ಹೆಚ್ಚೇನೂ ತರಕಾರಿ ಬಳಸದೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಆರೋಗ್ಯಕ್ಕೆ ಹಿತಕರವಾದ ಜೀರಾ ರೈಸ್ ಮಾಡುವ ಸರಳ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
ಅಕ್ಕಿ, ಈರುಳ್ಳಿ, ಜೀರಿಗೆ ಪೌಡರ್, ಜೀರಿಗೆ, ತುಪ್ಪ, ಗೋಡಂಬಿ, ಉಪ್ಪು
ತಯಾರಿಸುವ ವಿಧಾನ:

RELATED ARTICLES  ತಂದೂರಿ ಗೋಬಿ

ಅಕ್ಕಿಯನ್ನು 15 ನಿಮಿಷ ನೆನೆಸಿಟ್ಟು, ಚೆನ್ನಾಗಿ ತೊಳೆದುಕೊಂಡು ಉದುರುದುರಾದ ಅನ್ನವನ್ನು ಸಿದ್ಧಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ತುಪ್ಪ, ಜೀರಿಗೆ, ಹೆಚ್ಚಿದ ಈರುಳ್ಳಿ, ಗೋಡಂಬಿ ಮತ್ತು ಸ್ವಲ್ಪ ಜೀರಿಗೆ ಪೌಡರ್ ಹಾಕಿ ಚೆನ್ನಾಗಿ ಬಾಡಿಸಿ. ಮಾಡಿಟ್ಟುಕೊಂಡ ಅನ್ನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿದರೆ ಪರಿಮಳಯುಕ್ತ ಜೀರಾ ರೈಸ್ ಸವಿಯಲು ಸಿದ್ಧ.

RELATED ARTICLES  ಡ್ರೈ ಫ್ರೂಟ್ಸ್‌ ಜಾಮೂನ್‌