ಎಗ್ ಬುರ್ಜಿ ಮಾಡುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿರುತ್ತದೆ. ಅದರೆ ಪನ್ನೀರ್ ಬುರ್ಜಿ ಕೇಳಿರುವುದು ತುಂಬಾ ವಿರಳ. ಏಕೆಂದರೆ ಇದು ಉತ್ತರ ಭಾರತದ ಕಡೆಯ ಅಡುಗೆಯಾಗಿದೆ. ಈ ಪನ್ನಿರ್ ಬುರ್ಜಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವ ಸರಳ ವಿಧಾನ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 200 ಗ್ರಾಂ ಪನ್ನೀರ್
* 1 ಚಮಚ ಎಣ್ಣೆ
* 1/4 ಚಮಚ ಜೀರಿಗೆ
* ಖಾರಕ್ಕೆ ತಕ್ಕ ಹಸಿಮೆಣಸಿನ ಕಾಯಿ
* 1 ಈರುಳ್ಳಿ
* 1/4 ಚಮಚ ಅರಿಶಿಣ
* 1/2 ಚಮಚ ಗರಂ ಮಸಾಲ ಪುಡಿ
* ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಟೊಮೆಟೊ 1
* ರುಚಿಗೆ ತಕ್ಕ ಉಪ್ಪು

RELATED ARTICLES  ಕೇರಳ ಶೈಲಿಯ ತೋರನ್.

ತಯಾರಿಸುವ ವಿಧಾನ:

1. ಈರುಳ್ಳಿ, ಟೊಮೆಟೊ ಮತ್ತು ಹಸಿಮೆಣಸಿನಕಾಯಿಯನ್ನು ಕತ್ತರಿಸಬೇಕು.

2. ಈಗ ಬಾಣಲೆಯನ್ನು ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ, ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

3. ಈಗ ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು.

RELATED ARTICLES  ‘ಈ ಜಗತ್ತಿನಲ್ಲಿ ಸರ್ವಸುಖಿಯೆಂಬವರು ಯಾರಿದ್ದಾರೆ?’

4. ಈಗ ಅರಿಶಿಣ ಪುಡಿ, ಗರಂ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು, ಸ್ವಲ್ಪ ನೀರು ಹಾಕಿ ಸೌಟ್ ನಿಂದ ಚೆನ್ನಾಗಿ ಆಡಿಸಬೇಕು.

5. ಈಗ ಕತ್ತರಿಸಿದ ಪನ್ನೀರ್ ಹಾಕಿ 5 ನಿಮಿಷ ಹುರಿದರೆ ಪನ್ನೀರ್ ಮಸಾಲೆ ಜೊತೆ ಚೆನ್ನಾಗಿ ಮಿಶ್ರವಾಗುತ್ತದೆ. ಈಗ ತಯಾರಾದ ಪನ್ನೀರ್ ಬುರ್ಜಿಯನ್ನು ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಬುರ್ಜಿ ರೆಡಿ.

ಇದನ್ನು ರೊಟ್ಟಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.