ಒಂದೂವರೆ ಕಪ್ ಮೆಂತೆ ಸೊಪ್ಪು (ಚೆನ್ನಾಗಿ ತೊಳೆದು ಕತ್ತರಿಸಿದ್ದು)
* ಸಿಪ್ಪೆ ಸುಲಿದು ಚಿಕ್ಕ ತುಂಡುಗಳಾಗಿ ಕತ್ತರಿಸಿದ ಆಲೂಗೆಡ್ಡೆ
* ಟೊಮೆಟೊ 1 (ಕತ್ತರಿಸಿದ್ದು)
* 1-2 ಬೆಳ್ಳುಳಿಯ ಎಸಳು
* ರುಚಿಗೆ ತಕ್ಕ ಉಪ್ಪು
* 1/4 ಚಮಚ ಅರಿಶಿಣ ಪುಡಿ
* ಕೆಂಪು ಮೆಣಸಿನ ಪುಡಿ 1/2 ಚಮಚ
* 2-3 ಒಣ ಮೆಣಸಿನಕಾಯಿ
* 2-3 ಚಮಚ ವನಸ್ಪತಿ
ತಯಾರಿಸುವ ವಿಧಾನ:
1. ವನಸ್ಪತಿಯನ್ನು ಪಾತ್ರೆಗೆ ಹಾಕಿ ಬಿಸಿ ಮಾಡಿ ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಿಸಿಮಾಡಬೇಕು. ನಂತರ ಜೀರಿಗೆ ಮತ್ತು ಚಿಕ್ಕ ತುಂಡುಗಳಾಗಿ ಮಾಡಿ ಒಣಮೆಣಸಿನ ಕಾಯಿ ಹಾಕಬೇಕು.
2. ನಂತರ ಅರಿಶಿಣ, ಕೆಂಪು ಮೆಣಸಿನ ಪುಡಿ, ಟೊಮೆಟೊ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಟೊಮೆಟೊ ಮೆತ್ತಾಗುವವರೆಗೆ ಹುರಿಯಬೇಕು.
3. ಈಗ ಆಲೂಗೆಡ್ಡೆಯನ್ನು ಹಾಕಿ , ಆಲೂಗೆಡ್ಡೆ ಅರ್ಧ ಬೇಯುವವರೆಗೆ ಬೇಯಿಸಬೇಕು, ನಂತರ ಇದಕ್ಕೆ ಮೆಂತೆ ಸೊಪ್ಪು ಹಾಕಿ ಮಿಶ್ರ ಮಾಡಿ ಬೇಯಿಸಬೇಕು. ಪಲ್ಯದಲ್ಲಿರುವ ನೀರೆಲ್ಲಾ ಆವಿಯಾಗುವವರೆಗೆ ಬೇಯಿಸಬೇಕು( ಸೊಪ್ಪು ಹಾಕಿದರೆ ಪ್ರತ್ಯೇಕವಾಗಿ ನೀರು ಹಾಕುವ ಅವಶ್ಯಕತೆಯಿಲ್ಲ, ಸೊಪ್ಪಿನಲ್ಲಿರುವ ನೀರಿನಂಶವೆ ಸಾಕಾಗುವುದು). ನಂತರ ಉರಿಯಿಂದ ಇಳಿಸಿದರೆ ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ ರೆಡಿ.
ಚಪಾತಿ ಅಥವಾ ಪರೋಟವನ್ನು ಈ ಪಲ್ಯದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.