಚೆನ್ನಾಗಿ ಮಿಶ್ರಣವಾದ ಬಳಿಕ ಸಕ್ಕರೆ ಹಾಕಿ ಸುಮಾರು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಅಥವಾ ಸಕ್ಕರೆ ಪೂರ್ತಿಯಾಗಿ ಹಾಲಿನಲ್ಲಿ ಮಿಶ್ರಣಗೊಳ್ಳುವವರೆಗೆ ತಿರುವುತ್ತಾ ಇರಿ.
3) ಇನ್ನು ಉಳಿದ ತುಪ್ಪ ಮತ್ತು ಕಾಯಿತುರಿ ಹಾಕಿ ಮಿಶ್ರಣ ಮಾಡಿ
4) ತದನಂತರ ಈ ಮಿಶ್ರಣವನ್ನು ಚಿಕ್ಕ ಉರಿಯಲ್ಲಿ ಸುಮಾರು ಹತ್ತು ನಿಮಿಷ ತಿರುವಿ. ಈ ಮಿಶ್ರಣ ಜೇನಿನಷ್ಟು ಗಾಢವಾದ ಬಳಿಕ ಇನ್ನೊಂದು ಪಾತ್ರೆಗೆ ಸುರಿದು ತಣಿಯಲು ಬಿಡಿ
5) ಸುಮಾರು ಅರ್ಧ ಗಂಟೆಯ ಬಳಿಕ ಚಾಕು ಉಪಯೋಗಿಸಿ ನಿಮಗೆ ಸೂಕ್ತವೆನಿಸಿದ ಆಕೃತಿಯಲ್ಲಿ ಕತ್ತರಿಸಿ. ಪ್ರತಿ ತುಂಡಿನ ಮೇಲೆ ಒಂದು ಬಾದಾಮಿಯನ್ನು ಹುದುಗಿಸಿ. ಇದನ್ನು ಪೂರ್ಣವಾಗಿ ತಣಿಯಲು ಬಿಡಿ. ಇದಕ್ಕೆ ಸುಮಾರು ಆರರಿಂದ ಏಳು ಗಂಟೆ ಬೇಕು.
6) ಹಬ್ಬದ ಸಂತೋಷದ ಸಮಯದಲ್ಲಿ ಈ ಬರ್ಫಿಯನ್ನು ಸ್ನೇಹಿತರು, ಕುಟುಂಬದವರೊಂದಿಗೆ ಹಂಚಿ ಸಂತೋಷವನ್ನು ಹೆಚ್ಚಿಸಿ.